ವೆಲ್ಲೂರು:ಹೆತ್ತ ತಂದೆಯೊಬ್ಬ ಹಸೂಗೂಸಿನ ತೋಳು ಮತ್ತು ಕುತ್ತಿಗೆಗೆ ಕೊಯ್ದಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.ಇದನ್ನೂ ಓದಿ:ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ; ಆಗಸ್ಟ್​ 2ರಿಂದ ಅರ್ಜಿಗಳ ವಿಚಾರಣೆ: ಸುಪ್ರೀಂ ಕೋರ್ಟ್​ಆರೋಪಿಯನ್ನು ಮಣಿಕಂದನ್(29) ಎಂದು ಗುರುತಿಸಲಾಗಿದ್ದು, ಆತ ತಾಂಬರಂನಲ್ಲಿ ವಾಯುಪಡೆಯ ಕ್ಯಾಂಟೀನ್‌ನ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ. ಆತ ಕಳೆದ ವರ್ಷ ಹೇಮಾ (21) ಎಂಬಾಕೆಯನ್ನು ವಿವಾಹವಾಗಿದ್ದು, ಇತ್ತೀಚಿಗೆ ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಳು.ವೆಲ್ಲೂರಿನ ಅನೈಕಟ್ ತಾಲೂಕಿನ ದೇವಿ ನೆಲ್ಲಿಕುಳಂ ಪ್ರದೇಶದಲ್ಲಿ ದಂಪಿಗಳ ಕುಟುಂಬ ವಾಸವಾಗಿದ್ದು, ತನ್ನ ಕೆಲಸದ ಕಾರಣದಿಂದಾಗಿ ಮಣಿಕಂದನ್ ತಿಂಗಳಿಗೊಮ್ಮೆ ಹೆಂಡತಿಯನ್ನು ಭೇಟಿಯಾಗುತ್ತಿದ್ದ. ಆದರೆ ಈ ನಡುವೆ ದಂಪತಿಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ಪತಿ ಪತ್ನಿಯ ಮೇಲೆ ಅನುಮಾನಪಡುತ್ತಿದ್ದ. ಸೋಮವಾರ ಪತಿ-ಪತ್ನಿ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಮಣಿಕಂದನ್ ಹೇಮಾಳ ಮುಂದೆಯೇ ಚಾಕುವಿನಿಂದ ಹಸುಗೂಸಿನ ಮೃದುವಾದ ಬಲಗೈ ಮತ್ತು ಕುತ್ತಿಗೆಗೆ ಕತ್ತರಿಸಿ ಗಾಯಗೊಳಿಸಿದ್ದಾನೆ.ಇದನ್ನೂ ಓದಿ:3 ನಿಮಿಷದ ಅಭಿನಯಕ್ಕಾಗಿ 3 ಕೋಟಿ ರೂ. ಸಂಭಾವನೆ ಪಡೆದ ನಟಿ..?ಕೂಡಲೇ, ಹೇಮಾ ತನ್ನ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದು, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿನ ಕುತ್ತಿಗೆ ಮತ್ತು ಬಲಗೈಯಲ್ಲಿ ಗಾಯಗಳಾಗಿವೆ. ಗಾಯಗಳು ಆಳವಾಗಿಲ್ಲವಾದರೂ ಕೆಲವು ಕಡೆ ಹೊಲಿಗೆಗಳ ಅಗತ್ಯವಿದೆ. ಮಗುವಿನ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.ಪತ್ನಿಯ ದೂರಿನ ಆಧಾರದ ಮೇಲೆ ಮಣಿಕಂದನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಮಣಿಕಂದನ್​ಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eighteen =
Remember me
