ಕೋಲ್ಕತ:ಬಂಗಾಳದ ಬೀರ್​ಭೂಮ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಹಿಂಸಾಚಾರ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು ಆಳುವ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿ ಶಾಸಕರು ಅಕ್ಷರಶಃ ಹೊಡೆದಾಡಿಕೊಂಡಿದ್ದಾರೆ. ಶಾಸಕರ ಮಾರಾಮಾರಿಯಿಂದಾಗಿ ವಿಧಾನಸಭೆ ರಣರಂಗವಾಗಿ ಪರಿವರ್ತನೆಗೊಂಡಿದ್ದು ಐವರು ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಟಿಎಂಸಿ ನಾಯಕನೊಬ್ಬನ ಹತ್ಯೆ ಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಎಂಟು ಜನರ ಸಜೀವ ದಹನವಾಗಿತ್ತು. ವಿಷಯ ಸೋಮವಾರ ಅಸೆಂಬ್ಲಿ ಅಧಿವೇಶನದಲ್ಲಿ ಪ್ರಸ್ತಾಪಗೊಂಡಾಗ ಉಭಯ ಕಡೆಗಳ ಸದಸ್ಯರು ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋದರಲ್ಲದೆ ಕೂಗಾಟ, ಬೈದಾಟದಿಂದಾಗಿ ಸದನದಲ್ಲಿ ಕೋಲಾಹಲ ಉಂಟಾಯಿತು. ಸುವೇಂದು ಅಧಿಕಾರಿ, ಮನೋಜ್ ತಿಗ್ಗಾ, ಶಂಕರ್ ಘೋಷ್, ದೀಪಕ್ ಬರ್ಮನ್ ಮತ್ತು ನರಹರಿ ಮಹತೋ ಅಮಾನತಾದ ಶಾಸಕರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕುಸಿಯುತ್ತಿದ್ದು ಈ ಬಗ್ಗೆ ಹೇಳಿಕೆ ನೀಡುವಂತೆ ಬಿಜೆಪಿ ಸದಸ್ಯರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಆಗ್ರಹಿಸಿದರು. ಈ ಸಂದರ್ಭದಲ್ಲಿ ಆಳುವ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಎರಡೂ ಕಡೆಗಳ ಶಾಸಕರು ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿದರು. ಟಿಎಂಸಿ ಶಾಸಕರು ಸದನದೊಳಗೆ ತಮ್ಮ ಶಾಸಕರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಸುಮಾರು 25 ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ವಿಡಿಯೋ ವೈರಲ್:ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ವಕ್ತಾರ ಷೆಹಜಾದ್ ಜೈಹಿಂದ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋ ದೃಶ್ಯಾವಳಿಗಳಲ್ಲಿ ಟಿಎಂಸಿ ಮತ್ತು ಬಿಜೆಪಿ ಶಾಸಕರು ಹೊಡೆದಾಡಿಕೊಳ್ಳುತ್ತಿರುವುದು ಕಾಣಿಸುತ್ತದೆ. ಸ್ಪೀಕರ್, ಮಾರ್ಷಲ್​ಗಳು ಮತ್ತು ಪೊಲೀಸ್ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಹೊಡೆದಾಟ ನಿಲ್ಲಲಿಲ್ಲ.
ಗೋವಾ ಸಿಎಂ ಸಾವಂತ್ ಪ್ರಮಾಣ:ಸತತ ಎರಡನೇ ಅವಧಿಗೆ ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಶ್ಯಾಮಾ ಪ್ರಸಾದ್ ಮುಖರ್ಜಿ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮೊದಲಾದವರು ಇದ್ದರು. ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೆ ಪ್ರಮಾಣ ವಚನ ಬೋಧಿಸಿದರು.

ದೆಹಲಿ ಅಸೆಂಬ್ಲಿಯಲ್ಲೂ ಗದ್ದಲ:ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಕುಮಾರ್ ಗುಪ್ತಾ ಮಾಡಿದ್ದಾರೆನ್ನಲಾದ ಮಾನಹಾನಿಕರ ಟೀಕೆಗಳನ್ನು ಆಳುವ ಆಪ್ ಶಾಸಕರು ತೀವ್ರವಾಗಿ ವಿರೋಧಿಸಿದ್ದರಿಂದ ಸೋಮವಾರ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಬಿಜೆಪಿಯ ಮೂವರು ಶಾಸಕರನ್ನು ಸ್ಪೀಕರ್ ರಾಮ್ ನಿವಾಸ್ ಗೋಯಲ್ ದಿನದ ಕಲಾಪದ ಮಟ್ಟಿಗೆ ಅಮಾನತು ಮಾಡಿದರು. ಅನಿಲ್ ಬಾಜಪಾೖ, ಜಿತೇಂದ್ರ ಮಹಾಜನ್ ಮತ್ತು ಅಜಯ್ ಮಹಾವರ್ ಅಮಾನತಾದ ಶಾಸಕರು. ಈ ಮೂರೂ ಶಾಸಕರು ಬೆಂಚುಗಳ ಮೇಲೆ ನಿಂತು ಗದ್ದಲ ಎಬ್ಬಿಸಿದಾಗ ಕುಳಿತುಕೊಳ್ಳುವಂತೆ ಸ್ಪೀಕರ್ ಮಾಡಿದ ಮನವಿ ಫಲಕೊಡಲಿಲ್ಲ. ಬೆಳಿಗ್ಗೆ ಕಲಾಪ ಆರಂಭಗೊಂಡಾಗ ಆಪ್ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಸದನವನ್ನು ಪ್ರವೇಶಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 1 =
Remember me
