ನವದೆಹಲಿ:ಬಾಯಲ್ಲಿ ಶಾಂತಿ ಮಂತ್ರ, ಬಗಲಲ್ಲಿ ದಂಡ ಎಂಬಂಧ ಇಬ್ಬಂದಿ ಧೋರಣೆಯನ್ನು ಸದಾ ಅನುಸರಿಸುವ ಚೀನಾ ಗಲ್ವಾನ್​ ಕಣಿವೆಯಲ್ಲಿ ನಿಯೋಜನೆಗೊಂಡಿದ್ದ ಒಂದಷ್ಟು ಸೇನೆ ಮತ್ತು ಸೇನಾವಾಹನಗಳನ್ನು ಕೊನೆಗೂ ಹಿಂದಕ್ಕೆ ಕರೆಯಿಸಿಕೊಂಡಿದೆ.
ಜೂ.22ರಂದು ನಡೆದಿದ್ದ ಮಿಲಿಟರಿ ಮಟ್ಟದ ಮಾತುಕತೆ ವೇಳೆ ಗಲ್ವಾನ್​ ಕಣಿವೆಯಲ್ಲಿ ನಿಯೋಜನೆಗೊಳಿಸಿರುವ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಬಗ್ಗೆ ಭಾರತ ಮತ್ತು ಚೀನಾ ಸಹಮತ ವ್ಯಕ್ತಪಡಿಸಿದ್ದವು. ಆದರೆ, ತನ್ನ ಮಾತಿನಿಂದ ಹಿಂದೆ ಸರಿದಿದ್ದ ಚೀನಾ ಗುರುವಾರದ ವೇಳೆಗೆ ಜೂ.15ರಂದು ರಕ್ತಸಿಕ್ತ ಘರ್ಷಣೆಗೆ ಕಾರಣವಾಗಿದ್ದ ಗಸ್ತು ಪಾಯಿಂಟ್​ 14ರಲ್ಲಿ ಮತ್ತೊಮ್ಮೆ ವೀಕ್ಷಣಾ ಗೋಪುರ ಸ್ಥಾಪಿಸಿ, ಆ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಮುಂದಾಗಿತ್ತು.
ಇದನ್ನೂ ಓದಿ:ಚೀನಾದಿಂದ ರಾಜೀವ್​ ಗಾಂಧಿ ಪ್ರತಿಷ್ಠಾನಕ್ಕೆ ಹರಿದು ಬಂತು ಲಕ್ಷಾಂತರ ರೂಪಾಯಿ ದೇಣಿಗೆ
ಆದರೆ, ಮಧ್ಯಾಹ್ನದ ವೇಳೆಗೆ ಈ ಸ್ಥಳದಲ್ಲಿದ್ದ ತನ್ನ ಯೋಧರು ಮತ್ತು ಸೇನಾವಾಹನಗಳು ಮತ್ತಿತರ ಯುದ್ಧೋಪಕರಣವನ್ನು ವಾಪಸು ಕರೆಯಿಸಿಕೊಂಡಿತು ಎನ್ನಲಾಗಿದೆ.
ಜೂ.15ರ ರಕ್ತಸಿಕ್ತ ಘರ್ಷಣೆಯ ಸಂದರ್ಭದಲ್ಲಿ ಭಾರತದ ಯೋಧರು ಗಸ್ತು ಪಾಯಿಂಟ್​ 14ರಲ್ಲಿದ್ದ ಚೀನಾದ ವೀಕ್ಷಣಾ ಗೋಪುರ ಮತ್ತು ಟೆಂಟ್​ ಅನ್ನು ಕಿತ್ತುಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಗುರುವಾರ ಬೆಳಗಿನ ಉಪಗ್ರಹ ಚಿತ್ರದಲ್ಲಿ ಅದೇ ಸ್ಥಳದಲ್ಲಿ ಮತ್ತೆ ವೀಕ್ಷಣಾ ಗೋಪುರ ಸ್ಥಾಪಿಸಿದ್ದು, ಯೋಧರ ಶಿಬಿರಗಳನ್ನು ಹಾಕಿದ್ದ ದೃಶ್ಯ ಕಂಡುಬಂದಿತ್ತು.
ಗಮನ ಬೇರೆಡೆ ಸೆಳೆಯಲು ಪಾಕ್​ ಮೇಲೆ ದಾಳಿಗೆ ಭಾರತದ ಹುನ್ನಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
