ಗುವಾಹಟಿ:ಸಿನಿಮಾ ನಟ ನಟಿಯರ ಬಗ್ಗೆ ಅಭಿಮಾನಿಗಳು ಏನಾದರೂ ಮಾಡುತ್ತಿರುತ್ತಾರೆ. ಇದು ಕೂಡ ಅಂತಹದ್ದೇ ಸುದ್ದಿ!
ಅಸ್ಸಾಂನ 52 ವರ್ಷದ ವ್ಯಕ್ತಿಯೊಬ್ಬ ನಟ ಸಲ್ಮಾನ್​ ಖಾನ್​ ಅವರನ್ನು ಕಾಣಲು ಬರೋಬ್ಬರಿ 600 ಕಿ.ಮೀ. ಸೈಕಲ್​ ತುಳಿದಿದ್ದಾನೆ. ಆಸ್ಸಾಂನ ಟಿನ್ಸುಕಿಯಾ ನಿವಾಸಿ ಭೂಪೆನ್​ ಲಿಕ್ಸನ್​, ಫೆಬ್ರವರಿ 8ರಂದು ಸೈಕಲ್​ ಸವಾರಿ ಆರಂಭಿಸಿದ್ದು ನಿನ್ನೆ (ಗುರುವಾರ ಫೆ.13) ಗುವಾಹಟಿಗೆ ತಲುಪಿದ್ದಾನೆ.
ಫೆಬ್ರವರಿ ಗುವಾಹಟಿಯಲ್ಲಿ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು ಅದರಲ್ಲಿ ಭಾಗವಹಿಸಲು ಸಲ್ಮಾನ್​ ಖಾನ್​ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಪೆನ್​ ನಗರಕ್ಕೆ ಆಗಮಿಸಿದ್ದಾನೆ.
ಫೆಬ್ರವರಿ 8ರಂದು ನಮ್ಮೂರು ಟಿನ್ಸುಕಿಯಾದಿಂದ ಪ್ರಯಾಣ ಆರಂಭಿಸಿದೆ. ಗುವಾಹಟಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಲ್ಮಾನ್​ ಆಗಮಿಸುತ್ತಿದ್ದಾರೆ ಎಂದು ತಿಳಿಯಿತು. ಆದರಿಂದ ಇಲ್ಲಿಗೆ ಬಂದೆ ಎಂದು ಭೂಪೆನ್​ ಹೇಳಿದರು.
ಭೂಪೆನ್​ ಲಿಕ್ಸನ್​ ಮೂಲತಃ ಸೈಕಿಲಿಸ್ಟ್​ ಆಗಿದ್ದು 60 ನಿಮಿಷದಲ್ಲಿ 48 ಕಿ.ಮೀ. ಹ್ಯಾಂಡಲ್​ ಮುಟ್ಟದೆ ಸೈಕಲ್​ ಓಡಿಸಿದ ಸಾಧನೆ ಬಗ್ಗೆ ಇಂಡಿಯಾ ಬುಕ್​ ಆಪ್​ ರೆಕಾರ್ಡ್​ನಲ್ಲಿ ದಾಖಲಾಗಿದೆ.(ಏಜೆನ್ಸೀಸ್​)
Assam: Bhupen Likson, a cyclist from Tinsukia reached Guwahati yesterday after cycling a distance of over 600 kms, to meet Salman Khan. He says,"I started this journey on Feb 8 from Jagun (Tinsukia) on a cycle to meet Salman Khan who will be in Guwahati to attend Filmfare Awards"pic.twitter.com/td28ojdXIS
— ANI (@ANI)February 14, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + one =
Remember me
