ಇಂದೋರ್​:ಬೇರೆಯಾಗಿರುವ ಗಂಡನಿಗೆ ಜೀವನಾಂಶ ನೀಡುವಂತೆ ಪತ್ನಿಗೆ ನ್ಯಾಯಾಲಯ ಆದೇಶ ನೀಡಿರುವ ವಿರಾಳಾತಿ ವಿರಳ ಪ್ರಕರಣ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಗಂಡನ ವಿರುದ್ಧ ಪತ್ನಿ ನಕಲಿ ದೂರು ದಾಖಲಿಸಿದ್ದಕ್ಕೆ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.
ಇಂದೋರ್​ನ ಕೌಟುಂಬಿಕ ನ್ಯಾಯಾಲಯ ಇಂಥದ್ದೊಂದು ಆದೇಶವನ್ನು ಹೊರಡಿಸಿದೆ. ವರದಕ್ಷಿಣೆಗಾಗಿ ಪತಿ ತನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಳು. ತನ್ನ ಜೀವನಾಂಶಕ್ಕಾಗಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂಬ ಬೇಡಿಕೆಯನ್ನೂ ಆಕೆ ಇಟ್ಟಿದ್ದಳು.
ಪತ್ನಿಯ ಬಳಿಕ ಗಂಡನು ಸಹ ಕೋರ್ಟ್​ ಮೆಟ್ಟಿಲೇರಿದ್ದಾರೆ. ಮದುವೆಯ ನಂತರ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಬೇಕಾಯಿತು ಎಂದಿರುವ ಪತಿ, ಆಕೆಯನ್ನು ಮದುವೆಯಾಗಲು ತನ್ನ ವಿದ್ಯಾಭ್ಯಾಸವನ್ನು ಸಹ ಬಿಡಬೇಕಾಗಿ ಬಂದಿದ್ದರಿಂದ ನಾನಿಂದು ನಿರುದ್ಯೋಗಿಯಾಗಿದ್ದಾನೆ ಎಂದು ತನ್ನ ನೋವನ್ನು ತೋಡಿಕೊಂಡರು.
ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ, ಮಹಿಳೆಯು ದಾಖಲಿಸಿದ ದೂರು ನಕಲಿ ಎಂದು ಗೊತ್ತಾದ ಬಳಿಕ ಮಹಿಳೆಗೆ ಶಿಕ್ಷೆ ವಿಧಿಸಿದೆ. ಯುವತಿಯ ಪತಿಗೆ ಮಾಸಿಕ 5 ಸಾವಿರ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಪತಿಯ ಪರ ವಕೀಲರು ತಿಳಿಸಿದ್ದಾರೆ.(ಏಜೆನ್ಸೀಸ್​)
ಭುಗಿಲೆದ್ದ ಪೊಲೀಸರ ಆಕ್ರೋಶ: ಸರ್ಕಾರದ ವರ್ಗಾವಣೆ ಗ್ಯಾರಂಟಿ ನಂಬಿ ಸಿಬ್ಬಂದಿಗೆ ಭ್ರಮನಿರಸನ

ಭಾರತದ ಈ ರಾಜ್ಯದಲ್ಲಿದ್ದಾರೆ ಅತಿ ಹೆಚ್ಚು ಲಕ್ಷಾಧಿಪತಿ ಮಹಿಳೆಯರು! ಲಕ್ಷದ್ವೀಪದಲ್ಲಿ ಒಬ್ಬರೂ ಇಲ್ಲ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × four =
Remember me
