ತಲಾಲಾ (ಗುಜರಾತ್‌):ಗುಜರಾತ್‌ನ ತಲಾಲಾ ಗಿರ್‌ ರಾಷ್ಟ್ರೀಯ ಉದ್ಯಾನದಲ್ಲಿ ಕಂಡು ಬಂದಿರುವ ಸಿಂಹ ಮತ್ತು ಸಿಂಹಿಣಿಯ ಫೈಟಿಂಗ್‌ ದೃಶ್ಯ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಷ್ಟೇ ಅಲ್ಲದೇ ಈ ದೃಶ್ಯವನ್ನು ನೋಡಿದ ಜನರೆಲ್ಲರೂ ಇದನ್ನು ಮನುಷ್ಯರಿಗೆ ಹೋಲಿಸಿಕೊಂಡು ಜೋಕ್‌ ಮಾಡುತ್ತಿದ್ದಾರೆ. ಈ ಕುರಿತು ರಾಶಿರಾಶಿ ಕಮೆಂಟ್‌ಗಳನ್ನು ಬರೆಯುತ್ತಿದ್ದಾರೆ.
‘ವೈಲ್ಡ್ ಇಂಡಿಯಾ’ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಬಿಜೆಪಿ ರಾಜಕಾರಣಿ ಮತ್ತು ಛಾಯಾಗ್ರಾಹಕ ಬಿನ್ ಆಶರಾ ಸೆರೆಹಿಡಿದಿದ್ದಾರೆ.
22 ಸೆಕೆಂಡುಗಳ ಈ ವಿಡಿಯೋದಲ್ಲಿ ಸಿಂಹದ ಮೇಲೆ ಸಿಂಹಿಣಿ ಯಾಕೋ ಕೋಪ ಮಾಡಿಕೊಂಡಿದೆ. ಗುರ್‌ ಗುರ್‌ ಎಂದು ಕಿರುಚಾಡುತ್ತಿದೆ. ಆದರೆ ಸಿಂಹ ಮಾತ್ರ ಏನು ಆಗದವರ ಹಾಗೆ ಸುಮ್ಮನೇ ಅತ್ತಿತ್ತು ಓಡಾಡುತ್ತಿದೆ. ಆದರೆ ಸಿಂಹಿಣಿ ಮಾತ್ರ ಸುಮ್ಮನಿರದೇ ಸಿಂಹದ ಮೇಲೆ ದಾಳಿ ಮಾಡಲು ಮುಂದಾದರೂ ಶಬ್ದ ಮಾಡುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದೆ.
The Royal affair captured in Gir forest by@zubinashara. Headphone recommended.pic.twitter.com/TgCfRP07rT
— The Wild India (@the_wildindia)July 26, 2020

ಆದರೆ ಸಿಂಹ ಮಾತ್ರ ಕಂ ಕಿಂ ಅನ್ನದೇ ಸುಮ್ಮನೆ ಇರುವುದನ್ನು ನೋಡಿ, ಎಷ್ಟು ಕಿರುಚಾಡಿದರೂ ಪ್ರಯೋಜನವಿಲ್ಲ ಎಂದು ಸಿಂಹಿಣಿ ತಣ್ಣಗೆ ಹೋಗಿ ಕುಳಿತುಕೊಂಡಿರುವ ದೃಶ್ಯ ಇದಾಗಿದೆ.
ಹಂಚಿಕೊಂಡಾಗಿನಿಂದ, ಕ್ಲಿಪ್ ಅನ್ನು ಸುಮಾರು 95,000 ಬಾರಿ ವೀಕ್ಷಿಸಲಾಗಿದೆ. ಸುಮಾರು 5,000 ಲೈಕ್‌ಗಳು ಮತ್ತು 1,100 ರಿಟ್ವೀಟ್‌ಗಳೊಂದಿಗೆ, ನೆಟಿಜನ್‌ಗಳು ತಮಾಷೆ ಮಾಡುತ್ತಿದ್ದಾರೆ.
ಇಬ್ಬರ ನಡುವಿನ ಜಗಳ ಖಂಡಿತವಾಗಿಯೂ ಗಂಡ ಹೆಂಡತಿ ನಡುವಿನ ಪ್ರಾಪಂಚಿಕ ಜಗಳದಂತೆ ಕಾಣುತ್ತದೆ ಎಂದು ಕೆಲವರು ಹೇಳಿದ್ದರೆ, ಬಹುಶಃ ಹೆಂಡತಿ ಹೇಳಿದ ಸಾಮಾನುಗಳನ್ನು ಗಂಡ ತರಲಿಲ್ಲ, ಅದಕ್ಕೆ ಹೆಂಡತಿಗೆ ಸಿಟ್ಟುಬಂದಿದೆ, ಆದರೆ ಗಂಡ ಲಾಕ್‌ಡೌನ್‌ ಕಣೆ ಎಂದು ಸಮಾಧಾನ ಮಾಡುತ್ತಿದ್ದಾನೆ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಉಲ್ಲಾಸ್‌ ಎನ್ನುವವರು, ‌“ಅಡುಗೆ ಮಾಡುವುದು ನಿಮ್ಮ ಸರದಿ. ಬೇಗ ಹೋಗಿ ಅಡುಗೆ ಮಾಡಿ ಎಂದು ಹೆಂಡತಿ ಜೋರು ಮಾಡುತ್ತಿದ್ದಾಳೆ’ ಎಂದಿದ್ದಾರೆ.
ಕಿವಿ ಮೇಲೆ ಏನು ಹಾಕಿಕೊಳ್ಳದ ಇಂಥ ಗಂಡಂದಿರು ಇರುವಾಗ ಹೆಣ್ಣುಮಕ್ಕಳ ಸ್ಥಿತಿ ಇಷ್ಟೇ. ಎಷ್ಟೇ ಕಿರುಚಾಡಿದರೂ ಆಮೇಲೆ ಸೋತು ತಣ್ಣಗಾಗಲೇಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ.
₹100 ಲಂಚ ಕೊಡದ ಹುಡುಗನಿಗೆ ಸಿಕ್ಕಿತು ಮನೆ, ಉಚಿತ ಶಿಕ್ಷಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − fourteen =
Remember me
