ಭಾರತೀಯ ಭೂಸೇನೆಯಲ್ಲಿ ಮಹಿಳಾ ಅಧಿಕಾರಿಗಳ ಪೂರ್ಣಾವಧಿ ನೇಮಕಾತಿ (ಪರ್ಮನೆಂಟ್ ಕಮಿಷನ್) ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಸೇನೆಯ ಒಟ್ಟು 10 ವಿಭಾಗಗಳಿಗೆ ಮಹಿಳಾ ಅಧಿಕಾರಿಗಳ ಸೇವೆಯನ್ನು ಪೂರ್ಣಕಾಲಿಕವಾಗಿಸಲು ನಿರ್ಧರಿಸಲಾಗಿದೆ. ಸೇವಾಜ್ಯೇಷ್ಠತೆ, ಅರ್ಹತೆ ಇನ್ನಿತರ ಮಾನದಂಡಗಳನ್ನು ಪರಿಗಣಿಸಿ ಅವರಿಗೆ ಈ ಹುದ್ದೆ ನೀಡಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದ್ದು, ಇದು ಪ್ರಕ್ರಿಯೆಗಳನ್ನು ಆರಂಭಿಸಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಸೇನೆ ಈ ಕ್ರಮ ಕೈಗೊಂಡಿದೆ.
2016ರಲ್ಲಿ ವಾಯುಪಡೆಗೆ ಮಹಿಳಾ ಪೈಲಟ್​ಗಳನ್ನು ನಿಯೋಜನೆ ಮಾಡಲಾಗಿದೆ. ಸರಕು ಸಾಗಣೆ ವಿಮಾನ, ಹೆಲಿಕಾಪ್ಟರ್​ಗಳಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಯುದ್ಧವಿಮಾನ ಚಾಲನೆಗಾಗಿ ಪ್ರಸ್ತುತ ಮೊದಲ ಮಹಿಳಾ ಬ್ಯಾಚ್ ಸಿದ್ಧಗೊಳ್ಳುತ್ತಿದೆ. 1990ರ ದಶಕದಿಂದಲೇ ಸೇನೆಗೆ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ ಅವರನ್ನು ಪೂರ್ಣಕಾಲಿಕ ಸಿಬ್ಬಂದಿ ಎಂದು ಪರಿಗಣಿಸುತ್ತಿರಲಿಲ್ಲ. ಇವರು ಗರಿಷ್ಠ 14 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಬಹುದು.
ಸೇನೆಯಲ್ಲಿ ದೀರ್ಘಾವಧಿಗೆ ಅಧಿಕಾರಿಗಳನ್ನು ನೇಮಕ ಮಾಡುವ ವಿಭಾಗವೇ ಪೂರ್ಣಾವಧಿ ಆಯೋಗ (ಪಿಸಿ). ಇದರ ಮೂಲಕ ನೇಮಕಗೊಂಡವರು ನಿವೃತ್ತಿ ವಯಸ್ಸಿನ (60) ತನಕ ಸೇವೆ ಸಲ್ಲಿಸುವ ಅವಕಾಶ ಪಡೆದಿರುತ್ತಾರೆ. ಪಿಸಿ ಮೂಲಕ ಸೇನೆಗೆ ಸೇರಬೇಕೆಂದರೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಭಾರತೀಯ ಸೇನಾ ಅಕಾಡೆಮಿ ಅಥವಾ ಅಧಿಕಾರಿಗಳ ತರಬೇತಿ ಸೇರುವುದು ಅನಿವಾರ್ಯ. ಈ ಮೂಲಕ ನೇಮಕಗೊಂಡವರಿಗೆ ಪಿಂಚಣಿ ಸಿಗಬೇಕೆಂದರೆ ಕನಿಷ್ಠ 20 ವರ್ಷ ಸೇವೆ ಸಲ್ಲಿಸಬೇಕು. ಪಿಸಿಯಿಂದ ನೇಮಕವಾದವರು ಶಾರ್ಟ್ ಸರ್ವೀಸ್ ಕಮಿಷನ್(ಎಸ್​ಎಸ್​ಸಿ) ವ್ಯಾಪ್ತಿಗೆ ತನ್ನನ್ನು ಸೇರಿಸಿ ಎಂದು ಕೇಳಿಕೊಳ್ಳುವಂತಿಲ್ಲ. ನಿಗದಿತ ಅವಧಿಗೆ ಮುನ್ನ ನಿವೃತ್ತಿಯಾಗಬೇಕೆಂದಿದ್ದರೆ ಸೂಕ್ತ ಕಾರಣ ಹಾಗೂ ದಾಖಲೆಗಳನ್ನು ಸಲ್ಲಿಸಿ ಕರ್ತವ್ಯದಿಂದ ಬಿಡುಗಡೆ ಪಡೆಯಬಹುದು. ಸದ್ಯಕ್ಕೆ ಸೇನೆಗೆ ಮಹಿಳಾ ಅಧಿಕಾರಿಗಳನ್ನು ಎಸ್​ಎಸ್​ಸಿ ಮೂಲಕ ನೇಮಿಸಲಾಗುತ್ತಿದೆ.ಇದನ್ನೂ ಓದಿ:ರೈನಾ, ಹರ್ಭಜನ್ ಬಳಿಕ ಭಾರತದ ಮತ್ತೋರ್ವ ಕ್ರಿಕೆಟಿಗ ಐಪಿಎಲ್‌ನಿಂದ ಹೊರಬೀಳುವ ಭೀತಿ
ನಂ.5’ ಎಂಬ ಹೆಸರಿನ ಪ್ರತ್ಯೇಕ ಸಮಿತಿಯನ್ನು ಕಳೆದ ವಾರ ಅಸ್ತಿತ್ವಕ್ಕೆ ತರಲಾಗಿದೆ. ಲೆಫ್ಟಿನೆಂಟ್ ಜನರಲ್ ಹಂತದ ಅಧಿಕಾರಿ ಈ ಸಮಿತಿ ಮುಖ್ಯಸ್ಥರಾಗಿರುತ್ತಾರೆ. ಬ್ರಿಗೇಡಿಯರ್ ಹಂತದ ಮಹಿಳಾ ಅಧಿಕಾರಿಯೊಬ್ಬರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲು ಕೆಲ ಮಹಿಳಾ ಹಿರಿಯ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಸೇನೆಯ ವಕ್ತಾರ ಅಮನ್ ಆನಂದ್ ಮಾಹಿತಿ ನೀಡಿದ್ದಾರೆ. ಈ ಸಮಿತಿಯಿಂದ ಆಯ್ಕೆಯಾದ ಮಹಿಳಾ ಅಧಿಕಾರಿಗಳು ಕಾಯಂ ನೇಮಕಾತಿಗೆ ಅರ್ಹತೆ ಪಡೆಯಲಿದ್ದಾರೆ. ಆದರೆ ಅವರು ಸೇನೆಯ ವೈದ್ಯಕೀಯ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯ.
ಸೇನೆಯ ಹಲವು ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳನ್ನು ಪೂರ್ಣಾವಧಿಗೆ ನಿಯೋಜನೆ ಮಾಡಬೇಕೆಂಬ ಬೇಡಿಕೆ ಇತ್ತು. ಕಾರ್ಯಾಚರಣೆ, ಹಾಗೂ ಇತರ ಕಾರಣದಿಂದ ಪೂರ್ಣಾವಧಿ ನೇಮಕಾತಿಯನ್ನು ನಿರಾಕರಿಸಲಾಗುತ್ತಿತ್ತು. ಪ್ರಸ್ತುತ ಆಯ್ದ 10 ವಿಭಾಗಗಳಲ್ಲಿ ಅವರಿಗೆ ಪೂರ್ಣಕಾಲಿಕ ಸ್ಥಾನಮಾನ ನೀಡಲಾಗುತ್ತಿದೆ. ಆದರೆ ಇನ್​ಫ್ಯಾಂಟ್ರಿ, ಆರ್ಟಿಲರಿ, ಸಶಸ್ತ್ರಧಾರಿಯಾಗಿ ಕಾರ್ಯಾಚರಣೆಗೆ ತೆರಳುವ ಹಲವು ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳನ್ನು ಈಗಲೂ ನೇಮಕ ಮಾಡಲಾಗುತ್ತಿಲ್ಲ. ಯುದ್ಧಹಡಗು ಹಾಗೂ ಸಬ್​ವುರೀನ್​ಗಳಲ್ಲಿ ಅವರು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತಿಲ್ಲ.
ಕೃಷಿ ಮಸೂದೆಗಳು ಅನುಮೋದನೆಗೊಂಡ ಬೆನ್ನಲ್ಲೇ ಪ್ರಧಾನಿಯಿಂದ ಭರವಸೆ; ಎಂಎಸ್​ಪಿಗೆ ಇಲ್ಲ ನಿರ್ಬಂಧ

ಪ್ಯಾರಾಮಿಲಿಟರಿಗಳ ಪೈಕಿ ಸಿಐಎಸ್​ಎಫ್​ನಲ್ಲೇ ಅತ್ಯಧಿಕ ಕರೊನಾ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
