ಭೋಪಾಲ್​:ಕಳೆದ ವರ್ಷ ನಮೀಬಿಯಾದಿಂದ ತರಲಾಗಿದ್ದ ಸಶಾ(3) ಹೆಸರಿನ ಹೆಣ್ಣು ಚೀತಾ ಮೂತ್ರಪಿಂಡ ಸೋಂಕಿನಿಂದ ಸೋಮವಾರ ಮೃತಪಟ್ಟಿದೆ.
ಭಾರತಕ್ಕೆ ತರುವ ಮೊದಲೇ ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಚೀತಾವನ್ನ ಕ್ವಾರಂಟೈನ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. Project Cheetah ಹೆಸರಿನ ಯೋಜನೆಯಡಿ ಕಳೆದ ವರ್ಷ ನಮೀಬಿಯಾದಿಂದ ತರಲಾಗಿದ್ದ ಎಂಟು ಚೀತಾಗಳನ್ನ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು.
ಇದನ್ನು ಓದಿ:ಮಹೇಶ್​ ಬಾಬು ಅಭಿನಯದ ಹೊಸ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್
ಸಶಾ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಚಿರತೆ ಸಂರಕ್ಷಣಾ ನಿಧಿಯ(CCF) ವಕ್ತಾರ ಸುಸಾನ್​ ಯಾನೆಟ್ಟಿ ಚೀತಾ ಇಂದು ಬೆಳಗ್ಗೆ 8ಕ್ಕೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ. ಮೂತ್ರಪಿಂಡದ ವೈಫಲ್ಯದಿಂದ ಚೀತಾ ಕೊನೆಯುಸಿರೆಳೆದಿರಬಹುದು ಎಂದು ಶಂಕಿಸಿದ್ದಾರೆ.
ಚೀತಾಗಳೂ ಸಹ ಮೂತ್ರಪಿಂಡದ ಸೋಂಕಿಗೆ ಒಳಗಾಗುತ್ತವೆ. ಅದಕ್ಕಾಗಿ ನಾವು ಅವುಗಳನ್ನ ಸೂಕ್ಷ್ಮ ಜೀವಿ ಎಂದು ಕರೆಯುತ್ತೇವೆ ಎಂದು CCFನ ವಕ್ತಾರ ಸುಸಾನ್​ ಯಾನೆಟ್ಟಿ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
