ನವದೆಹಲಿ:ಕೋವಿಡ್​ 19 ಸೋಂಕು ಭಾರತದ ರಫ್ತು ವಹಿವಾಟಿನ ಮೇಲೂ ಕರಿನೆರಳು ಬೀರಿದೆ. ವಿಶ್ವದಾದ್ಯಂತ ಸೋಂಕು ಹಬ್ಬಿರುವ ಹಿನ್ನೆಲೆಯಲ್ಲಿ ಭಾರತೀಯ ಸಿದ್ಧ ಉಡುಪು, ಚರ್ಮೋದ್ಯಮ, ಕರಕುಶಲ ವಸ್ತುಗಳು ಮತ್ತು ನೆಲಹಾಸುಗಳ ರಫ್ತು ಆರ್ಡರ್ ಶೇ.75 ರದ್ದಾಗಿದೆ.ಅಷ್ಟೇ ಅಲ್ಲ, ರಾಷ್ಟ್ರದ ಒಟ್ಟಾರೆ ರಫ್ತು ಆದೇಶದಲ್ಲಿ ಶೇ. 50 ಆರ್ಡರ್​ಗಳು  ರದ್ದಾಗಿವೆ. ಈ ಹಿನ್ನೆಲೆಯಲ್ಲಿ ರಫ್ತು ಉದ್ಯಮಕ್ಕೆ 30 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಭಾರತೀಯ ರಫ್ತುದಾರರ ಮಹಾಒಕ್ಕೂಟ (ಫೆಡರೇಷನ್​ ಆಫ್​ ಇಂಡಿಯನ್​ ಎಕ್ಸ್​ಪೋರ್ಟರ್ಸ್-ಎಫ್​ಐಇ​) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಈ ರಫ್ತು ಆರ್ಡರ್​ಗಳು ಬಹುತೇಕ ಅಮೆರಿಕ ಮತ್ತು ಬ್ರಿಟನ್​ನಿಂದ ಬಂದಿದ್ದವು. ಆದರೆ ಈಗ ಆ ದೇಶಗಳು ಕರೊನಾ ಪಿಡುಗಿನ ಕಪಿಮುಷ್ಟಿಗೆ ಸಿಲುಕಿವೆ. ಆದ್ದರಿಂದ, ಆ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಇಲ್ಲದ ಕಾರಣ, ರಫ್ತು ಆರ್ಡರ್​ಗಳು ರದ್ದುಗೊಂಡಿವೆ.
ರಫ್ತು ಆರ್ಡರ್​ಗಳು ರದ್ದುಗೊಂಡಿರುವ ಹಿನ್ನೆಲೆಯಲ್ಲಿ ರಫ್ತು ಉದ್ಯಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಸಿಬ್ಬಂದಿಗೆ ವೇತನ ಮತ್ತಿತರ ಭತ್ಯೆ, ದಿನಗೂಲಿ, ಬಾಡಿಗೆ ಮತ್ತು ವಿದ್ಯುತ್​ ಶುಲ್ಕ ಪಾವತಿಗೂ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ, ಉದ್ಯಮಕ್ಕೆ ಸೂಕ್ತ ಪರಿಹಾರ ನೀಡಿ ಸಹಕರಿಸಬೇಕು ಎಂದು ಎಫ್​ಐಇ ಮನವಿ ಮಾಡಿಕೊಂಡಿದೆ.
ರಫ್ತು ಕುಸಿತದಿಂದ ಬಳಲಿರುವ ಚೀನಾ ಕೂಡ ರಫ್ತು ಉದ್ಯಮದ ಪುನಶ್ಚೇತನಕ್ಕೆ ರಫ್ತು ತೆರಿಗೆ ಮೇಲೆ ಶೇ.3 ಹೆಚ್ಚುವರಿ ವಿನಾಯ್ತಿ ಘೋಷಿಸಿದೆ ಎಂದು ಹೇಳಿದೆ.
ಸಕ್ಕರೆ ಹೊದಿಕೆಯಲ್ಲಿ ಅವಿತು ದೇಹ ಪ್ರವೇಶಿಸುವ ಕರೊನಾ ಕುರಿಯ ವೇಷದ ತೋಳ ಈ ವೈರಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 6 =
Remember me
