ಯುರೋಪಿನಐರ್ಲೆಂಡ್​ನಲ್ಲಿ ಜನಸಂಖ್ಯೆ 50 ಲಕ್ಷಕ್ಕಿಂತಲೂ ಕಡಿಮೆ. ಇಲ್ಲಿ ಕರೋನ ಸೋಂಕಿನ ಪ್ರಥಮ ಪ್ರಕರಣ ಕಂಡುಬಂದಿದ್ದು ಫೆಬ್ರವರಿ 29ರಂದು. ಈಗ 4 ಸಾವಿರಕ್ಕೂ ಅಧಿಕ ಜನರಲ್ಲಿ ಕೋವಿಡ್-19 ರೋಗ ಕಾಣಿಸಿಕೊಂಡಿದೆ. ಆ ಪೈಕಿ ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.
ಅಲ್ಲದೆ ನೂರಾರು ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಇಲ್ಲಿ ಡಬ್ಲಿನ್​ನ ಬ್ಯೂಮೌಂಟ್ ಆಸ್ಪತ್ರೆಯಲ್ಲಿನ ಕೋವಿಡ್ ರೋಗಿಗಳ ಕ್ರಿಟಿಕಲ್ ಕೇರ್ ಯುನಿಟ್​ನಲ್ಲಿ ನಾನು ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಿಂತಾಜನಕ ಅಂಶ ಏನೆಂದರೆ, ಇಲ್ಲಿ ಐಸಿಯುನಲ್ಲಿ ಇರುವ ಬಹಳಷ್ಟು ರೋಗಿಗಳು ವೆಂಟಿಲೇಟರ್​ನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅಂಕಿ-ಅಂಶಗಳ ಪ್ರಕಾರ ಮುಂದಿನ ದಿನಗಳಲ್ಲಿ ಇನ್ನೂ ಬಹಳಷ್ಟು ಜನರಿಗೆ ವೆಂಟಿಲೇಟರ್ ಚಿಕಿತ್ಸೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಮಾರ್ಚ್ ಮಧ್ಯಭಾಗದಲ್ಲಿ ಶಾಲಾ-ಕಾಲೇಜು, ಬಾರ್, ರೆಸೊ್ಟೕರೆಂಟ್, ಪಬ್ ಮುಂತಾದ ಸಾರ್ವಜನಿಕ ಕೇಂದ್ರಗಳನ್ನು ಮುಚ್ಚಲಾಗಿತ್ತು. ಜನರನ್ನು ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿತ್ತು. ಆದರೂ ಸೋಂಕು ವ್ಯಾಪಿಸಿದ್ದರಿಂದ ಮಾ.27ರಂದು ಲಾಕ್​ಡೌನ್ ಘೋಷಿಸಲಾಯಿತು. ಲಾಕ್​ಡೌನ್ ಸಮಯದಲ್ಲೂ ಏರ್​ಪೋರ್ಟ್ ತೆರೆದಿದೆ. ಬಸ್ಸು , ರೈಲುಗಳು ಚಲಿಸುತ್ತಿವೆ. ಏಪ್ರಿಲ್ ಮಧ್ಯಭಾಗದಲ್ಲಿ ಸೋಂಕು ತೀವ್ರಗೊಳ್ಳಲಿದೆ ಎಂದು ಅಂದಾಜು ಮಾಡಲಾಗಿದೆ. ಹಾಗೆ ನೋಡಿದರೆ, ಭಾರತ ಮುನ್ನೆಚ್ಚರಿಕೆ ಕ್ರಮವಾಗಿ ಬಹಳ ಬೇಗನೆ ಲಾಕ್​ಡೌನ್ ಮಾಡಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ.
ಈ ಲಾಕ್​ಡೌನ್ ನಿರ್ಧಾರ ಎಷೊ್ಟೕ ಜನರಿಗೆ ಸೋಂಕು ತಪ್ಪಿಸಿದೆ. ಕರ್ನಾಟಕ ಸರ್ಕಾರವಂತೂ ಬಹಳಷ್ಟು ಬೇಗ ಪೂರ್ವಭಾವಿಯಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ-ರಾಜ್ಯ ಸರ್ಕಾಗಳು ಕೖಗೊಂಡ ಕ್ರಮಗಳನ್ನು ನೋಡಿ ಹೆಮ್ಮೆ ಅನಿಸುತ್ತಿದೆ. ದೇಶದ ಆರ್ಥಿಕ ಪ್ರಗತಿಯನ್ನು ಬದಿಗೊತ್ತಿ ಜನರ ಜೀವನಕ್ಕೆ ಪ್ರಾಮುಖ್ಯತೆ ನೀಡಿದ್ದು ನಿಜಕ್ಕೂ ಮಹತ್ವದ ನಿರ್ಧಾರ. ಆದ್ದರಿಂದ ದಯವಿಟ್ಟು ಎಲ್ಲರೂ ಸರ್ಕಾರದ ಈ ಆದೇಶ ಪಾಲಿಸಿ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.
| ಪ್ರಶಾಂತ್ ನಾಯಕ್ ಐರ್ಲೆಂಡ್
ಕರ್ನಾಟಕದಲ್ಲಿ ಗಂಟೆಗಂಟೆಗೂ ಹೆಚ್ಚುತ್ತಿದೆ ವೈರಸ್‌: 9 ಗಂಟೆಯಲ್ಲಿ ಐವರು ಸೋಂಕಿತರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 6 =
Remember me
