ಮಧುರೈ:ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿ ಸರ್ಕಾರಿ ಆಸ್ಪತ್ರೆಯಲ್ಲಿ ನೀರಿನ ಬದಲು ಸ್ಪಿರಿಟ್ ಸೇವಿಸಿದ ಕೆಲ ಸಮಯದ ಬಳಿಕ ಮೃತಪಟ್ಟಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.ಇದನ್ನೂ ಓದಿ:ಅಪ್ಪಿತಪ್ಪಿ ಈ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿದರೆ ದುರ್ಬಳಕೆ ಆಗಬಹುದು ನಿಮ್ಮ ಮೊಬೈಲ್ ನಂಬರ್!
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅಗಲ್ಯಾ(ಹೆಸರು ಬದಲಾಯಿಸಲಾಗಿದೆ) ಎಂಬ 9 ವರ್ಷದ ಬಾಲಕಿಯನ್ನು ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗಾಗಿ ದಾಖಲಿಸಲಾಗಿತ್ತು. ಈ ವೇಳೆ ತಾಯಿಯೇ ತಪ್ಪಾಗಿ ಬಾಲಕಿಗೆ ನೀರಿನ ಬದಲು ಸ್ಪಿರಿಟ್ ಕುಡಿಸಿದ್ದಾಳೆ.
ಕೂಡಲೇ, ರುಚಿಯಲ್ಲಿನ ವ್ಯತ್ಯಾಸವನ್ನು ಅರಿತ ಬಾಲಕಿ ಅದನ್ನು ಉಗುಳಿದ್ದಾಳೆ. ಇದಾದ ಸ್ವಲ್ಪ ಸಮಯದ ನಂತರ ಬಾಲಕಿಯ ಆರೋಗ್ಯ ಹದಗೆಟ್ಟಿದೆ. ನರ್ಸ್‌ಗಳ ನಿರ್ಲಕ್ಷ್ಯದಿಂದ ಮಗಳ ಹಾಸಿಗೆಯ ಬಳಿ ಇಟ್ಟಿದ್ದ ಸ್ಪಿರಿಟ್​ನ್ನು ತಾನು ಕುಡಿಸಿದ್ದೇನೆ. ಹಾಗಾಗಿಯೇ ಅವಳು ಮೃತಪಟ್ಟಿದ್ದಾಳೆ ಎಂದು ತಾಯಿ ಆರೋಪಿಸಿದ್ದಾಳೆ.ಇದನ್ನೂ ಓದಿ:ಮಹಿಳೆಯರ ಚಿನ್ನಾಭರಣ ದೋಚಿ ಹೊಸ ಸಿನಿಮಾ ನಿರ್ಮಾಣ: ಪತ್ನಿ, ಪುತ್ರನ ಸಮೇತ ಸಿಕ್ಕಿಬಿದ್ದ ನಟ!ಆದರೆ, ಬಾಲಕಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ವೈದ್ಯರು ಆಕೆಯ ಸಾವಿಗೆ ಸ್ಪಿರಿಟ್ ಸೇವನೆ ಕಾರಣವಲ್ಲ. ಮೆದುಳಿನ ರಕ್ತಸ್ರಾವದಿಂದ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
