ಬೆಂಗಳೂರು:ರಷ್ಯಾ-ಯೂಕ್ರೇನ್ ನಡುವಿನ ಯುದ್ಧದಿಂದಾಗಿ ಉಂಟಾಗಿರುವ ಆತಂಕ ಕರ್ನಾಟಕಕ್ಕೂ ವ್ಯಾಪಿಸಿದೆ. ಹಾಗಂತ ಇದು ಯುದ್ಧದ ನೇರ ಪರಿಣಾಮದ ಭಯವಲ್ಲ, ಬದಲಿಗೆ ಪರೋಕ್ಷ ಪರಿಣಾಮದ ಭೀತಿ. ಅರ್ಥಾತ್​, ಯೂಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ರಾಜ್ಯದಲ್ಲಿನ ಯುವಕರು ಅಲ್ಲಿ ಯುದ್ಧಾತಂಕದ ವಾತಾವರಣದಲ್ಲಿ ಸಿಲುಕಿಕೊಂಡಿರುವುದೇ ಕರ್ನಾಟಕದಲ್ಲಿ ಇರುವವರ ಭೀತಿಗೆ ಕಾರಣ.
ಶಿವಮೊಗ್ಗ, ಬಾಗಲಕೋಟೆ, ಕೊಪ್ಪಳ, ರಾಮನಗರ, ಧಾರವಾಡ ಜಿಲ್ಲೆಗಳಲ್ಲಿನ ಯುವಕ-ಯುವತಿಯರು ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ಇಬ್ಬರು ಯೂಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾರೆ. ಶಿವಮೊಗ್ಗ ಹೊರವಲಯದ ಸಂತೆ ಕಡೂರು ಗ್ರಾಮದ ವಿಶ್ವನಾಥ್ ಹಾಗೂ ದೇವಕಿ ಅವರ ಪುತ್ರ ತೇಜಸ್ ಯೂಕ್ರೇನ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದು, ಆತಂಕದ ವಾತಾವರಣದಲ್ಲಿದ್ದಾರೆ. ತೇಜಸ್​ನನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಪಾಲಕರು ಮನವಿ ಮಾಡಿಕೊಂಡಿದ್ದಾರೆ. ತೇಜಸ್ ಸೇರಿದಂತೆ ಕರ್ನಾಟಕದಿಂದ ಯೂಕ್ರೇನ್​​ಗೆ ತೆರಳಿದ ಎಲ್ಲರನ್ನೂ ಸುರಕ್ಷಿತವಾಗಿ ಕರೆಸಿಕೊಳ್ಳುತ್ತೇವೆ ಎಂದು ಗೃಹ ಸಚಿವರು ಅಭಯ ನೀಡಿದ್ದಾರೆ.
ಎರಡನೇ ವರ್ಷದ ವ್ಯಾಸಂಗ ಮಾಡುತ್ತಿರುವ ತೇಜಸ್ ಯುದ್ಧ ಭೀತಿಯ ಹಿನ್ನೆಲೆಯಲ್ಲಿ ಮನೆಯವರಿಗೆ ಕರೆ ಮಾಡಿ ಯಾವುದೇ ಅಪಾಯವಿಲ್ಲ ಎಂದು ಧೈರ್ಯ ಹೇಳಿದ್ದು, ವಿಮಾನ ಹಾರಾಟ ಆರಂಭವಾದಾಗ ವಾಪಸಾಗುವೆ ಎಂದು ತಿಳಿಸಿದ್ದಾರೆ. ಶಿವಮೊಗ್ಗ ಮೂಲದ ಯುವತಿ ಅಕ್ಷತಾ ಯೂಕ್ರೇನ್​ನಲ್ಲಿ ಉದ್ಯೋಗದಲ್ಲಿದ್ದು ಅವರ ವಿಳಾಸ ಪತ್ತೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಬಾಗಲಕೋಟೆ ಮೂಲದ ಅಪೂರ್ವ ಎಸ್​. ಕದಂಪುರ ಯೂಕ್ರೇನ್​ನ ಕಾರ್ಕೇವ್​ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡುತ್ತಿದ್ದು, ಅವರು ಕೂಡ ಈಗ ಅಲ್ಲಿ ಸಿಲುಕಿಕೊಂಡಂತಾಗಿದ್ದಾರೆ. ಅಪೂರ್ವಾ ತಂದೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿನ ಡೆಪ್ಯುಟಿ ಚೀಫ್ ಫಾರ್ಮಸಿ ಆಫೀಸರ್​ ಸಿದ್ದಲಿಂಗಪ್ಪ ಕದಂಪುರ ಅವರು, ಮಗಳ ಜತೆ ಮಾತನಾಡಿದ್ದು, ಆಕೆ ಅಲ್ಲಿ ಸೇಫ್ ಆಗಿರುವುದಾಗಿ ಹೇಳಿದ್ದಾಳೆ ಎಂಬುದಾಗಿ ತಿಳಿಸಿದ್ದಾರೆ. ಸದ್ಯಕ್ಕೆ ಹಾಸ್ಟೆಲ್​ನಲ್ಲೇ ಇರುವಂತೆ ಉಕ್ರೇನ್​ ಸರ್ಕಾರ ತಿಳಿಸಿದ್ದಾಗಿ ಆಕೆ ತಂದೆಗೆ ಮಾಹಿತಿ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯ ಅಮೋಘಾ ಚೌಗಲಾ ಮತ್ತು ಪ್ರಿಯಾ ನಿಡಗುಂದಿ ಯೂಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯಕ್ಕೆ ಮರಳಲು ಈ ವಿದ್ಯಾರ್ಥಿನಿಯರು ಏರ್ ಟಿಕೆಟ್ ಬುಕ್​ ಮಾಡಿದ್ದು, ಪಾಲಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಕಲ್ಲೂರ ಗ್ರಾಮದ ಸಂಗಮೇಶ ಸೊಪ್ಪಿಮಠ‌ ಯೂಕ್ರೇನ್​ನಲ್ಲಿನ ವಿಎನ್​ಎಂಯು ಯೂನಿವರ್ಸಿಟಿಯಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದು, ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಮನೆಯವರಿಗೆ ಮಾಹಿತಿ ರವಾನಿಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದ ತಿಮ್ಮಸಂದ್ರ ಗ್ರಾಮದ ನಿವೇದಿತಾ ಯೂಕ್ರೇನ್​ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದು, ಈಕೆಯ ಮನೆಯವರೀಗ ಚಿಂತೆಯಲ್ಲಿದ್ದಾರೆ. ರಾಮನಗರ ಐಜೂರು ಮೂಲದ ಆಯುಷ ಕೂಡ ಯೂಕ್ರೇನ್​ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಚೈತ್ರಾ ಯೂಕ್ರೇನ್​ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಊರಿಗೆ ಬರುವ ಸಿದ್ಧತೆಯಲ್ಲಿದ್ದರು. ಅಷ್ಟರಲ್ಲೇ ಯುದ್ಧ ಆರಂಭವಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣ ರದ್ದುಗೊಂಡಿದೆ. ಪ್ರಯಾಣಿಕರಿಗೆ ಬಂಕರ್​ನಲ್ಲಿ ಉಳಿದುಕೊಳ್ಳಲು ಉಕ್ರೇನ್ ಸರ್ಕಾರದ ವ್ಯವಸ್ಥೆ ಮಾಡಿದ್ದು, ಚೈತ್ರ ಕುಟುಂಬದ ಸದಸ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ತಿಳಿಸುತ್ತಿದ್ದಾರೆ. ಇವರಲ್ಲದೆ ರಾಜ್ಯದ ಇನ್ನೂ ಹಲವರು ಯೂಕ್ರೇನ್​ನಲ್ಲಿ ಸಿಲುಕಿಕೊಂಡಿದ್ದು, ಆದಷ್ಟೂ ಬೇಗ ಕರ್ನಾಟಕಕ್ಕೆ ತಲುಪಿಕೊಳ್ಳುವ ತವಕದಲ್ಲಿದ್ದಾರೆ.
ರೇಪ್​ ಮಾಡಿದ್ರು ಅಂತ ಸುಳ್ಳು ಹೇಳಿದ ವಿದ್ಯಾರ್ಥಿನಿ; ಇನ್​ಸ್ಟಾಗ್ರಾಮ್​ನಲ್ಲಿ 5 ಅಕೌಂಟ್​ ಹೊಂದಿದ್ದವಳಿಂದ ಕಟ್ಟುಕತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + three =
Remember me
