ಬಾಲಿವುಡ್ ಗಾಯಕಿ ಕನಿಕಾ ಕಪೂರ್​ಗೆ ಕರೊನಾ ಸೋಂಕು ಇರುವುದು ದೃಢಪಟ್ಟ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಲಖನೌನಲ್ಲಿ ಭಾನುವಾರ ನಡೆದ ಔತಣಕೂಟವೊಂದರಲ್ಲಿ ಕನಿಕಾ ಕಪೂರ್ ಅತಿಥಿಯಾಗಿ ಪಾಲ್ಗೊಂಡಿದ್ದರು. ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಹಾಗೂ ಅವರ ಪುತ್ರ ಸಂಸದ ದುಷ್ಯಂತ್ ಸಿಂಗ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕನಿಕಾಗೆ ಸೋಂಕು ದೃಢಪಟ್ಟ ಬಳಿಕ ಇವರಿಬ್ಬರೂ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಆದರೆ ದುಷ್ಯಂತ್ ಒಳಗೊಂಡ ನಿಯೋಗ ತಮ್ಮನ್ನು ಭೇಟಿಯಾಗಿದ್ದರಿಂದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಎಲ್ಲ ಕಾರ್ಯಕ್ರಮ ರದ್ದುಪಡಿಸಿದ್ದಾರೆ. ವಸುಂಧರಾ ಮತ್ತು ದುಷ್ಯಂತ್ ಇಬ್ಬರ ಫಲಿತಾಂಶವೂ ನೆಗೆಟಿವ್ ಬಂದಿದ್ದರೂ ಆತಂಕ ಕಡಿಮೆಯಾಗಿಲ್ಲ.
ಸಂಸದರಿಗೂ ಭೀತಿ: ಮತ್ತೊಂದೆಡೆ ಕರೊನಾ ಸೋಂಕು ಪೀಡಿತೆ ಕನ್ನಿಕಾ ಕಪೂರ್ ಜತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದುಷ್ಯಂತ್ ಸಿಂಗ್ ನಂತರ ಸಂಸತ್ ಅಧಿವೇಶನದಲ್ಲೂ ಭಾಗಿಯಾಗಿದ್ದರು. ಈ ವೇಳೆ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಹೇಮಾಮಾಲಿನಿ, ಮೇರಿ ಕೋಮ್ ಅರ್ಜುನ್ ರಾಮ್ ಕುಮಾರಿ ಸೆಲ್ಜಾ, ಡೆರಿಕ್ ಒ’ಬ್ರಿಯಾನ್ ಸೇರಿ ಹಲವರನ್ನು ಭೇಟಿಯಾಗಿದ್ದರು. ಇದು ಸಹ ಆತಂಕಕ್ಕೆ ಕಾರಣವಾಗಿದೆ.
ಕನಿಕಾ ವಿರುದ್ಧ ಎಫ್​ಐಆರ್: ಕರೊನಾ ಸೋಂಕು ಪೀಡಿತ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಮಾರಣಾಂತಿಕ ಸೋಂಕನ್ನು ಹರಡಿದ ಆರೋಪದ ಮೇಲೆ ಐಪಿಸಿ 269ರ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕ್ವಾರಂಟೈನ್​ನಲ್ಲಿ ಇರುವುದಾಗಿ ಘೋಷಿಸಿರುವ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
