ನವದೆಹಲಿ:ನೀವು ಬಿಡಿ, ಸಿಗರೇಟು ಸೇದುವಾಗ ಯಾರಾದರೂ ಬಂದು ಬಿಡಿ ಕೇಳಿದರೆ ಸ್ವಲ್ಪ ಹುಷಾರಾಗಿರಿ. ಏಕೆಂದರೆ ಕೆಲವರು ಯಾವ ರೀತಿಯ ಕ್ರೂರತ್ವವನ್ನು ತುಂಬಿಕೊಂಡಿರುತ್ತಾರೆಂದರೆ, ನೀವು ಬಿಡಿ ಕೊಡಲು ನಿರಾಕರಿಸಿದರೆ ನಿಮ್ಮನ್ನು ಕೊಲೆ ಮಾಡಿಯೇ ಸಿಟ್ಟು ತೀರಿಸಿಕೊಳ್ಳುತ್ತಾರೆ. ಅಂತದ್ದೊಂದು ಘಟನೆ ಈಗ ದೆಹಲಿಯ ಶಾಹೀನ್​ಬಾಗ್​ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಹೈದರಾಬಾದ್​ಗೆ ಮರುನಾಮಕರಣ ಮಾಡಲು ಹೊರಟ ಯೋಗಿ; ಬಿಜೆಪಿ ಗೆದ್ದರೆ ಭಾಗ್ಯನಗರವೆಂದು ಹೆಸರು ಬದಲಾವಣೆ
ಸಿದ್ದಿಖಿ ಹೆಸರಿನ 49 ವರ್ಷದ ವ್ಯಕ್ತಿ ನದೀಪ್​ ಹೆಸರಿನ ವ್ಯಕ್ತಿಯ ಮನೆಯಲ್ಲಿ ಕೆಲಸ ಮಾಡುವುದಕ್ಕಿದ್ದ. ಸಿದ್ದಿಖಿ ಮತ್ತು ನದೀಮ್​ ನಡುವೆ ಸ್ನೇಹವಿತ್ತು. ಪ್ರತಿದಿನ ಸಂಜೆ ಯಮುನಾ ನದಿ ತೀರದಲ್ಲಿ ಕುಳಿತು ಬೀಡಿ ಸೇದುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಇತ್ತೀಚೆಗೆ ಒಂದು ದಿನ ಸಂಜೆ ಅದೇ ರೀತಿ ಯಮುನಾ ನದಿ ತೀರದಲ್ಲಿ ಕುಳಿತು ಬೀಡಿ ಸೇದುತ್ತಿದ್ದರು.
ಇದನ್ನೂ ಓದಿ:ಲಾಕ್​ಡೌನ್​ನಲ್ಲಿ ಅತ್ತೆ ಮನೆಯಲ್ಲಿದ್ದ ಅಳಿಯನಿಗೆ ನಾದಿನಿ ಮೇಲೆ ಪ್ರೀತಿ; ತಂಗಿಯೊಡನೆ ಕಾಲ್ಕಿತ್ತ ಪತಿರಾಯ
ಸಿದ್ದಿಖಿ ಬಳಿ ಬಂದ ಮೂವರು ಯುವಕರು, ಆತನ ಬಳಿ ಬೀಡಿ ಕೊಡುವಂತೆ ಕೇಳಿದ್ದಾರೆ. ಆಗ ಆತ ಇಲ್ಲ, ಕೊಡಲಾಗುವುದಿಲ್ಲ ಎಂದು ಉತ್ತರಿಸಿದ್ದಾನೆ. ಸಿಟ್ಟಿಗೆದ್ದ ಯುವಕರು ಅವರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಭಯದಿಂದ ಸಿದ್ದಿಖಿ ಮತ್ತು ನದೀಮ್​ ಓಡಲಾರಂಭಿಸಿದ್ದಾರೆ. ಆದರೆ ಬೆನ್ನು ಬಿಡದ ಯುವಕರು ಹತ್ತಿರದ ಶಾಪ್​ ಒಂದರಲ್ಲಿ ಚಾಕು ಕಿತ್ತುಕೊಂಡು ಬಂದು ಸಿದ್ದಿಖಿಗೆ ಚುಚ್ಚಿದ್ದಾರೆ. ರಕ್ತದಲ್ಲಿ ಬಿದ್ದು ಒದ್ದಾಡಿದ ಸಿದ್ದಿಖಿಯನ್ನು ಕಂಡು ಓಡಿಹೋಗಿದ್ದಾರೆ. ನದೀಮ್​ ಸಿದ್ದಿಖಿಯನ್ನು ಮನೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಮಾಡಿದ್ದಾನೆ. ಆತನ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಸ್ಪತ್ರೆಗೆ ತೆರಳುವುದರೊಳಗೆ ಸಿದ್ದಿಖಿ ಕೊನೆಯುಸಿರೆಳೆದಿದ್ದಾನೆ. ಮೂವರು ಆರೋಪಿಗಳನ್ನು ಮೊಹಮ್ಮದ್​ ಫೈಜನ್​ (20), ಮೊಹಮ್ಮದ್ ಉಸ್ಮಾನ್​ (22) ಮತ್ತು ಜಹೀರ್​ ಮನ್ಸೂರಿ (20) ಎಂದು ಗುರುತಿಸಲಾಗಿದೆ. (ಏಜೆನ್ಸೀಸ್​)
ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

ಇನ್ನೇನು ಮೃತದೇಹ ಶವಗಾರದಲ್ಲಿಡಬೇಕು ಅಷ್ಟರಲ್ಲಿ ದಿಢೀರನೆ ಎದ್ದು ಕುಳಿತು ಕಣ್ಣೀರಿಟ್ಟ ಸತ್ತ ವ್ಯಕ್ತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + six =
Remember me
