ಅಲಿಗಢ:ಮಹಿಳೆ ಮತ್ತು ಪೊಲೀಸ್ ಅಧಿಕಾರಿಯ ನಡುವೆ ನಡೆದ ಮಾರಾಮಾರಿ ಘಟನೆಯ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಇದನ್ನೂ ಓದಿ:ನಾನೇ ಜಿಲ್ಲಾಧಿಕಾರಿಯಾಗಿದ್ದರೆ ಜಿಲ್ಲಾಡಳಿತದ ವತಿಯಿಂದಲೇ ದಸರಾ ಆಚರಣೆ; ಕೆ.ಶ್ರೀನಿವಾಸ್
ಕುರಿ ಮಾಂಸದ ಅಂಗಡಿಯೊಂದರಲ್ಲಿ ಮಹಿಳೆ ಮತ್ತು ಪೊಲೀಸ್ ಅಧಿಕಾರಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿದೆ. ಈ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ವರದಿಯಾಗಿದೆ.
ಅಕರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಖಾನಾ ಚೌಕಿಯಲ್ಲಿ ಈ ಘಟನೆ ಸಂಭವಿಸಿದ್ದು, ಮಹಿಳೆ ಮತ್ತು ಪೊಲೀಸ್ ಅಧಿಕಾರಿಯೊಬ್ಬರು ಮಾಂಸದಂಗಡಿಯೊಳಗೆ ಜಟಾಪಟಿ ನಡೆಸಿದ್ದಾರೆ. ಇಬ್ಬರ ನಡುವಿನ ಗದ್ದಲಕ್ಕೆ ಅಂಗಡಿಯ ಸುತ್ತಮುತ್ತಲಿದ್ದ ಜನ ತಕ್ಷಣವೇ ಸ್ಥಳದಲ್ಲಿ ಜಮಾಯಿಸಿದ್ದಾರೆ.
ಇದನ್ನೂ ಓದಿ:ಹುಲಿ ಉಗುರು ಕೇಸ್​ನಲ್ಲಿ ಕೆಲವರ ಬಂಧನ: ಸಚಿವೆಯ ಪುತ್ರ, ಅಳಿಯನ ಮೇಲೆ ಕ್ರಮ ಯಾಕಿಲ್ಲ ಎಂದು ನೆಟ್ಟಿಗರ ಆಕ್ರೋಶ
ಇಬ್ಬರು ನಡುವೆ ಮಾರಾಮಾರಿ ನಡೆಯಲು ಕಾರಣ ಮಹಿಳೆಯ ಬಳಿ ಪೊಲೀಸ್ ಅಧಿಕಾರಿ ಎರಡು ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸ್ ಅಧಿಕಾರಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಂಗಡಿ ಮಾಲೀಕ ಮೆಹಂದಿ ಹಸನ್ ಆರೋಪಿಸಿದ್ದಾರೆ.
अलीगढ़ में पिलखना चौकी इंचार्ज की दबंगई का वीडियो वायरलचौकी इंचार्ज पर महिलाओं से मारपीट का लगा आरोपपुलिस,महिलाओं के बीच हाथापाई का वीडियो वायरलदुकान चालक मेहंदी हसन ने चौकी इंचार्ज पर 2 लाख की रिश्वत मांगने का लगाया आरोपथाना अकराबाद इलाके के पिलखना चौकी का मामला.#Aligarhpic.twitter.com/vC6kep1gsK
— Ek Sandesh (@EkSandesh24)October 25, 2023

ಪೊಲೀಸ್ ಅಧಿಕಾರಿ ತನ್ನ ಅಂಗಡಿಯೊಳಗೆ ಮಹಿಳೆಯ ಮೇಲೆ ಹಲ್ಲೆ ನಡೆಸಿದರು ಮತ್ತು 2 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟರು. ಲಂಚ ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಬೆದರಿಕೆಯು ಹಾಕಿದರು ಎಂದು ಹಸನ್ ಹೇಳಿದ್ದಾರೆ,(ಏಜೆನ್ಸೀಸ್).
ಸೋಲೋ ಪ್ಯಾರಾಗ್ಲೈಡಿಂಗ್; ದಾಖಲೆ ಬರೆದ ನಟ ಕಿರಣ್ ರಾಜ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − six =
Remember me
