ದೆಹಲಿ:ಬಳಕೆದಾರರ ಉತ್ತಮ ಅನುಭವಕ್ಕಾಗಿ ವಾಟ್ಸ್​ಆ್ಯಪ್​ ಹೊಸ ಫೀಚರ್​​​ಗಳನ್ನು ಪರಿಚಯಿಸುತ್ತಲೇ ಇದೆ. ಹಲವು ದಿನಗಳ ಹಿಂದೆ ಕಳುಹಿಸಿದ ಮೇಸೆಜ್​ನ್ನು 15 ನಿಮಿಷದೊಳಗಾಗಿ ತಿದ್ದುಪಡಿ ಮಾಡುವ ಫೀಚರ್​​ನ್ನು ನೀಡಿತ್ತು. ತನ್ನ ಬಳಕೆದಾರರಿಗೆ ಯಾವಾಗಲೂ ಹಲವು ಹೊಸ ಫೀಚರ್​ಗಳನ್ನು ನೀಡುವ ವಾಟ್ಸ್​ಆ್ಯಪ್ ಮತ್ತಷ್ಟು ಫೀಚರ್​ಗಳನ್ನು ನೀಡಲು ಮುಂದಾಗಿದೆ.
ಪಾಸ್‌ವರ್ಡ್ ರಿಮೈಂಡರ್ ವೈಶಿಷ್ಟ್ಯ:ಬಳಕೆದಾರರಿಗೆ ಪಾಸ್‌ವರ್ಡ್ ರಿಮೈಂಡರ್ ಎಂಬ ಫೀಚರ್​​ ನೀಡಲು ವಾಟ್ಸ್​ಆ್ಯಪ್ ಯೋಚಿಸುತ್ತಿದೆ. ವೈಯಕ್ತಿಕ ಪಾಸ್‌ವರ್ಡ್ ಅಥವಾ 64-ಅಂಕಿಯ ಎನ್‌ಕ್ರಿಪ್ಟನ್ ಕೀಯನ್ನು ಆರಿಸುವ ಮೂಲಕ, ಬಳಕೆದಾರರು ತಮ್ಮ ಬ್ಯಾಕ್‌ಅಪ್‌ಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿನ್‌ನೊಂದಿಗೆ ಸುರಕ್ಷಿತಗೊಳಿಸಬಹುದಾಗಿದೆ.
ಇದನ್ನೂ ಓದಿ: ಹನಗೋಡು ಸುತ್ತಮುತ್ತ ಬಿರುಗಾಳಿ ಸಹಿತ ಮಳೆ
ಸ್ಕ್ರೀನ್​ ಶೇರಿಂಗ್​:ವಾಟ್ಸಾಪ್ ಹೊಸ ಸ್ಕ್ರೀನ್ ಶೇರಿಂಗ್ ಫೀಚರ್​ನ್ನು ಪರಿಚಯಿಸುತ್ತಿದ್ದು, ವೀಡಿಯೊ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮ ಪರದೆಯನ್ನು ಹಂಚಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.
ಮರುವಿನ್ಯಾಸಗೊಳಿಸಲಾದ ಸೆಟ್ಟಿಂಗ್‌ ಪುಟ:ಮೆಟಾ-ಮಾಲೀಕತ್ವದ ವಾಟ್ಸ್​ಆ್ಯಪ್, ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಹೊಸ ಸೆಟ್ಟಿಂಗ್‌ಗಳ ಇಂಟರ್​ಫೇಸ್​ನ್ನು ಅಭಿವೃದ್ಧಿಪಡಿಸುತ್ತಿದ್ದು ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಇದು ಪ್ರೊಫೈಲ್, ಗೌಪ್ಯತೆ(privacy) ಮತ್ತು ಸಂಪರ್ಕಗಳು(contacts) ಎಂಬ ಮೂರು ಹೊಸ ಪ್ರೊಫೈಲ್ ಶಾರ್ಟ್‌ಕಟ್‌ಗಳನ್ನು ಪರಿಚಯಿಸುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಲೈಕ್ಸ್​, ವ್ಯೂವ್ಸ್​​ಗಾಗಿ ಟ್ರಾಫಿಕ್​ ಸಿಗ್ನಲ್​ನಲ್ಲಿ ಸ್ನಾನ ಮಾಡಿದ ಯುವಕ!
ವಾಟ್ಸಾ​ಆ್ಯಪ್ ಚಾನೆಲ್: ವಾಟ್ಸಾ​ಆ್ಯಪ್ ಸ್ಟೇಟಸ್ ಟ್ಯಾಬ್​ನ್ನು ಚಾನೆಲ್‌ಗಳ ‘ಅಪ್‌ಡೇಟ್‌ಗಳು’ ಎಂದು ಮರುಹೆಸರಿಸಲು ಯೋಜಿಸಿದೆ. ಈ ವಿಭಾಗದಲ್ಲಿ ವಾಟ್ಸಾ​ಆ್ಯಪ್ ಚಾನೆಲ್‌ಗಳನ್ನು ಪಟ್ಟಿ ಮಾಡಲಾಗುತ್ತದೆ. ಚಾನೆಲ್‌ಗೆ ಸೇರುವ ಫೋನ್ ಸಂಖ್ಯೆಗಳು ಮತ್ತು ಬಳಕೆದಾರರ ಮಾಹಿತಿಯನ್ನು ಯಾವಾಗಲೂ ಮರೆಮಾಡಲಾಗುವ ಫೀಚರ್​ನ್ನು ಒದಗಿಸಲು ಯೋಚಿಸುತ್ತಿದೆ.
ಯೂಸರ್ ನೇಮ್ ವೈಶಿಷ್ಟ್ಯ:ವಾಟ್ಸ್​ಆ್ಯಪ್ ಬಳಕೆದಾರರು ತಮ್ಮ ಖಾತೆಗಳಿಗೆ ವಿಶಿಷ್ಟವಾದ ಯೂಸರ್ ನೇಮ್ ಆಯ್ಕೆ ಮಾಡಲು ಅನುವು ಮಾಡಿಕೊಡುವ ಯೂಸರ್ ನೇಮ್ ಫೀಚರ್​ನ್ನು ಒದಗಿಸಲು ಮುಂದಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
