ನ್ಯೂಯಾರ್ಕ್:ಅಲ್ಬನಿ ನಗರದ ಕನ್ನಡ ಸಂಘದ ಸದಸ್ಯರು ಮೋರೋ ಸ್ಟೇಟ್ ಪಾರ್ಕ್​ನಲ್ಲಿ ಜೂನ್ 18ರಂದು ‘ಫಾದರ್ಸ್ ಡೇ’ ಆಚರಿಸಿದರು. ಈ ಹಿನ್ನೆಲೆಯಲ್ಲಿ ಎಲ್ಲರೂ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇದೇ ವೇಳೆ ಮಕ್ಕಳು ತಮ್ಮ ತಂದೆಗೆ ನೀಡಿರುವಂತಹ ಧ್ವನಿ ಸಂದೇಶಗಳನ್ನು ಬಿತ್ತರಿಸಲಾಯಿತು.
‘ಫಾದರ್ಸ್ ಡೇ’ ಆಚರಣೆ ಹಿನ್ನೆಲೆ ಮನರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ಅಲ್ಬನಿ ನಗರ ಕನ್ನಡ ಸಂಘದ ಸದಸ್ಯರು ವಾಲಿಬಾಲ್, ಕ್ರಿಕೆಟ್, ಲೇಮನ್ ಸ್ಪೂನ್ ರೇಸ್, ಬಿಂಗೋ ಲಾಟರಿ ನಂತಹ ಆಟಗಳಲ್ಲಿ ಪಾಲ್ಗೊಂಡರು. ಬಳಿಕ ಆಲ್ಬನಿ ಕನ್ನಡ ಸಂಘದ ಕಾರ್ಯಕಾರಿಣಿ ಸಮಿತಿಯ 11 ಜನ ಸದಸ್ಯರನ್ನು ಎಲ್ಲರಿಗೂ ಪರಿಚಯಿಸಲಾಯಿತು.
ಈ ಸಂದರ್ಭದಲ್ಲಿ ಆಲ್ಬನಿ ಕನ್ನಡ ಸಂಘದ ಅಧ್ಯಕ್ಷೆ ಸುನಿತಾ ವಿಜಯ್, ಬೆಂಕಿ ಬಸಣ್ಣ, ಶ್ರೀಕುಮಾರ್, ಮಮತಾ ಕಿರಣ್, ಉಮಾ ಶ್ರೀನಿವಾಸ್ ಸೇರಿದಂತೆ ಸಂಘದ ಸದಸ್ಯರು ‘ಫಾದರ್ಸ್ ಡೇ’ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
