ಗ್ರೇಟರ್​ ನಾಯ್ಡ:ರೈಲ್ವೆ ಟಿಕೆಟ್​​ ರದ್ದು ಮಾಡಿಸಿದಾಗ 300 ರೂಪಾಯಿ ಕ್ಯಾನ್ಸಲೇಷನ್​ ಚಾರ್ಜ್​ ಪಡೆದ ಎಂಬ ಕಾರಣಕ್ಕೆ ಆರಂಭವಾದ ಜಗಳದಲ್ಲಿ ಅಂಗಡಿ ಮಾಲಿಕನ ಮೇಲೆ ಕಾರು ಹಾಯಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಉತ್ತರಪ್ರದೇಶದ ಗೌತಮಬುದ್ಧನಗರ ಜಿಲ್ಲೆಯ ಗ್ರೇಟರ್​ ನಾಯ್ಡ ಪ್ರದೇಶದಲ್ಲಿ ನಡೆದ ಈ ಅಪರಾಧದ ಸಂಬಂಧವಾಗಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದರೆ, ಮತ್ತೊಬ್ಬನ ಪತ್ತೆ ಕಾರ್ಯ ನಡೆದಿದೆ.
ಘರ್​​ಬಾರಾ ಗ್ರಾಮದ ನಿವಾಸಿಗಳಾದ ನಕುಲ್​ ಸಿಂಗ್(30)​ ಮತ್ತು ಅರುಣ್​ ಸಿಂಗ್(28)​ ಸೋದರರು,​ ಗ್ರಾಮದಲ್ಲಿ ಮೊಬೈಲ್ ಫೋನ್​ ಅಂಗಡಿ ಇಟ್ಟುಕೊಂಡು ಸ್ಥಳೀಯರಿಗೆ ರೈಲ್ವೆ ಟಿಕೆಟ್​ ಬುಕಿಂಗ್​ ಸೇವೆ ಒದಗಿಸುತ್ತಿದ್ದ 30 ವರ್ಷದ ನಿತಿನ್​ ಶರ್ಮಾನನ್ನು ಕೊಲೆ ಮಾಡಿರುವ ಆರೋಪ ದಾಖಲಾಗಿದೆ. ಕಳೆದ ಐದು ವರ್ಷಗಳಿಂದ ಈ ಅಂಗಡಿ ನಡೆಸುತ್ತಿದ್ದ ಮೃತ ನಿತಿನ್​ ಶರ್ಮಾಗೆ ಹೆಂಡತಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:ಮಂಗಳೂರಿನಲ್ಲಿ ಬಾಗಲಕೋಟೆ ಮೂಲದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
ಎರಡು ವಾರಗಳ ಹಿಂದೆ ನಕುಲ್​ ಸಿಂಗ್​ ಜಮ್ಮುಗೆ ಒಂದು ರೈಲ್ವೇ ಟಿಕೆಟ್​​ ಬುಕ್​​ ಮಾಡಿದ್ದ. ನಂತರ ಕ್ಯಾನ್ಸಲ್​ ಮಾಡಿಸಿದ್ದ. ನಿತಿನ್​ ಅವನ ಟಿಕೆಟ್​​ ಹಣವನ್ನು 300 ರೂ. ಕ್ಯಾನ್ಸಲೇಷನ್​​ ಚಾರ್ಜ್​ ಕಟ್​ ಮಾಡಿಕೊಂಡು ಹಿಂದಿರುಗಿಸಿದ್ದ ಎನ್ನಲಾಗಿದೆ. ಸೋಮವಾರ, ನಕುಲ್​ ಮತ್ತು ಅರುಣ್​​ ನಿತಿನ್​ ಅಂಗಡಿಗೆ ಬಂದು 300 ರೂ. ಕೊಡುವಂತೆ ಕೇಳಿದ್ದು, ವಾಗ್ವಾದ ಉಂಟಾಗಿದೆ ಎಂದು ನಿತಿನ್​ ತನ್ನ ಚಿಕ್ಕಪ್ಪ ಮೆಹೆರ್​ಚಂದ್​ಗೆ ಕರೆ ಮಾಡಿದ. ಅವರು ಅಂಗಡಿಗೆ ಹೋಗುವಷ್ಟರಲ್ಲಿ, ನಿತಿನ್​ ಅಂಗಡಿಯಾಚೆ ನಿಂತಿದ್ದ. ಆರೋಪಿಗಳಿಬ್ಬರು ಕೋಪದಿಂದ ತಮ್ಮ ಮಾರುತಿ ಸ್ವಿಫ್ಟ್​​ ಕಾರಿನೊಳಕ್ಕೆ ಹತ್ತಿ ಕಾರನ್ನು ನಿತಿನ್​ ಮೇಲೆ ಹಾಯಿಸಿದ್ದಲ್ಲದೆ, 2-3 ಬಾರಿ ಅವನ ಮೇಲೇ ರಿವರ್ಸ್​ ಗೇರಲ್ಲಿ ಓಡಿಸಿದರು. ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ನಿತಿನ್​ನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆತ ಚಿಕಿತ್ಸೆ ಫಲಿಸದೆ ಮೃತಪಟ್ಟ ಎಂದು ನಿತಿನ್​​ ತಂದೆ ಸತ್ವೀರ್​ ಶರ್ಮಾ ಸಲ್ಲಿಸಿರುವ ದೂರಿನಲ್ಲಿ ಹೇಳಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗ್ರೇಟರ್​ ನಾಯ್ಡಾದ ಎಕೋಟೆಕ್​-1 ಠಾಣೆ ಪೊಲೀಸರು, ಘಟನಾ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಗಳ ಹುಡುಕಾಟ ಆರಂಭಿಸಿದರು. ಮಂಗಳವಾರ ನಕುಲ್​ ಕಾರಿನಲ್ಲಿ ಹೋಗುತ್ತಿರುವಾಗ ಸಿಕ್ಕಿಹಾಕಿಕೊಂಡಿದ್ದಾನೆ. ಅವನನ್ನು ಬಂಧಿಸಿ, ಕೃತ್ಯದಲ್ಲಿ ಬಳಸಲಾದ ಕಾರನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಅರುಣ್​ ಸಿಂಗ್​ನ ಪತ್ತೆ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.(ಏಜೆನ್ಸೀಸ್)
ಶಾಲಾ ವಿದ್ಯಾರ್ಥಿನಿಯರ ಮೇಲೆ ಪ್ರಾಂಶುಪಾಲ-ಶಿಕ್ಷಕರಿಂದ ಗ್ಯಾಂಗ್​ರೇಪ್​; ಶಿಕ್ಷಕಿಯರು ವಿಡಿಯೋ ಮಾಡುತ್ತಿದ್ದರು!

ZOOM​ ಕಾಲಲ್ಲೇ 900 ಜನರನ್ನ ಕೆಲಸದಿಂದ ತೆಗೆದ CEO! ವಿಡಿಯೋ ವೈರಲ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + twenty =
Remember me
