ಕೊಲ್ಕತ್ತಾ:ದೇಶದಲ್ಲಿ ಕರೊನಾ ವೈರಸ್​ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದ ಜನತೆಗೆ ಮನೆಯಲ್ಲಿಯೇ ಇರಿ ಎಂದು ಸಲಹೆ ನೀಡಲಾಗುತ್ತಿದೆ. ಹೀಗಿರುವಾಗ ಜೈಲೊಂದರಲ್ಲಿ ಕರೊನಾ ವೈರಸ್​ ಬಂದಿದೆ ಎನ್ನುವ ಸುದ್ದಿ ಹರಿದಾಡಿದ್ದು, ನಮ್ಮನ್ನು ಬಿಟ್ಟು ಬಿಡಿ ಎಂದು ಪಟ್ಟು ಹಿಡಿದಿರುವ ಖೈದಿಗಳು ಮತ್ತು ಪೊಲೀಸರ ನಡುವೆ ಹೊಡೆದಾಟ ನಡೆದಿದೆ.
ಕೊಲ್ಕತ್ತಾದ ಡುಮ್​ಡುಮ್​ ಸೆಂಟ್ರಲ್​ ಜೈಲಿನಲ್ಲಿ ಕರೊನಾ ವೈರಸ್​ ಹರಡಿದೆ ಎನ್ನುವ ಸುಳ್ಳು ಸುದ್ದಿಯೊಂದು ಜೈಲಿನಲ್ಲಿರುವ ಖೈದಿಗಳಿಗೆ ಹರಡಿದೆ. ಹಾಗಾಗಿ ನಮ್ಮನ್ನು ಬಿಟ್ಟು ಬಿಡಿ, ಇಲ್ಲಿ ಕರೊನಾ ಇರುವವರ ಜತೆ ನಮ್ಮನ್ನು ಕೂಡಿ ಹಾಕಬೇಡಿ, ನಾವು ಮನೆಗೆ ಹೋಗುತ್ತೇವೆ ಎಂದು ಖೈದಿಗಳು ಒತ್ತಾಯಿಸಿದ್ದಾರೆ. ಆದರೆ ಪೊಲೀಸರು ಅದಕ್ಕೆ ಆಸ್ಪದ ನೀಡದ ಕಾರಣ ಖೈದಿಗಳು ಪೊಲೀಸರಿಗೆ ಹೊಡೆದಿದ್ದಾರೆ. ಹೊಡೆದಾಟ ಹೆಚ್ಚಾಗಿದ್ದು, ಅನೇಕರಿಗೆ ಗಾಯಗಳಾಗಿವೆ. ಆಶ್ರುವಾಯು ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ 10 ವರ್ಷಗಳಿಂದ ಜೈಲಿನಲ್ಲಿ ಒಳ್ಳೆಯ ವರದಿ ಕಾಪಾಡಿಕೊಂಡಿರುವ ಖೈದಿಗಳಿಗೆ ಕರೊನಾ ಭೀತಿ ಹೆಚ್ಚಿರುವ ಈ ಸಮಯದಲ್ಲಿ 15 ದಿನಗಳ ಪೆರೋಲ್​ ನೀಡಬೇಕು ಎಂದು ಜೈಲಿನ ಅಧಿಕಾರಿಗಳು ತೀರ್ಮಾನಿಸಿದ್ದರು. ಇದು ಅನೇಕ ಖೈದಿಗಳಿಂದ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಇದೇ ಸಿಟ್ಟಿನಿಂದ ಕೆಲ ಖೈದಿಗಳು ಜೈಲಿನ ಕೆಲ ಭಾಗಕ್ಕೆ ಬೆಂಕಿ ಹಚ್ಚಿದ್ದು, ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಖೈದಿಗಳ ಸಂಬಂಧಿಗಳು ಖೈದಿಗಳನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿಲ್ಲ. ಯಾವುದೇ ಖೈದಿಯ ಸಂಬಂಧಿಗೆ ಮಾರ್ಚ್​ 15ರವರೆಗೆ ಖೈದಿಗಳನ್ನು ಭೇಟಿ ಮಾಡಲು ಅವಕಾಶವಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
ಓಲಾ, ಊಬರ್​ನಲ್ಲಿಲ್ಲ ಶೇರಿಂಗ್​ ಸೌಲಭ್ಯ; ಕರೊನಾ ವೈರಸ್​ ಹೋಗದೆ ಸೌಲಭ್ಯವಿಲ್ಲವೆಂದ ಸಂಸ್ಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eighteen =
Remember me
