ಶ್ರೀನಗರ: ಹಿರಿಯ ಅಧಿಕಾರಿಯೊಬ್ಬರಿಗೆ ಪ್ಲಾಸ್ಮಾ ದಾನ ಮಾಡಿ ಅವರ ಜೀವ ಉಳಿಸಿದ್ದಕ್ಕಾಗಿ ಪೊಲೀಸ್ ಒಬ್ಬರನ್ನುಉತ್ತರ ಕಾಶ್ಮೀರದ ಉರಿ ಅಧಿಕಾರಿಗಳು ಗುರುವಾರ ಸನ್ಮಾನಿಸಿದರು.ಪೊಲೀಸ್ ಕಾನ್‌ಸ್ಟೆಬಲ್ ಸೈಯದ್ ಜುಲ್ಫಿಕರ್ ಅಲಿ ಜುಲೈ 24 ರಂದು ಜೆವಿಸಿ ಶ್ರೀನಗರದಲ್ಲಿ ಜಮ್ಮು-ಕಾಶ್ಮೀರದ ಕೆಎಎಸ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿ ತಸದುಕ್ ಜೀಲಾನಿ ಅವರಿಗೆ ಪ್ಲಾಸ್ಮಾ ದಾನ ಮಾಡಿದ್ದರು.ಉರಿ ಸಮೀಪದ ನೂರ್ಖಾ ಗ್ರಾಮದವರಾದ ಜುಲ್ಫಿಕರ್, ಅನಂತ್‌ನಾಗ್‌ನ ಐಆರ್‌ಪಿ 11 ನೇ ಬೆಟಾಲಿಯನ್‌ ಗೆ ನಿಯೋಜನೆಗೊಂಡಿದ್ದು, ಅವರು ಇತ್ತೀಚೆಗೆ COVID-19 ನಿಂದ ಗುಣಮುಖರಾಗಿದ್ದರು.
ಇದನ್ನೂ ಓದಿ:ಸುಶಾಂತ್ ನನ್ನು ಕೊಲೆಗೈಯಲಾಗಿದೆ ಎಂದ ಸುಬ್ರಮಣಿಯನ್ ಸ್ವಾಮಿ
ಉರಿ ಎಸ್‌ಡಿಎಂ ರಿಯಾಜ್ ಅಹ್ಮದ್ ಮಲಿಕ್, ಜುಲ್ಫಿಕರ್ ಗೆ ಕೃತಜ್ಞತೆ ಸಲ್ಲಿಸಿದರಲ್ಲದೆ ಮತ್ತು ಅಮೂಲ್ಯವಾದ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡಲು ಮುಂದೆ ಬರಬೇಕೆಂದು ಕೋವಿಡ್ -19 ನಿಂದ ಗುಣಮುಖರಾದವರಲ್ಲಿ ವಿನಂತಿಸಿದರು.ಗುಣಮುಖರಾದ ಎಲ್ಲಾ ರೋಗಿಗಳ ಮಾಹಿತಿ ಸಂಗ್ರಹಣೆ, ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಲು ಮತ್ತು ಆ ಮೂಲಕ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರಯತ್ನಗಳು ನಡೆದಿವೆ ಎಂದು ಬ್ಲಾಕ್ ಮೆಡಿಕಲ್ ಆಫೀಸರ್ (ಬಿಎಂಒ) ಮಾಹಿತಿ ನೀಡಿದರು.
ಸುಶಾಂತ್ ನನ್ನು ಕೊಲೆಗೈಯಲಾಗಿದೆ ಎಂದ ಸುಬ್ರಮಣಿಯನ್ ಸ್ವಾಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
