ನವದೆಹಲಿ:ಆಕೆ ಕಬಡ್ಡಿ ಆಟಗಾತಿ, 20 ವರ್ಷದ ಆ ಯುವತಿ ಕ್ರೀಡಾ ತರಬೇತಿ ಸಂಸ್ಥೆಗೆ ತೆರಳಲು ಸಜ್ಜಾಗುತ್ತಿದ್ದಳು. ಅಷ್ಟರಲ್ಲಿ ಇನ್ನೊಂದು ಕೋಣೆಯಿಂದ ತಾಯಿ ಚೀರಾಡಿದ ಸದ್ದು ಕೇಳಿ ಬಂದವಳಿಗೆ ಕಾಣಿಸಿದ್ದು, ಮಹಿಳೆಯರ ಒಂದು ಗುಂಪು. ತಾಯಿ ಮೇಲೆ ಹಲ್ಲೆ ನಡೆಯುತ್ತಿದ್ದುದನ್ನು ನೋಡಿ ತಪ್ಪಿಸಲು ಹೋದ ಕಬಡ್ಡಿ ಆಟಗಾತಿ ಮೇಲೂ ಗುಂಪು ಹಲ್ಲೆ ನಡೆಸಿದ್ದು, ಆಕೆಯ ತಲೆಗೂದಲನ್ನು ಕೂಡ ಕತ್ತರಿಸಿ ಹಾಕಿದೆ.
ಈ ಗುಂಪು ಘರ್ಷಣೆಯ ವಿಡಿಯೋ ವೈರಲ್​ ಆಗಿದ್ದು, ಕಬಡ್ಡಿ ಆಟಗಾತಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಯೋಧರೊಬ್ಬರ ಪತ್ನಿಯನ್ನು ಬಂಧಿಸಿದ್ದಾರೆ. ಸೇನೆಯಲ್ಲಿರುವ ವ್ಯಕ್ತಿಯೊಬ್ಬರ ಪತ್ನಿಯಾಗಿರುವ ಶ್ರಬಂತಿ ಮಲಿಕ್​ ಈ ಪ್ರಕರಣದಲ್ಲಿ ಆರೋಪಿ. ಶ್ರಬಂತಿ ತನ್ನ ಪತಿಯೊಂದಿಗೆ ಆ ಕಬಡ್ಡಿ ಆಟಗಾತಿಯ ತಾಯಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪಿಸಿ ಈ ಹಲ್ಲೆ ನಡೆಸಿದ್ದಾರೆ.
ಪಶ್ಚಿಮಬಂಗಾಳದ ಪರ್ಗಾನಾಸ್ ಜಿಲ್ಲೆಯ ಬೊನ್​ಗೋನ್​ನಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ಈ ಕುರಿತ ವಿಡಿಯೋ ವೈರಲ್ ಆಗಿತ್ತು. ನಾನು ತರಬೇತಿ ಕೇಂದ್ರಕ್ಕೆ ತೆರಳಲು ಸಜ್ಜಾಗುತ್ತಿದ್ದಾಗ ಮಹಿಳೆಯರ ಗುಂಪೊಂದು ಬಂದು ತಾಯಿಯ ಮೇಲೆ ದಾಳಿ ನಡೆಸಿತ್ತು. ತಾಯಿಯನ್ನು ರಕ್ಷಿಸಲು ಹೋದ ನನ್ನ ಮೇಲೂ ದಾಳಿ ಮಾಡಿ, ಕೂದಲು ಕತ್ತರಿಸಿ, ಮನೆಯಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಯಾರೂ ನಮ್ಮ ರಕ್ಷಣೆಗೆ ಬರಲಿಲ್ಲ ಎಂದು ಜಿಲ್ಲಾಮಟ್ಟದ ಆ ಕಬಡ್ಡಿ ಆಟಗಾತಿ ಹೇಳಿಕೊಂಡಿದ್ದಾರೆ. ಆರೋಪಿ ಮಹಿಳೆಯನ್ನು ಬಂಧಿಸಿರುವ ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಅಯ್ಯೋ ಅವ್ನ ಮದ್ವೆಯಾಗಿದೆ ಅಂತ ಗೊತ್ತಿದ್ರೆ ಅವ್ನ ಜತೆ ಹೀಗೆಲ್ಲಾ ಮಾಡ್ತಾನೇ ಇರ್ಲಿಲ್ಲ: ಕಣ್ಣೀರಿಟ್ಟ ರಾಖಿ ಸಾವಂತ್​

ಉದ್ಯೋಗಿಗಳಿಗೆ ಗುಡ್​ ನ್ಯೂಸ್​! ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಲಿದೆ ವೇತನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 6 =
Remember me
