ತಿರುವನಂತಪುರ:ಮಲಯಾಳಂ ಚಿತ್ರರಂಗದಲ್ಲಿ ಮೂರು ವರ್ಷ ಹಿಂದೆ ಒಂದು ಸಿನಿಮಾ ತೆರೆಕಂಡಿತ್ತು. ಅದರಲ್ಲೊಂದು ದೃಶ್ಯವಿದೆ. ಬಸ್ ಪ್ರಯಾಣ ಮಾಡುತ್ತಿದ್ದ ನಾಯಕಿಯ ಕತ್ತಿನಲ್ಲಿದ್ದ ಸರವನ್ನು ಹಿಂದಿನ ಸೀಟಿನಲ್ಲಿ ಕುಳಿತಿದ್ದಾತ ಆಕೆಯ ಅರಿವಿಗೆ ಬಾರದಂತೆ ಕಟ್​ ಮಾಡಿ ತೆಗೆಯುತ್ತಿದ್ದ. ಆಗ ಎಚ್ಚೆತ್ತ ನಾಯಕಿ ಹಿಂದೆ ತಿರುಗಿ ನೋಡುತ್ತಾಳೆ. ಅಷ್ಟರೊಳಗೆ ಆತ ಆ ಸರವನ್ನು ನುಂಗಿ ಬಿಟ್ಟಿದ್ದ!
ಬಸ್ ಪೊಲೀಸ್ ಠಾಣೆಗೆ ಹೋಯಿತು. ಸರಗಳ್ಳ ಪೊಲೀಸರ ಬಳಿಯೂ ಅದನ್ನೇ ಹೇಳಿದ – ನಾನು ಸರ ಕಳವು ಮಾಡಿಲ್ಲ. ಸಾಕ್ಷಿ ಏನಿದೆ ಎಂದು?. ಆತ ಸರ ನುಂಗುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ನಾಯಕಿ ಪ್ರತಿಪಾದಿಸಿದ ಕಾರಣ, ಪೊಲೀಸರು ಆತನನ್ನು ವಶಕ್ಕೆ ಪಡೆದು ಎಕ್ಸ್​ರೇ ತೆಗೆಸಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಸರ ನುಂಗಿದ್ದರೆ ಮಲವಿಸರ್ಜನೆ ಮಾಡುವಾಗ ಹೊರಬರಲೇ ಬೇಕಲ್ಲ ಎಂದು ಕಾಯುತ್ತಿರುವ ದೃಶ್ಯವದು.. ಅಂದ ಹಾಗೆ ಸಿನಿಮಾದ ಹೆಸರುತೋಂಡಿಮೊದಲೂಂ ದೃಕ್​ಸಾಕ್ಷಿಯೂಂ.
ಸಿನಿಮಾ ದೃಶ್ಯದ ವಿಷಯ ಹಾಗಿರಲಿ. ಇಂಥದ್ದೇ ಘಟನೆ ನಿಜ ಜೀವನದಲ್ಲೂ ನಡೆದಿದೆ. ತಂಪನೂರು ಪೊಲೀಸ್​ ಠಾಣಾ ವ್ಯಾಪ್ತಿಯ ತಂಪನೂರು ಬಸ್​ನಿಲ್ದಾಣದಲ್ಲಿ ನಡೆದಿರುವ ಕಳವು ಪ್ರಕರಣವಿದು. ಇಲ್ಲಿ ಆರೋಪಿ ಸ್ಥಾನದಲ್ಲಿರುವಾತ ಪೂಂತುರ ಪಳ್ಳಿತೆರವು ನಿವಾಸಿ ಶಫೀಕ್​ (42). ಅಜಿಕುಮಾರ್ ಮತ್ತು ಮಿನಿ ಎಂಬ ಶಿಕ್ಷಕ ದಂಪತಿಯ ಮೂರು ವರ್ಷದ ಪುತ್ರಿ ಧರಿಸಿದ್ದ ಪಾದಸರವನ್ನು ಶಫೀಕ್ ಕಳವುಗೈದು ನುಂಗಿಬಿಟ್ಟಿದ್ದ. 4.5 ಗ್ರಾಂ ತೂಕದ ಚಿನ್ನದ ಪಾದಸರವಾಗಿತ್ತದು.
ಇದನ್ನೂ ಓದಿ:ಹಳೇ ವೈಮನಸ್ಯ ಮರೆತು ಜೆಡಿಎಸ್​ನತ್ತ ಹೊರಟುನಿಂತ ಇಬ್ರಾಹಿಂ ಮನವೊಲಿಕೆಗೆ ಡಿಕೆಶಿ ಯತ್ನ
ಶಫೀಕ್ ಓಡಿ ಹೋಗುವ ಮೊದಲೇ ಹಿಡಿದ ಸ್ಥಳೀಯರು ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕೇಸ್ ದಾಖಲಿಸಿದರು. ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಎಕ್ಸ್ ರೇ ತೆಗೆಸಿದಾಗ ಹೊಟ್ಟೆಯಲ್ಲಿ ಪಾದಸರ ಇರುವುದು ದೃಢಪಟ್ಟಿತು. ಕೋರ್ಟ್​ಗೆ ಹಾಜರುಪಡಿಸಿದ ಬಳಿಕ ಆರೋಪಿಯನ್ನು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದ್ದು, ಹೊಟ್ಟೆಯಿಂದ ಪಾದಸರ ಹೊರಬರುವುದನ್ನು ಪೊಲೀಸರು ಕಾಯುತ್ತಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಕೋಡಿಹಳ್ಳಿಯವರೇ ಲೀಡ್​ ಮಾಡಿ ‘ಡೀಲ್’ ಮಾಡಬೇಡಿ : ಅನಂತ ಸುಬ್ಬಾರಾವ್

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:thirteen + eleven =
Remember me
