ವಾಷಿಂಗ್ಟನ್:ಕರೊನಾದ ಹಾಟ್‌ಸ್ಪಾಟ್‌ ಆಗಿ, ವೈರಸ್‌ ಸೋಂಕಿನಿಂದ ವಿಶ್ವದಲ್ಲಿಯೇ ನಂ.1 ಕುಖ್ಯಾತಿ ಗಳಿಸಿರುವುದು ಅಮೆರಿಕ ಆಗಿದ್ದರೂ ಅಲ್ಲಿಯ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತ್ರ ಜಪ್ಪಯ್ಯ ಎಂದರೂ ಮಾಸ್ಕ್‌ ಧರಿಸಿರಲಿಲ್ಲ.
ಅದು ಎಷ್ಟರಮಟ್ಟಿಗೆ ಎಂದರೆ, ಶ್ವೇತಭವನದ ಕೆಲವು ಸಿಬ್ಬಂದಿಗೆ ಕರೊನಾ ಸೋಂಕು ಕಾಣಿಸಿಕೊಂಡಾಗಲೂ ಟ್ರಂಪ್ ಮಾಸ್ಕ್ ಧರಿಸಿರಲು ಒಪ್ಪಿರಲಿಲ್ಲ. ಅದು ನನ್ನಿಷ್ಟ ನಾನು ಧರಿಸುವುದಿಲ್ಲ ಎಂದಿದ್ದರು. ಇದೂ ಅಲ್ಲದೇ, ಕರೊನಾ ಪೀಡಿತರ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಸ್ಕ್‌ ಹಾಕದೇ ಇದ್ದುದು ಭಾರಿ ಚರ್ಚೆಗೂ, ವಿವಾದಕ್ಕೆ, ಕೆಲವರ ಆಕ್ರೋಶಕ್ಕೂ ಕಾರಣವಾಗಿತ್ತು.ಮಾಸ್ಕ್ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿ ಮಾಸ್ಕ್‌ ಹೇಗೆ ತಯಾರು ಮಾಡಬೇಕು, ಅದು ಹೇಗೆ ಧರಿಸಲು ಯೋಗ್ಯವಾಗಿರಬೇಕು ಎಂಬ ಬಗ್ಗೆ ಭಾಷಣ ಮಾಡಿದ್ದ ಟ್ರಂಪ್‌, ಆಗಲೂ ತಾವು ಮಾಸ್ಕ್‌ ಧರಿಸಿರಲಿಲ್ಲ.
ಇದನ್ನೂ ಓದಿ:ಭೂಮಿಯೊಳಗಿನಿಂದ ಭಯಾನಕ ವಿಚಿತ್ರ ಶಬ್ದ: ವಿಡಿಯೋ ನೋಡಿ…
ನೀವು ಏನೇ ಹೇಳಿ ನಾನು ಮಾತ್ರ ಮಾಸ್ಕ್‌ ಧರಿಸಲ್ಲ ಎಂಬ ಮೊಂಡ ಹಠಕ್ಕೆ ಬಿದ್ದಿದ್ದರು ಟ್ರಂಪ್‌. ತಾವು ಮಾಸ್ಕ್‌ ಹಾಕಿಕೊಳ್ಳದೇ ಇರುವುದು ಮಾತ್ರವಲ್ಲದೇ ಅಧ್ಯಕ್ಷೀಯ ಚುನಾವಣೆಯ ಪ್ರತಿಸ್ಪರ್ಧಿ ಜೋ ಬಿಡೆನ್ ಮಾಸ್ಕ್ ಧರಿಸಿ ಪ್ರಚಾರ ಮಾಡುತ್ತಿರುವುದಕ್ಕೆ ಕುಹುಕವಾಡಿದ್ದರು ಕೂಡ.
ಈ ಹಿನ್ನೆಲೆಯಲ್ಲಿ ಟ್ರಂಪ್‌ ಅವರ ಮಾಸ್ಕ್‌ ರಹಸ್ಯ ಮಾತ್ರ ಎಲ್ಲರಿಗೂ ರಹಸ್ಯವಾಗಿಯೇ ಉಳಿದಿತ್ತು. ಈ ಬಗ್ಗೆ ಯಾರಾದರೂ ಪ್ರಶ್ನೆ ಕೇಳಿದಾಗ, ಮಾಸ್ಕ್ ಧರಿಸಿಕೊಳ್ಳುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಅದನ್ನು ಧರಿಸಿಕೊಳ್ಳಲು ಸರಿಯಾದ ಸಮಯ ಹಾಗೂ ಸ್ಥಳದ ಅವಶ್ಯಕತೆಯಿದೆ ಎಂದು ನಂಬಿದ್ದೇನೆ ಎಂದಿದ್ದರು. ಆದರೆ ಆ ದಿನ ಯಾವುದು ಎಂಬುದು ಮಾತ್ರ ಯಾರಿಗೂ ತಿಳಿದಿರಲಿಲ್ಲ.
ಅಂತೂ ಆ ದಿನ ಬಂದೇ ಬಿಟ್ಟಿದೆ. ನಿನ್ನೆ ವಾಷಿಂಗ್ಟನ್‌ನ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಟ್ರಂಪ್, ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಸ್ಕ್ ಧರಿಸಿಕೊಂಡಿದ್ದರು. ಇದಕ್ಕೆ ತಮ್ಮದೇ ಆದ ವಿವರಣೆಯನ್ನೂ ನೀಡಿರುವ ಟ್ರಂಪ್‌, ನಾನೇನು ಮಾಸ್ಕ್‌ ವಿರೋಧಿ ಅಲ್ಲ ಎಂದು ಮೊದಲೇ ಹೇಳಿದ್ದೇನೆ. ಸೂಕ್ತ ಸ್ಥಳಕ್ಕಾಗಿ ಕಾಯುತ್ತಿದ್ದೆ. ಇಲ್ಲಿ ಸಾವಿರಾರು ಸೈನಿಕರ ಜತೆ ಮಾತುಕತೆ ನಡೆಸಬೇಕು, ಈ ಸಮಯದಲ್ಲಿ ಸುರಕ್ಷತೆಯ ದೃಷ್ಟಿಯಿಂದ ನಾನು ಮಾಸ್ಕ್‌ ಹಾಕಿಕೊಂಡಿದ್ದೇನೆ ಎಂದರು.ಈ ಮಾಸ್ಕ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಮುದ್ರೆ ಇದ್ದು, ಇದೀಗ ಎಲ್ಲರ ಗಮನ ಸೆಳೆದಿದೆ.
ಆನ್‌ಲೈನ್‌ ಮೂಲಕ ಭಯೋತ್ಪಾದಕರ ನೇಮಕಾತಿ, ತರಬೇತಿ- ಇಲ್ಲಿದೆ ಸ್ಫೋಟಕ ಮಾಹಿತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − two =
Remember me
