ಲಖನೌ:ಗಂಡನ ಮೇಲಿದ್ದ ಸಿಟ್ಟಿಗೆ ಹೆಂಡತಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಅವರ ಶವದೊಂದಿಗೇ ರಾತ್ರಿಯಿಡೀ ಮಲಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬೆಳಗ್ಗೆ ಆಕೆಯೇ ಊರವರನ್ನು ಕರೆದು ಮಕ್ಕಳ ಕೊಲೆಯ ವಿಚಾರ ಹೇಳಿರುವುದಾಗಿ ವರದಿಯಾಗಿದೆ.
ಗುಲಾಬ್ ಖುರೇಷಿ ಹೆಸರಿನ ವ್ಯಕ್ತಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾನೆ. ಆತನಿಗೆ 12 ವರ್ಷಗಳ ಹಿಂದೆ ಅಂಜುಮ್​ ಹೆಸರಿನ ಮಹಿಳೆಯೊಂದಿಗೆ ಮದುವೆಯಾಗಿದ್ದು, ಉಮರ್​ ಹೆಸರಿನ ಐದು ವರ್ಷದ ಮಗ ಮತ್ತು ಅಂಶಿಕಾ ಹೆಸರಿನ ಮೂರು ವರ್ಷದ ಮಗಳಿದ್ದಳು. ಗಂಡ ಹೆಂಡತಿ ನಡುವೆ ಯಾವಾಗಲೂ ಜಗಳವಾಗುತ್ತಿತ್ತಂತೆ. ಬುಧವಾರದಂದೂ ಅದೇ ರೀತಿಯ ಜಗಳವಾಗಿದೆ. ಸಿಟ್ಟಿಗೆದ್ದ ಗಂಡ ಅದೇ ದಿನ ಅಲ್ಲಿಂದ ಹೊರಟು ಬಟ್ಟೆ ಮಾರುವುದಕ್ಕೆ ಹೊರ ಊರಿಗೆ ಹೋಗಿದ್ದಾನೆ.
ಮನೆಯಲ್ಲಿ ಮಕ್ಕಳೊಂದಿಗೆ ಇದ್ದ ಅಂಜುಮ್​ ಮಾಡಬಾರದ ನಿರ್ಧಾರ ಮಾಡಿದ್ದಾಳೆ. ರಾತ್ರಿ ಮಕ್ಕಳನ್ನು ಹಾಸಿಗೆ ಮೇಲೆ ಮಲಗಿಸಿ, ಕುತ್ತಿಗೆ ಕೊಯ್ದಿದ್ದಾಳೆ. ಅದಾದ ನಂತರ ಅದೇ ಮೃತದೇಹಗಳೊಂದಿಗೆ ರಾತ್ರಿ ಕಳೆದಿದ್ದಾಳೆ. ಬೆಳಗ್ಗೆ ಎದ್ದು ಜೋರಾಗಿ ಅಳಲಾರಂಭಿಸಿದ್ದಾಳೆ. ನಾನೇ ನನ್ನ ಮಕ್ಕಳನ್ನು ಕೊಂದೆ ಎಂದು ಜೋರಾಗಿ ಕೂಗಿ ಹೇಳಲಾರಂಭಿಸಿದ್ದಾಳೆ. ಊರವರು ಮನೆ ಬಳಿ ಬಂದು ನೋಡಿದ್ದಾರೆ. ಮನೆಯ ಕೋಣೆಯಲ್ಲಿ ಒಳಗಿನಿಂದ ಲಾಕ್​ ಮಾಡಿಕೊಂಡಿದ್ದ ಅಂಜುಮ್​ ತನ್ನ ಮಕ್ಕಳನ್ನು ತಾನೇ ಕೊಂದಿರುವುದಾಗಿ ಹೇಳಿದ್ದಾಳೆ.
ಇದಾದ ನಂತರ ಊರವರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆಗೆಸಿ, ಅಂಜುಮ್​ನನ್ನು ವಶಕ್ಕೆ ಪಡೆದಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. (ಏಜೆನ್ಸೀಸ್​)
ಬಿಗ್​ಬಾಸ್​ನಲ್ಲಿ ವೈಷ್ಣವಿ ಮೇಲೆ ಎಗರಿ, ಸೋಲಿಸಲು ಮುಂದಾದ ಶಂಕರ್​! ಮನೆ ಮಂದಿ ಅಸಮಾಧಾನ

‘ಮೊಸಳೆ ಕಣ್ಣೀರು ಹಾಕ್ತಾರೆ’ ಎನ್ನುವುದರ ಹಿಂದಿನ ಕಥೆಯೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + ten =
Remember me
