ನವದೆಹಲಿ:ಕರೊನಾ ವೈರಸ್​ನಿಂದ ಕಾಪಾಡಿಕೊಳ್ಳಲು ಶುಚಿತ್ವಕ್ಕೆ ಹೆಚ್ಚಿನ ಗಮನ ಕೊಡಲೇಬೇಕು. ಅದರಲ್ಲೂ ಆಗಾಗ ಕೈಗಳನ್ನು ಸ್ಯಾನಿಟೈಸರ್​ನಿಂದ (ಸೋಂಕು ನಿವಾರಕ) ಶುಚಿಗೊಳಿಸಿಕೊಳ್ಳಬೇಕು ಎಮದು ವೈದ್ಯರೇ ಹೇಳುತ್ತಾರೆ. ಹೀಗಾಗಿ ಎಲ್ಲ ಮನೆಗಳಲ್ಲೂ ಈಗ ಸ್ಯಾನಿಟೈಸರ್​ ಬಳಕೆ ಮಾಡಲಾಗುತ್ತಿದೆ.
ಆದರೆ, ಸೋಂಕು ನಿವಾರಕಗಳು ಸಾಮಾನ್ಯವಾಗಿ ಅಲ್ಕೋಹಾಲ್​ ಆಧಾರಿತವಾಗಿರುತ್ತವೆ. ಹೀಗಾಗಿಯೇ ಧಾರ್ಮಿಕ ಮುಖಂಡರು ದೇಗುಲ, ಧಾರ್ಮಿಕ ಸ್ಥಳಗಳಲ್ಲಿ ಇದರ ಬಳಕೆಗೆ ವಿರೋಧಿಸಿದ್ದು ಬೇರೆ ಮಾತು.
ಈ ಸ್ಯಾನಿಟೈಸರ್​ಗಳ ಬಳಕೆ ಕೂಡ ಅಪಾಯಕಾರಿಯಾಗಬಲ್ಲುದು ಎಂಬ ವಿಷಯವೀಗ ಕೊಂಚ ಆತಂಕಕ್ಕೆ ಕಾರಣವಾಗಿದೆ. ಅಮೆರಿಕ ಫುಡ್​ ಆ್ಯಂಡ್​ ಡ್ರಗ್​ ಆ್ಯಡ್ಮಿನಿಸ್ಟ್ರೇಷನ್​ (ಎಫ್​ಡಿಎ) ವಿಭಾಗ ಇಂಥದ್ದೊಂದು ಎಚ್ಚರಿಕೆಯನ್ನು ನೀಡಿದೆ. ಜತೆಗೆ, ಯಾವುದನ್ನು ಬಳಸಬಾರದು ಎಂಬುದಕ್ಕೆ 75 ಉತ್ಪನ್ನಗಳ ವಿವರವನ್ನು ನೀಡಿದೆ.
ಇದನ್ನೂ ಓದಿ;ಹುಡುಗಿಯರೇ ಹುಷಾರ್​..! ಪೊಲೀಸ್​ ಬಲೆಗೆ ಬಿದ್ದವನದ್ದು ಭಯಂಕರ ಇತಿಹಾಸ
ಎಫ್​ಡಿಎ ಪ್ರಕಾರ ಸ್ಯಾನಿಟೈಸರ್​ಗಳಲ್ಲಿ ಮೆಥನಾಲ್​ ಇರಕೂಡದು. ಇದು ಚರ್ಮದ ಮೂಲಕ ದೇಹ ಸೇರಿದರೆ ವಿಷಕಾರಿಯಾಗಬಲ್ಲುದು. ನೇರವಾಗಿ ದೇಹಕ್ಕೆ ಸೇರಿದರೆ ಮಾರಣಾಂತಿಕವಾಗಿ ಪರಿಣಮಿಸಬಲ್ಲುದು ಎಂದು ಎಚ್ಚರಿಕೆ ನೀಡಿದೆ. ಮೆಥನಾಲ್​ಅನ್ನು ವುಡ್​ ಅಲ್ಕೋಹಾಲ್​ ಎಂದೇ ಕರೆಯಲಾಗುತ್ತದೆ.
ಮೆಥನಾಲ್​ ದೇಹಕ್ಕೆ ಸೇರಿದರೆ ಗಂಭೀರ ಅನಾರೋಗ್ಯ, ಅಂಧತ್ವ ಹಾಗೂ ಸಾವು ಸಂಭವಿಸಿದ್ದನ್ನು ಎಫ್​ಡಿಎ ಉಲ್ಲೇಖಿಸಿದೆ. ಕೆಲ ಉತ್ಪನ್ನಗಳ ಮಾರಾಟಕ್ಕೆ ಎಫ್​ಡಿಎ ನಿರ್ಬಂಧ ವಿಧಿಸಿದೆ. ಮಾರಾಟವನ್ನು ಹಿಂಪಡೆಯುವಂತೆಯೂ ಸೂಚಿಸಿದೆ. ಈ ಉತ್ಪನ್ನಗಳನ್ನು ಮೆಕ್ಸಿಕೋದಲ್ಲಿ ತಯಾರಿಸಿದ್ದು ಎನ್ನಲಾಗಿದೆ.
ಇದನ್ನೂ ಓದಿ;ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು 35 ಕೋಟಿ ರೂ. ಆಫರ್​..!
ಮೆಥನಾಲ್​ ಅಂಶವಿರುವ ಸ್ಯಾನಿಟೈಸರ್​ಗಳು ಬಳಕೆಗೆ ಅರ್ಹವಲ್ಲ. ಇದು ವಿಷಕಾರಿ ಗುಣಗಳನ್ನು ಹೊಂದಿದೆ. ಇಂಥ ಸ್ಯಾನಿಟೈಸರ್​ಗಳನ್ನು ಬಳಸಿದ್ದರೆ, ಮೆಥನಾಲ್​ ಅಂಶ ದೇಹ ಸೇರುವುದನ್ನು ನಿವಾರಿಸಿಕೊಳ್ಳಲು ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದೂ ಹೇಳಿದೆ.
ಆಕ್ಸ್​ಫರ್ಡ್​ ವಿವಿ ಕರೊನಾ ಲಸಿಕೆ ಫಲಿತಾಂಶ ಪ್ರಕಟ; ಹೊಸ ಭರವಸೆ ಮೂಡಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + thirteen =
Remember me
