ಚೆನ್ನೈ:ಅಕ್ರಮ ಸಂಬಂಧ ಕಾರಣದಿಂದಾಗಿ ಮಹಿಳಾ ಪೊಲೀಸ್​ ಸಿಬ್ಬಂದಿ ಒಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ಸಮಯನಲ್ಲೂರಿನಲ್ಲಿ ನಡೆದಿದೆ.
ಜಯಲಕ್ಷ್ಮೀ (30) ಮೃತ ಮಹಿಳಾ ಪೊಲೀಸ್​. ಮದುರೈನಲ್ಲಿ ಕಳೆದ ಆರು ವರ್ಷಗಳಿಂದ ರೈಲ್ವೆ ಪೊಲೀಸ್​ ಅಧಿಕಾರಿ ಸೇವೆ ಸಲ್ಲಿಸುತ್ತಿದ್ದರು. ಮದುರೈನ ತಿರುಪಲೈ ಏರಿಯಾದಲ್ಲಿ ವಾಸವಿದ್ದರು. ಮದುವೆಯಾಗಿ, ಇಬ್ಬರು ಮಕ್ಕಳಿದ್ದರು. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಮಧುರೈ ಜಿಲ್ಲೆಯ ಸಮಯನಲ್ಲೂರು ಬಳಿಯ ಮಧುರೈ-ದಿಂಡಿಗಲ್ ರೈಲ್ವೆ ಹಳಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಇಬ್ಬರು ಮಕ್ಕಳು ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಕ್ಕಳನ್ನು ಮಗ ಕಾಳಿಮುತ್ತು ರಾಜ (9) ಮತ್ತು ಮಗಳು ಪವಿತ್ರಾ (11) ಎಂದು ಗುರುತಿಸಲಾಗಿದೆ. ಜಯಲಕ್ಷ್ಮಿ ಮಧುರೈ ರೈಲ್ವೇ ಪೊಲೀಸ್ ವಿಭಾಗದಲ್ಲಿ ಗ್ರೇಡ್-1 ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸೆಂಗೊಟ್ಟೈ ಮೂಲದ ಸೊಕ್ಕಲಿಂಗ ಪಾಂಡಿಯನ್​ ಜತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಪಾಂಡಿಯನ್​ ಸಹ ರೈಲ್ವೆ ಪೊಲೀಸ್​ ಅಧಿಕಾರಿಯಾಗಿದ್ದು, ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅಲ್ಲದೆ, ಹಲವು ಮಹಿಳೆಯರ ಜತೆ ಪಾಂಡಿಯನ್​ಗೆ ಸಂಪರ್ಕ ಇತ್ತು. ಈ ವಿಚಾರ ಜಯಲಕ್ಷ್ಮಿಗೆ ತಿಳಿದು ಆಘಾತಕ್ಕೆ ಒಳಗಾಗಿದ್ದರು. ಇದೇ ವಿಚಾರವಾಗಿ ಪಾಂಡಿಯನ್ ಜೊತೆ ಸಂಪರ್ಕದಲ್ಲಿದ್ದ ರೈಲ್ವೆ ಉದ್ಯೋಗಿ ಶಿವಕಾಮಿ ಎಂಬಾಕೆಗೆ ಕರೆ ಮಾಡಿ ಜಯಲಕ್ಷ್ಮೀ ಜಗಳವಾಡಿದ್ದಳು.
ಇದನ್ನೂ ಓದಿ:ಹಸಿರು ಪಟಾಕಿ ನಿಷೇಧ: ದೆಹಲಿ ಆದೇಶದಂತೆ ಉತ್ಪಾದನೆ, ಮಾರಾಟಕ್ಕಿಲ್ಲ ಅನುಮತಿ ಎಂದ ಸುಪ್ರೀಂ: ಏನಿದು ಹಸಿರು ಪಟಾಕಿ..?
ಜಯಲಕ್ಷ್ಮೀ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಶಿವಗಾಮಿ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದಳು. ಇದರಿಂದ ಹೆದರಿದ ಜಯಲಕ್ಷ್ಮಿ ತನ್ನ ಇಬ್ಬರು ಮಕ್ಕಳೊಂದಿಗೆ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ತಿಳಿದ ಸೊಕ್ಕಲಿಂಗ ಪಾಂಡಿಯನ್ ತನ್ನ ಸಹೋದರನಿಗೆ ವಾಟ್ಸಾಪ್ ಮೂಲಕ ‘ತಪ್ಪು ಮಾಡಿದ್ದೇನೆ’ ಎಂದು ಸಂದೇಶ ರವಾನಿಸಿ ರಾತ್ರಿ 11:30ಕ್ಕೆ ಕೋವಿಲಪಟ್ಟಿ ಬಳಿ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್​)
ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಬಾಲಕನ ಹೊಟ್ಟೆಯಲ್ಲಿ ಚಾಕು ಪತ್ತೆ!

ದೀಪಾವಳಿಯಂದು ಪಟಾಕಿ ನಿಷೇಧ: ಕೇಜ್ರಿವಾಲ್ ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ನಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 4 =
Remember me
