ನವದೆಹಲಿ:ಮನುಷ್ಯನಲ್ಲಿ ಮಾತ್ರ ಭಾವನೆಗಳು ಇರೋದು ಅಂತಾ ನೀವೇನಾದರೂ ಅಂದುಕೊಂಡಿದ್ದರೆ, ಅದು ಖಂಡಿತ ತಪ್ಪು. ಪ್ರಾಣಿಗಳಲ್ಲಿಯೂ ಭಾವನೆ ಇದೆ ಎಂಬುದನ್ನು ಸದ್ಯ ವೈರಲ್​ ಆಗುತ್ತಿರುವ ವಿಡಿಯೋವೊಂದು ಸಾಬೀತು ಮಾಡಿದೆ. ತನ್ನ ಸಂಗಾತಿ ತೀರಿಕೊಂಡಿದ್ದಕ್ಕೆ ಗಂಡು ಕೋಲಾವೊಂದು ಮೃತದೇಹವನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ ವಿಡಿಯೋ ವೈರಲ್​ ಆಗುತ್ತಿದ್ದು, ಎಂಥವರ ಹೃದಯವನ್ನೂ ಒಮ್ಮೆ ಕರಗಿಸಿಬಿಡುತ್ತದೆ.
ಪ್ರಾಣಿಗಳಿಗೆ ಮಾತನಾಡಲು ಸಾಧ್ಯವಿಲ್ಲ, ಭಾವನೆಗಳಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಕೆಲವು ಘಟನೆಗಳು ಅವರಲ್ಲಿ ಸ್ನೇಹ ಮತ್ತು ಪ್ರೀತಿ ಇರುವುದನ್ನು ಸಾಬೀತುಪಡಿಸುತ್ತವೆ. ಒಂದು ಹೆಣ್ಣು ಕೋಲಾ ಮರದ ಕೆಳಗೆ ಸತ್ತು ಬಿದ್ದಿತ್ತು. ಸಂಗಾತಿ ಸತ್ತಿದ್ದನ್ನು ನೋಡಿ ಕಂಗಾಲಾದ ಗಂಡು ಕೋಲಾ, ಬಳಿ ಬಂದು ಮೃತದೇಹವನ್ನು ಬಿಗಿದಪ್ಪಿ ಆಕಾಶ ನೋಡುತ್ತಾ ಬಿಕ್ಕಿ ಬಿಕ್ಕಿ ಅತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
A post shared by KOALA RESCUE Inc 🐨 (@koala_rescue)

ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುವುದರ ಜೊತೆಗೆ ಒಂದು ಕ್ಷಣ ಭಾವುಕರಾಗಿದ್ದಾರೆ. ಪ್ರೀತಿ, ಕರುಣೆ ಏನು ಎಂಬುದನ್ನು ಇಂತಹ ಜೀವಿಗಳಿಂದ ಕಲಿಯಬೇಕು. ನಿಜಕ್ಕೂ ಇದು ಮನಕಲಕುವ ದೃಶ್ಯವಾಗಿದೆ. ವಿಡಿಯೋ ನೋಡುತ್ತಿದ್ದರೆ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುತ್ತದೆ. ಎಂಥಾ ನಿಷ್ಕಲ್ಮಷ ಪ್ರೀತಿ ಇದು. ಪ್ರಾಣಿಗಳನ್ನು ನೋಡಿ ಮನಷ್ಯ ಕಲಿಬೇಕಾದ್ದು ಬೇಕಾದಷ್ಟಿದೆ ಎಂದೆಲ್ಲಾ ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.
ಅಂದಹಾಗೆ ದಕ್ಷಿಣ ಆಸ್ಟ್ರೇಲಿಯಾದ ಪ್ರಾಣಿ ಕಲ್ಯಾಣ ಸಂಘ, ಸ್ಥಳೀಯರಿಂದ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದಾಗ ಅಲ್ಲಿ, ಹೆಣ್ಣು ಕೋಲಾ ಸತ್ತಿರುವುದನ್ನು ಕಂಡುಹಿಡಿದರು. ತಕ್ಷಣ ಸ್ಪಂದಿಸಿದ ತಂಡವು ಎರಡು ಕೋಲಾಗಳನ್ನು ನೋಡಿಕೊಂಡಿದೆ. ಗಂಡು ಕೋಲಾವನ್ನು ಆರೋಗ್ಯ ತಪಾಸಣೆ ಮಾಡಿ ಕಾಡಿಗೆ ಬಿಡಲಾಯಿತು. ಮೃತಪಟ್ಟ ಹೆಣ್ಣು ಕೋಲಾ ಅನಾರೋಗ್ಯದಿಂದ ಬಳಲಿದೆ ಎಂದು ತೋರುತ್ತದೆ. ಏಕೆಂದರೆ, ದೇಹದ ಮೇಲೆ ಯಾವುದೇ ಗಾಯಗಳಿಲ್ಲ.
ಸದ್ಯ ಮನಮುಟ್ಟುವ ಮತ್ತು ಮನಕಲಕುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ.(ಏಜೆನ್ಸೀಸ್​)
ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

100 ಕೋಟಿ ರೂ. ಕೊಟ್ಟರು ಈ ಹೀರೋ ಜತೆ ನಟಿಸುವುದಿಲ್ಲವಂತೆ ನಯನತಾರಾ! ಯಾರು ಆ ನಟ?

ಊರ್ವಶಿಗೆ ದುಬಾರಿ ಗಿಫ್ಟ್​ ಕೊಟ್ಟ ಹನಿಸಿಂಗ್! ಈ ಚಿನ್ನದ ಕೇಕ್​ ಬೆಲೆ ನಿಮ್ಮಿಂದ ಊಹಿಸಲು ಸಾಧ್ಯವಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eight =
Remember me
