ಲಖನೌ:ಅವರಿಬ್ಬರು ಪ್ರೀತಿಸಿದ್ದರು. ಪ್ರೀತಿಗೆ ಒಪ್ಪಿದ್ದ ಕುಟುಂಬ ಮದುವೆಗೂ ಸಿದ್ಧತೆ ನಡೆಸಿತ್ತು. ಮದುವೆಗೆ ಇನ್ನೇನು ಐದೇ ದಿನಗಳಿವೆ ಎನ್ನುವಾಗ ಭಾವಿ ಪತಿಯೊಂದಿಗೆ ಶಾಪಿಂಗ್​ಗೆ ಹೋಗಿದ್ದ ಯುವತಿ ರಸ್ತೆ ಬದಿ ಹೆಣವಾಗಿ ಪತ್ತೆಯಾಗಿದ್ದಾಳೆ.
ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಟೀನಾ ಹಾಗೂ ಜಿತಿನ್​ಗೆ ಮದುವೆ ನಿಶ್ಚಯವಾಗಿತ್ತು. ಪ್ರೀತಿಸಿದ್ದ ಅವರಿಬ್ಬರ ಮದುವೆಗೆ ಸ್ವತಃ ಜಿತಿನ್​ ಒಪ್ಪಿಗೆ ನೀಡಿರಲಿಲ್ಲವಂತೆ. ಆದರೂ ಹಠ ಮಾಡಿದ ಟೀನಾ ಮದುವೆಗೆ ಒಪ್ಪಿಸಿದ್ದಳು. ಮದುವೆಗೆ ಒಂದಿಷ್ಟು ಸೀರೆ ತೆಗೆದುಕೊಳ್ಳಬೇಕು, ನೀನು ಬಂದು ಸೀರೆ ಆಯ್ಕೆಗೆ ಸಹಾಯ ಮಾಡು ಎಂದು ಜಿತಿನ್ ಟೀನಾಳಿಗೆ ಸೋಮವಾರ ಕರೆದಿದ್ದಾನೆ. ಅದಕ್ಕೆ ಒಪ್ಪಿದ ಟೀನಾ ಅಂಗಡಿಗೆ ಹೋಗಲು ಸಿದ್ಧಳಾಗಿದ್ದಾಳೆ. ಆಕೆಯ ತಾಯಿ ಮಗಳನ್ನು ಬಸ್​ ನಿಲ್ದಾಣವರೆಗೆ ಬಿಟ್ಟು ಬಂದಿದ್ದಾಳೆ.
ಬೆಳಗ್ಗೆ ಮಗಳು ಭಾವಿ ಪತಿಯೊಂದಿಗೆ ಶಾಪಿಂಗ್​ಗೆ ಹೋಗಿದ್ದಾಳೆ ಎಂದುಕೊಂಡಿದ್ದ ಪೋಷಕರಿಗೆ ಮಧ್ಯಾಹ್ನದ ಹೊತ್ತಿದೆ ಅಘಾತವೊಂದು ಎದುರಾಗಿದೆ. ಮನೆಗೆ ಬಂದ ಪೊಲೀಸರು, ರಸ್ತೆಯಲ್ಲಿ ಹೆಣವೊಂದಿದೆ, ನಿಮ್ಮ ಮಗಳಿರಬಹುದೇ ಎಂದು ಬಂದು ನೋಡಿ ಎಂದು ಹೇಳಿದ್ದಾರೆ. ಗಾಬರಿಯಿಂದ ಓಡಿಬಂದ ಪೋಷಕರು ಮಗಳ ಶವವನ್ನು ಕಂಡು ಅಲ್ಲೇ ಜೋರಾಗಿ ಅಳಲಾರಂಭಿಸಿದ್ದಾರೆ.
ಆಕೆ ತನ್ನ ಭಾವಿ ಪತಿಯೊಂದಿಗೆ ಶಾಪಿಂಗ್​ಗೆ ಹೋಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಜಿತಿನ್​ನನ್ನು ಬಂಧಿಸಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. (ಏಜೆನ್ಸೀಸ್)
ಅಮ್ಮನನ್ನು ಕೊಂದು ಸಾವಿರ ಪೀಸ್​ ಮಾಡಿದ ಮಗ! ಹೆತ್ತವಳ ಮಾಂಸವನ್ನೇ ಫ್ರಿಡ್ಜ್​ನಲ್ಲಿಟ್ಟು ತಿನ್ನುತ್ತಿದ್ದ!

ತಲೆ ಮೇಲೆ ಪಾತ್ರೆ ಹೊತ್ತು ನೀರಿನಲ್ಲೇ ಬೈಕ್ ಓಡಿಸಿದ ಮಹಿಳೆ! ಜೈ ಎನ್ನುತ್ತಿದ್ದಾರೆ ನೆಟ್ಟಿಗರು

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
