ಆಂಧ್ರಪ್ರದೇಶ:ಸಿನಿಮಾದಲ್ಲಿ ನಾಯಕ ನಟ, ಕಾರಿನ ಮೇಲ್ಭಾಗದಲ್ಲಿ ಕುಳಿತು ಸಂಚರಿಸುವ ದೃಶ್ಯವನ್ನು ಹಲವಾರು ಬಾರಿ ನೋಡಿದ್ದೇವೆ. ಇದೀಗ ನಟ, ರಾಜಕಾರಣಿ ಪವನ್ ಕಲ್ಯಾಣ್ ಗುಂಟೂರಿನ ಇಪ್ಪಟಮ್ ಗ್ರಾಮಕ್ಕೆ ಕಾರಿನ ಮೇಲೆ ಕುಳಿತುಕೊಂಡು ಬಂದಿದ್ದಾರೆ. ಒಂದು ಕ್ಷಣ ಇದು ಯಾವುದೋ ಸಿನಿಮಾ ಚಿತ್ರೀಕರಣ ಎಂದು ಅನೇಕರು ಗೊಂದಲಕ್ಕೀಡಾಗಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪವನ್ ಕಲ್ಯಾಣ್​ ಕಾರಿನ ಟಾಪ್​ ಮೇಲೆ ಕುಳಿತುಕೊಂಡು ಸಂಚರಿಸಿರುವುದನ್ನು ಕಾಣಬಹುದು. ಈ ವೇಳೆ ಅವರ ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ಸಾಥ್ ನೀಡಿದ್ದಾರೆ. ಇನ್ನೊಂದಿಷ್ಟು ಜನ ಬೆಂಬಲಿಗರು ಸಿನಿಮಾ ಸ್ಟೈಲ್​ನಲ್ಲಿ ಪವನ್ ಸಂಚರಿಸುತ್ತಿದ್ದ ಕಾರಿನ ಸುತ್ತಲೂ ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ.
ಪವನ್ ಕಲ್ಯಾಣ್ ಶೂಟಿಂಗ್​ಗಾಗಿ ಕಾರಿನ ಮೇಲೆ ಹತ್ತಿಲ್ಲ. ಬದಲಾಗಿ, ಇಪ್ಪಟಮ್ ಗ್ರಾಮದಲ್ಲಿ ರಸ್ತೆ ವಿಸ್ತರಣೆಯ ಕಾರಣಕ್ಕೆ ಹಲವು ಜನರ ಮನೆಗಳನ್ನು ಕೆಡವಲಾಗಿದೆ. ಇದರಿಂದಾಗಿ ಸಂತ್ರಸ್ತರಾದವರನ್ನು ಭೇಟಿಯಾಗಲು ಪವನ್ ಕಾರಿನ ಮೇಲೆ ಕುಳಿತು ಬಂದಿದ್ದಾರೆ. ಈ ವೇಳೆ ಪೊಲೀಸರು ಪವನ್ ಕಲ್ಯಾಣ್ ಅವರ ಕಾರನ್ನು ಮಂಗಳಗಿರಿಯಲ್ಲಿ ತಡೆದಿದ್ದಾರೆ. ಪೊಲೀಸರು ಕಾರಿಗೆ ಅವಕಾಶ ನೀಡದ ಕಾರಣ ಪವನ್ ಕಲ್ಯಾಣ್ ಗ್ರಾಮಕ್ಕೆ ಪ್ರವೇಶಿಸಲು ಕಾಲ್ನಡಿಗೆಯಲ್ಲಿ ತೆರಳಿದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಕಾರಿನ ಮೇಲೆ ಕುಳಿತು ಸಂಚರಿಸುವುದು ಎಷ್ಟೊಂದು ಅಪಾಯಕಾರಿ ಎಂಬುವುದರ ಬಗ್ಗೆ ಚರ್ಚಿಸಿದ್ದಾರೆ.
#JanaSenaChief#PawanKalyanwith followers while reaching#IppatamVillageGunturpic.twitter.com/lldHIF5DU1— Nellutla Kavitha (@iamKavithaRao)November 5, 2022
#JanaSenaChief#PawanKalyanwith followers while reaching#IppatamVillageGunturpic.twitter.com/lldHIF5DU1
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 17 =
Remember me
