ನವದೆಹಲಿ:ದಕ್ಷಿಣ ದೆಹಲಿಯ ಪಂಚಶೀಲ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಮೂರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಚಲನಚಿತ್ರ ನಿರ್ಮಾಪಕ ಮಂಗಳವಾರ ಸಾವನ್ನಪ್ಪಿದ್ದಾರೆ. ಆದರೆ ಈ ಅಪಘಾತ ಸಂಭವಿಸಿದಾಗ ಅಲ್ಲಿದ್ದವರು ಸಹಾಯಕ್ಕೆ ಬರುವ ಬದಲಾಗಿ ಲ್ಯಾಪ್​ಟಾಪ್, ಕ್ಯಾಮೆರಾ ಕಳ್ಳತನ ಮಾಡಿದ್ದಾರೆ.
ಪಿಯೂಷ್​ ಪಾಲ್​ ಮೃತ. ಚಲನಚಿತ್ರ ನಿರ್ಮಾಪಕರಾಗಿದ್ದರು. ಸಾಕ್ಷ್ಯಾಚಿತ್ರ ಹಾಗೂ ಕೆಲವು​​ ಪ್ರಾಜೆಕ್ಟ್​ಗಳನ್ನು ಮಾಡುತ್ತಿದ್ದರು. ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ನಡೆದಿದ್ದೇನು?:ದಕ್ಷಿಣ ದೆಹಲಿಯ ಪಂಚಶೀಲ್​ ಪಾರ್ಕ್​ ಮೆಟ್ರೋ ನಿಲ್ದಾಣದ ಬಳಿ ಚಲನಚಿತ್ರ ನಿರ್ಮಾಪಕ ಪಿಯೂಷ್​ ಪಾಲ್ ಅಕ್ಟೋಬರ್​ 28 ರಂದು​ ರಾತ್ರಿ 9.45ರ ಸುಮಾರಿಗೆ ಕೆಲಸ ಮುಗಿಸಿ ಬೈಕ್​ನಲ್ಲಿ ಮರಳುತ್ತಿದ್ದರು. ಪಾಲ್ ಅವರ ಬೈಕ್​ಗೆ ಇನ್ನೊಂದು ಬೈಕ್ ಹೊಡೆದಿದ್ದರಿಂದ ತಲೆಗೆ ಗಂಭೀರ ಗಾಯಗಳಾಗಿತ್ತು. ಅಪಘಾತದ ಬಳಿಕ ಪಾಲ್​ ರಕ್ತಸಿಕ್ತವಾಗಿ ಕೆಳಗೆ ಬಿದ್ದಿದ್ದರು, ಆದರೆ ಆ್ಯಂಬುಲೆನ್ಸ್​ಗಾಗಲಿ, ಪೊಲೀಸರಿಗಾಗಲಿ ಕರೆ ಮಾಡುವ ಬದಲು ಜನರು ವಿಡಿಯೋ ಮಾಡುತ್ತಾ ನಿಂತಿದ್ದರು. ಅಲ್ಲಿದ್ದ ಜನ ಲ್ಯಾಪ್​ಟಾಪ್​, ಕ್ಯಾಮೆರಾವನ್ನು ಕಳ್ಳತನಕ್ಕೆ ಮುಂದಾಗಿದ್ದರು. ಅಪಘಾತದ ಸ್ಥಳದಲ್ಲಿ ಹಾದು ಹೋಗುತ್ತಿದ್ದ ಪಂಕಜ್ ಮಿಸ್ತ್ರಿ ಎಂಬುವವರು ರಾತ್ರಿ 10.11ರ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಬೈಕ್ ಸವಾರ ಟ್ಯಾಕ್ಸಿಯೊಂದನ್ನು ಕರೆದು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿಲ್ಲದ ಕಾರಣ, ಪಾಲ್ ಅವರನ್ನು PSRI ಆಸ್ಪತ್ರೆಗೆ ಕರೆದೊಯ್ದಿದ್ದರು. ಅದು ಇನ್ನೊಂದು ಗಂಟೆ ತೆಗೆದುಕೊಂಡಿತು. ಮೂರು ದಿನಗಳ ಬಳಿಕ ಪಾಲ್​ ಮೃತಪಟ್ಟಿದ್ದಾರೆ.
ಸಿಸಿಟಿವಿ ದೃಶ್ಯಗಳ ಸಾಕ್ಷ್ಯದ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬುಧವಾರ ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಮೃತ ಪಿಯೂಷ್​ ಪಾಲ್ ಸ್ನೇಹಿತ ಮಾತನಾಡಿ, ರಕ್ತದ ಮಡುವಿನಲ್ಲಿ ಬಿದ್ದಿದ್ದರು ಯಾರೂ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲು ಅಥವಾ ಸಹಾಯ ಮಾಡಲು ಮುಂದಾಗಲಿಲ್ಲ. ಅಂತಿಮವಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಜನರು ನಮಗೆ ಹೇಳಿದರು, ಪಕ್ಕದಲ್ಲಿದ್ದವರು ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದಾರೆ ಮತ್ತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ ಆದರೆ ಯಾರೂ ಅವನಿಗೆ ಸಹಾಯ ಮಾಡಲಿಲ್ಲ. ಅವನ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ತೆಗೆದುಕೊಂಡು ಹೋಗಲಾಯಿತು, ಅವನ ಪೋಷಕರು ಅವನ ಫೋನ್‌ನಲ್ಲಿ ಅವನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು ಆದರೆ ಅದನ್ನು ತೆಗೆದುಕೊಂಡ ವ್ಯಕ್ತಿ ಕರೆಗಳನ್ನು ಕಟ್ ಮಾಡುತ್ತಲೇ ಇದ್ದನು ಮತ್ತು ನಂತರ ಫೋನ್ ಸ್ವಿಚ್ ಆಫ್ ಮಾಡಿದನು. ಯಾರಾದರೂ ಆ ಕರೆಗಳನ್ನು ತೆಗೆದುಕೊಂಡು ಮನೆಯವರಿಗೆ ತಿಳಿಸಿದ್ದರೆ ಹೀಗೆ ಆಗುತ್ತಿರಲಿಲ್ಲವೆಂದು  ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 + sixteen =
Remember me
