ಬಿಜ್ನೋರ್:ಉತ್ತರ ಪ್ರದೇಶದ ಜಿಲ್ಲೆಯೊಂದರಲ್ಲಿ ಶ್ವಾನ ಖರೀದಿಗೆ ಸಂಬಂಧಿಸಿ ಎರಡು ಗುಂಪುಗಳ ಮಧ್ಯೆ ನಡೆದ ಸಂಘರ್ಷಣೆಯಲ್ಲಿ ಒಬ್ಬ ದಾರಿಹೋಕ ಸೇರಿ ಇಬ್ಬರು ಸಾವಿಗೀಡಾಗಿದ್ದಾರೆ.ಎರಡೂ ಗುಂಪುಗಳು ಒಂದೇ ನಾಯಿಯನ್ನು ಖರೀದಿಸಲು ಮುಂದಾಗಿದ್ದು, ಇದೇ ಕಾರಣ ಮಂಗಳವಾರ ರಾತ್ರಿ ಅವರ ಮಧ್ಯೆ ವಾಗ್ವಾದ ನಡೆದು ವಾದವು ಹಿಂಸಾತ್ಮಕ ತಿರುವು ಪಡೆದುಕೊಂಡು ಎರಡೂ ಗುಂಪುಗಳ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು.
ಇದನ್ನೂ ಓದಿ:ಮಗನೇ.. ನನ್ನನ್ನು ಕೊಂದುಬಿಡು ಎಂದು ಅಂಗಲಾಚಿದ್ದ ತಾಯಿಯನ್ನು ದೇವರು ಕಾಪಾಡಲಿಲ್ಲ
ಗುಂಡಿನ ಚಕಮಕಿಯಲ್ಲಿ ದಾರಿಹೋಕ ಪ್ರಶಾಂತ್ ಮತ್ತು ಸುರೇಂದ್ರ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಇನ್ನೊಬ್ಬಾತನನ್ನು ಮೀರತ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಮ್​​ಪೂರ್ ಪೊಲೀಸ್ ವಲಯದಲ್ಲಿ ಈ ಘಟನೆ ನಡೆದ ನಂತರ ಪರಾರಿಯಾದ ಆರೋಪಿಗಳಿಗಾಗಿ ಪೊಲೀಸ್ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ ಎಂದು ಬಿಜ್ನೋರ್ ಪೊಲೀಸ್ ಅಧೀಕ್ಷಕ ಸಂಜೀವ್ ತ್ಯಾಗಿ ತಿಳಿಸಿದ್ದಾರೆ. ಘಟನೆಯಲ್ಲಿ ಎರಡೂ ಗುಂಪುಗಳು ಅಕ್ರಮ ಬಂದೂಕುಗಳನ್ನು ಬಳಸಿದ್ದು, ಆ ಎರಡೂ ಗುಂಪುಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.ಎಂದು ಅವರು ಹೇಳಿದ್ದಾರೆ.
ಶಾಕಿಂಗ್ ನ್ಯೂಸ್…! ದೃಷ್ಟಿಹೀನ ಮಗನನ್ನು ಬಲಿಪಡೆದು ತಾನೂ ಸಮಾಧಿ ಸೇರಿದ ಮಹಾತಾಯಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 14 =
Remember me
