ಅಮರಾವತಿ:ಎನ್​ಸಿಸಿ ಟ್ರೈನಿಂಗ್​ ಹೆಸರಿನಲ್ಲಿ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್​ಗಳನ್ನು ಮನಬಂದಂತೆ ಥಳಿಸಿ ರ್‍ಯಾಗ್​ ಮಾಡಿರುವ ಘಟನೆ ಆಂಧ್ರಪ್ರದೇಶದ ಪಾಲ್ನಾಡುನಲ್ಲಿರುವ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಆಂಧ್ರಪ್ರದೇಶದ ಪಾಲ್ನಾಡ್​ನ ನರಸರಾವ್‌ಪೇಟೆಯಲ್ಲಿರುವ ಎಸ್​ಎಸ್​ಎನ್​ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ఏపీలో ఎప్పుడూ లేని విధంగా శృతి మించుతున్న ర్యాగింగ్!పల్నాడు జిల్లా నరసరావుపేటలోని SSN కాలేజీలో NCC ట్రైనింగ్ పేరుతో జూనియర్ విద్యార్థులను అర్ధరాత్రి వేళలో పిలిచి కర్రలతో చితక బాదిన విద్యార్థులు.నడిరోడ్డు మీద హత్య చేస్తేనే పోలీసులు ఏమీ చేయలేదు.. ఇంక కర్రలతో కొడితే ఏమవుద్ది…pic.twitter.com/zMIjSIStqV
ಇದನ್ನೂ ಓದಿ:ಭಾರತಕ್ಕೆ ನೆರವಾಗುವಂತೆ ವಿಶ್ವಕಪ್ ಫೈನಲ್ ಪಿಚ್ ನಿರ್ಮಾಣ; ಟೀಮ್​ ಇಂಡಿಯಾ ಮಾಜಿ ಕೋಚ್​ ಹೇಳಿದ್ದಿಷ್ಟು
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಕಾಲೇಜಿನ ಸೀನಿಯರ್​ ವಿದ್ಯಾರ್ಥಿಗಳು ಎನ್​ಸಿಸಿ ಟ್ರೈನಿಂಗ್​ ಹೆಸರಿನಲ್ಲಿ ಜೂನಿಯರ್​ಗಳನ್ನು ಹಾಸ್ಟೆಲಿಗೆ ಕರೆದುಕೊಂಡು ಬಂದು ಮನದಂಬಂತೆ ಥಳಿಸುತ್ತಾರೆ. ವಿದ್ಯಾರ್ಥಿಗಳನ್ನು ಜೋರಾಗಿ ನಗುತ್ತಾ ಥಳಿಸುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋವನ್ನು ವೈಎಸ್​ಆರ್​ ಕಾಂಗ್ರೆಸ್​ ಪಕ್ಷ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ಘಟನೆಯು ಫೆಬ್ರವರಿಯಲ್ಲಿ ನಡೆದಿದ್ದು, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯು ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದೆ. ಈ ಘಟನೆ ನಿಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ನಡೆದಿದ್ದು ಎಂದು ಟಿಡಿಪಿ ವೈಎಸ್​ಆರ್​ಗೆ ಟಾಂಗ್​ ನೀಡಿದೆ.
Terrible case of#ragginghas come to light from#SSNCollege,#Narsaraopet#Palnadu#AndhraPradeshwhere some students were caught on camera flogging juniors at midnight reportedly in the name of NCC training; what kind of perversion, frustration are these youngsters displaying?pic.twitter.com/VUrfxOffqA
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × four =
Remember me
