ಮುಂಬೈ:ಬ್ಯಾಂಕ್​ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಷೇರುಗಳು ಅಧಿಕ ಲಾಭ ಗಳಿಸಿದ ಲವಾಗಿ ಮಂಗಳವಾರ ಬಿಎಸ್​ಇ ಸೆನ್ಸೆಕ್ಸ್​ ಮತ್ತು ನಿಫ್ಟಿ ಶೇಕಡ 2.5ರಷ್ಟು ಚೇತರಿಕೆ ದಾಖಲಿಸಿವೆ. ಇದರಿಂದ ಹೂಡಿಕೆದಾರರ ಸಂಪತ್ತು 5.68 ಲಕ್ಷ ಕೋಟಿ ರೂ. ಹಿಗ್ಗಿದೆ. ಸುಮಾರು ಮೂರು ತಿಂಗಳಿಗಿಂತ ಹೆಚ್ಚು ಅವಧಿಯಲ್ಲಿ ಒಂದೇ ದಿನದ ಅತ್ಯಧಿಕ ಗಳಿಕೆ ಇದಾಗಿದೆ. ಬ್ಯಾಂಕಿಂಗ್​ ಮತ್ತು ಐಟಿ ಮಾತ್ರವಲ್ಲದೆ ತೈಲ ಕ್ಷೇತ್ರದ ಸ್ಟಾಕ್​ಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದೂ ಚೇತರಿಕೆಗೆ ಕಾರಣವಾಗಿದೆ. 30 ಷೇರುಗಳ ಸೆನ್ಸೆಕ್ಸ್​ 1,564.45 (2.70%) ಹೆಚ್ಚಳವಾಗಿ 59,537.07 ಪಾಯಿಂಟ್​ನಲ್ಲಿ ನಿಂತಿತು. ಎನ್​ಎಸ್​ಇ ನಿಫ್ಟಿ 446.40 (2.58%) ಪಾಯಿಂಟ್​ ಗಳಿಕೆಯೊಂದಿಗೆ ದಿನದಂತ್ಯಕ್ಕೆ 17,759.30ರಲ್ಲಿ ಕೊನೆಗೊಂಡಿತು. ಷೇರುಪೇಟೆಯಲ್ಲಿನ ಈ ಚೇತರಿಕೆ ದೇಶದ ಆರ್ಥಿಕತೆಯ ಸುಧಾರಣೆಯ ದ್ಯೋತಕವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ರೂಪಾಯಿ ಚೇತರಿಕೆ: ರೂಪಾಯಿ ಮೌಲ್ಯ ಮಂಗಳವಾರ 47 ಪೈಸೆ ಏರಿಕೆಯಾಗಿ ಡಾಲರ್​ ಎದುರು ಅದರ ಮೌಲ್ಯ 79.44 ರೂ. ಆಗಿದೆ.
400 ಕೋಟಿ ದಾಟಿದ ವೀಸಾ ಟೋಕನ್​ಪಾವತಿ ದಿಗ್ಗಜ ಕಂಪನಿ ವೀಸಾ, ಇದುವರೆಗೆ 400 ಕೋಟಿ ಟೋಕನ್​ಗಳನ್ನು ಮಂಜೂರು ಮಾಡಿದೆ. ಇದು ಬೌತಿಕ ಕಾರ್ಡ್​ಗಳ ಸಂಖ್ಯೆಯನ್ನೂ ಮೀರಿಸಿದೆ. 2014ರಲ್ಲಿ ವೀಸಾ ಟೋಕನ್​ ವ್ಯವಸ್ಥೆ (ವಿಟಿಎಸ್​) ಜಾರಿಗೊಳಿಸಿದ್ದು, 2020ರ ಹೊತ್ತಿಗೆ 100 ಕೋಟಿ ಟೋಕನ್​ ಮಂಜೂರು ಮಾಡಿದೆ. 2021ರಲ್ಲಿ 200 ಕೋಟಿ ಕಾರ್ಡ್​ ಮಂಜೂರಾಗಿದ್ದು ಈ ವರ್ಷ ದುಪ್ಪಟ್ಟುಗೊಂಡು 400 ಕೋಟಿ ಆಗಿದೆ.ಚಲಾವಣೆಯಲ್ಲಿರುವ ಭೌತಿಕ ಕಾರ್ಡ್​ ಗಳಿಗಿಂತ ಟೋಕನ್​ ಸಂಖ್ಯೆ ಜಾಸ್ತಿಯಿದೆ ಎಂದು ವೀಸಾ ಇನ್​ಕಾರ್ಪೊರೇಷನ್​ ತಿಳಿಸಿದೆ. ಟೋಕನ್​ ವ್ಯವಸ್ಥೆಯಲ್ಲಿ 16&ಅಂಕಿಯ ಖಾತೆ ಸಂಖ್ಯೆಯನ್ನು ಟೋಕನ್​ ಮೂಲಕ ಬದಲಾಯಿಸಲಾಗುತ್ತದೆ. ಅದನ್ನು ವೀಸಾ ಮೂಲಕ ಮಾತ್ರವೇ ಅನ್​ಲಾಕ್​ ಮಾಡಬಹುದು. ಮಾಹಿತಿಯನ್ನು ಮರೆಮಾಚುವ ಮೂಲಕ ಟೋಕನ್​ ವ್ಯವಸ್ಥೆಯು ವಂಚಕರಿಂದ ರಕ್ಷಣೆ ಒದಗಿಸುತ್ತದೆ.
ಕರೊನಾ ಸಾಂಕ್ರಾಮಿಕತೆಯಿಂದಾಗಿ ಇ-ವಾಣಿಜ್ಯದ ಪ್ರಮಾಣದಲ್ಲಿ ಶೇಕಡ 50ಕ್ಕಿಂತ ಹೆಚ್ಚಳವಾಗಿದೆ. ಆನ್​ಲೈನ್​ ಶಾಪಿಂಗ್​ನಲ್ಲಿ ಅಗಾಧ ಏರಿಕೆಯಾದ್ದರಿಂದ ಸರಳ ಹಾಗೂ ಸುರತ ವ್ಯವಹಾರ ವಿಧಾನಗಳಿಗೆ ಬೇಡಿಕೆಯೂ ಹೆಚ್ಚಾಯಿತು. ವೀಸಾ ಟೋಕನ್​ನಿಂದಾಗಿ ವಂಚನೆ ಪ್ರಮಾಣದಲ್ಲಿ ಶೇ. 28 ಇಳಿಕೆ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
