ಭುವನೇಶ್ವರ:ಒಡಿಶಾದ ಪುರಿ ಶ್ರೀ ಕ್ಷೇತ್ರದಲ್ಲಿರುವ ಜಗನ್ನಾಥನ ರತ್ನ ಭಂಡಾರದ ರಹಸ್ಯ ಕೊಠಡಿಯನ್ನು ತೆರೆಯಲು ಅಧಿಕಾರಿಗಳು ಸಿದ್ಧರಾಗಿದ್ದಾರೆ. ಭಾನುವಾರ ಆ ರಹಸ್ಯ ಕೊಠಡಿಯಲ್ಲಿರುವ ನಿಧಿಯನ್ನು ಹೊರ ಜಗತ್ತಿಗೆ ತೋರಿಸಲಾಗುತ್ತದೆ. 46 ವರ್ಷಗಳ ನಂತರ ಕೊಠಡಿ ತೆರೆಯಲು ಮುಂದಾಗಿರುವ ಕಾರಣ ಅದರಲ್ಲಿ ಕಿಂಗ್ ಕೋಬ್ರಾದಂತಹ ವಿಷಕಾರಿ ಹಾವುಗಳು ಇರುವ ಸಾಧ್ಯತೆ ಇದೆ ಎಂದು ಭಾವಿಸಿ ಅಧಿಕಾರಿಗಳು ತೆರೆಯಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ:ಬಿಹಾರದಲ್ಲಿ ಭಾರಿ ಮಳೆ: ಒಂದೇ ದಿನ ಸಿಡಿಲು ಬಡಿದು 25 ಮಂದಿ ಮೃತ್ಯು
ನಾಗಬಂಧದ ಜೊತೆಗೆ ಕೊಠಡಿ ತೆರೆದು ತುಂಬಾವರ್ಷಗಳಾ್ಉರುವುದರಿಂದ ಹಾವುಗಳು ಇರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿಯೇ ಹಿಡಿಯುವಲ್ಲಿ ಅನುಭವ ಇರುವವರನ್ನು ಕರೆಸಲಾಗುತ್ತಿದೆ. ಒಂದು ವೇಳೆ ಯಾರಿಗಾದರೂ ಹಾವು ಕಚ್ಚಿದರೆ, ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಆದರೆ ಬರ್ಮಾದ ಬೆಟ್ಟದ ಹಾವುಗಳು ಇಲ್ಲಿನ ಸಂಪತ್ತನ್ನು ಕಾಪಾಡುವ ಕಥೆಗಳನ್ನು ಸ್ಥಳೀಯರು ಹೇಳುತ್ತಾರೆ. ಪುರಿಯಲ್ಲಿರುವ ರತ್ನ ಭಂಡಾಗಾರಂನಲ್ಲಿರುವ ಜಗನ್ನಾಥ ಮತ್ತು ಇತರ ದೇವತೆಗಳಿಗೆ ಸೇರಿದ ಅಮೂಲ್ಯವಾದ ಚಿನ್ನದ ಆಭರಣಗಳನ್ನು ಸರ್ಪಗಳು ಕಾಪಾಡುತ್ತವೆ ಎಂದು ಪುರಾಣಗಳು ಹೇಳುತ್ತವೆ.
2018 ರಲ್ಲಿ ಒಡಿಶಾ ಹೈಕೋರ್ಟ್‌ನ ಆದೇಶದ ಮೇರೆಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡವು ರತ್ನ ಭಂಡಾರವನ್ನು ಪ್ರವೇಶಿಸಲು ಪ್ರಯತ್ನಿಸಿತು. ಆದರೆ ಅವರು ಹಾವುಗಳ ವದಂತಿಯಿಂದ ಹಿಂದೆ ಸರಿದರು. ದೇಗುಲ ಪುರಾತನವಾದ್ದರಿಂದ ಸಣ್ಣ ರಂಧ್ರಗಳ ಮೂಲಕ ಹಾವುಗಳು ರತ್ನ ಭಂಡಾರ ಪ್ರವೇಶಿಸಿರುವ ಸಾಧ್ಯತೆ ಇದೆ ಎನ್ನುತ್ತಾರೆ ಸೇವಕ ಹರೇಕೃಷ್ಣ ಮಹಾಪಾತ್ರ.
ಜಗನ್ನಾಥ ಹೆರಿಟೇಜ್ ಕಾರಿಡಾರ್ ಯೋಜನೆ ಜಾರಿಯಲ್ಲಿದ್ದಾಗ ದೇವಾಲಯದ ಆಸುಪಾಸಿನಲ್ಲಿ ಹಾವುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಅಭಿಪ್ರಾಯಗಳು ಬಲಗೊಂಡವು.
ಸುದೀಪ್‌ ನಟನೆಯ ಮ್ಯಾಕ್ಸ್ʼನಿಂದ ಜು.16ಕ್ಕೆ ಬಿಗ್ ಅಪ್ಡೇಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + nine =
Remember me
