ಇಡುಕ್ಕಿ:ಸಣ್ಣ ಸಣ್ಣ ಕಾರಣಗಳಿಗೂ ಹದಿ ಹರೆಯದವರು ಸಾವಿನ ಹಾದಿ ಹಿಡಿಯುತ್ತಿರುವುದು ತುಂಬಾ ಕಳವಳಕಾರಿಯಾಗಿದೆ. ಅದರಲ್ಲೂ ಈ ಮೊಬೈಲ್​ ಯುಗದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕಿದೆ. ಇಲ್ಲದಿದ್ದರೆ ಅನಾಹುತಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ.
ಕೇರಳದಲ್ಲಿ 15 ವರ್ಷದ ವಿದ್ಯಾರ್ಥಿನಿ ಮನೆಯ ಸಮೀಪದ ಮರವೊಂದಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಈ ಘಟನೆ ಇಡುಕ್ಕಿ ಜಿಲ್ಲೆಯ ಕನ್ನಂಪಾಡಿಯಲ್ಲಿ ನಡೆದಿದೆ. ಕ್ಷುಲಕ ಕಾರಣಕ್ಕೆ ಬಾಲಕಿ ಸಾವಿಗೆ ಶರಣಾಗಿದ್ದಾಳೆ. ಮೃತಳನ್ನು ದೇವು ಎಂದು ಗುರುತಿಸಲಾಗಿದೆ. ಈಕೆ ಕನ್ನಂಪಾಡಿ ನಿವಾಸಿ ಅಜು ಎಂಬುವರ ಮಗಳು. ದೇವು 10ನೇ ತರಗತಿ ವಿದ್ಯಾರ್ಥಿನಿ.
ತನ್ನ ಶಾಲಾ ಸಹಪಾಠಿ ಹುಡುಗನಿಗೆ ದೇವು ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್​ ಮಾಡುತ್ತಿರುವುದನ್ನು ಗಮನಿಸಿದ ಪಾಲಕರು, ಆಕೆಗೆ ಬೈದು ಬುದ್ಧಿ ಹೇಳಿದ್ದರು. ಇಷ್ಟಕ್ಕೆ ಮನನೊಂದುಕೊಂಡ ದೇವು ಮನೆಯ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡಿದ್ದಾಳೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆಯೊಡ್ಡಿ ನಾಲಿಗೆ ಹರಿಬಿಟ್ಟ ಪಾಕ್​ ನಾಯಕಿ!

ಗಂಡನಿಗೆ ಸರ್ಕಾರಿ ಕೆಲಸ ಸಿಗುತ್ತೆ ಅಂತಾ ಕಿಡ್ನಿ ದಾನ ಮಾಡಿದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

ಬೀಚ್​ಗೆ ಮೈತುಂಬ ಬಟ್ಟೆ ಹಾಕ್ಕೊಂಡು ಬಂದು ಟ್ರೋಲ್​ ಆದ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − ten =
Remember me
