ಮುಂಬೈ:ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.
ಇದೀಗ ಪ್ರಕರಣ ಒಂದರಲ್ಲಿ ಪಾರ್ಟ್​ ಟೈಮ್​ ಕೆಲಸ ಹುಡುಕುತ್ತಿದ್ದ ಚಲನಚಿತ್ರ ಕಲಾವಿದರೊಬ್ಬರು ಸೈಬರ್​ ವಂಚಕನ ಬಲೆಗೆ ಸಿಲುಕಿ 6 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಮುಂಬೈನ ಖಾರ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸೈಬರ್​ ಕ್ರೈಂ ಅಧಿಕಾರಿ ಒಬ್ಬರು ಚಲನಚಿತ್ರಗಳಲ್ಲಿ ಕಲಾವಿದರಾಗಿ ಕೆಲಸ ಮಾಡುವ ಗಣೇಶನ್​ ನಾಡಾರ್​ ಅವರ ಟೆಲಿಗ್ರಾಂ ಖಾತೆಗೆ ವಂಚಕ ಅಪ್ಲಿಕೇಶನ್​ ಒಂದರ ಲಿಂಕ್​ಅನ್ನು ಕಳುಹಿಸಿ ಡೌನ್​ಲೋಡ್​ ಮಾಡುವಂತೆ ಸೂಚಿಸಿದ್ದಾನೆ.
ಮೊದಲಿಗೆ ಆ್ಯಪ್​ ಡೌನ್​ಲೋಡ್​ ಮಾಡಲು ಹಿಂದೇಟು ಹಾಕಿದ ದೂರುದಾರರು ಬಳಿಕ ಅದರ ಬಗ್ಗೆ ತಿಳಿದು ಆಸಕ್ತಿದಾಯಕ ಎಂದು ತಿಳಿದು ತಮ್ಮ ಮೊಬೈಲ್​ ಫೋನ್​ನಲ್ಲಿ ಇನ್ಸ್ಟಾಲ್​ ಮಾಡಿದ್ದಾರೆ. ಬಳಿಕ ವಂದಕ ಸಂತ್ರಸ್ತರಿಗೆ ಟಾಸ್ಟ್​ ಒಂದನ್ನು ನೀಡಿದ್ದಾನೆ.
ಇದನ್ನೂ ಓದಿ:ಇನ್​​ಸ್ಟಾಗ್ರಾಂ ಮೂಲಕ ಭಾರತೀಯ ಮಹಿಳೆಗೆ ವಂಚನೆ; ನೈಜೀರಿಯನ್​ ಪ್ರಜೆಗಳ ಬಂಧನ
ಟಾಸ್ಕ್​ ಪೂರ್ತಿ ಮಾಡಿದ ನಂತರ ವಂಚಕ ಗಣೇಶನ್​ ಅವರ ಖಾತೆಗೆ 1,000 ಸಾವಿರ ರೂಪಾಯಿಯನ್ನು ಜಮೆ ಮಾಡಿದ್ದಾನೆ. ಬಳಿಕ ಎರಡನೇ ಬಾರಿಗೆ ವಂಚಕ 18,000 ಸಾವಿರ 29 ಹಾಗೂ 37,000 ಸಾವಿರ ರೂಪಾಯಿ ಹಣವನ್ನು ಸಂತ್ರಸ್ತರ ಖಾತೆಗೆ ಜಮೆ ಮಾಡಿ ನಂಬಿಕೆ ಗಳಿಸಿದ್ದಾನೆ.
ಆ ಬಳಿಕ ಕಾರ್ಯಪ್ರವೃತ್ತನಾದ ವಂಚಕ ದೂರುದಾರ ಗಣೇಶನ್​ ಅವರಿಗೆ 6 ಲಕ್ಷ ರೂಪಾಯಿ ಜಮೆ ಮಾಡುವಂತೆ ಹೇಳಿ ಬಳಿಕ ಹಣ ಪಡೆದು ವಂಚಿಸಿದ್ದಾನೆ ಈ ಕುರಿತು ಖಾರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಕ್ರೈಂ ಬ್ರ್ಯಾಂಚ್​ನ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
