ನವದೆಹಲಿ:ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಉದ್ಯೋಗ ವಂಚಿತೆಯಾಗಿದ್ದ ನಿಜವಾದ ಅನಾಮಿಕಾ ಶುಕ್ಲಾ ಅವರಿಗೆ ಶಿಕ್ಷಕಿಯಾಗುವ ಯೋಗ ಇದೀಗ ಒಲಿದಿದೆ. ಗೊಂಡಾ ಜಿಲ್ಲೆಯ ಬಿಎಚ್​ಡಿ ಸ್ಮಾರಕ ಶಾಲೆ ಎಂಬ ಖಾಸಗಿ ಶಾಲೆಯಲ್ಲಿ ಅವರು ಶಿಕ್ಷಕಿಯಾಗಿ ನೇಮಕಗೊಂಡಿದ್ದಾರೆ.
ಇವರ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನಕಲು ಮಾಡಿಕೊಂಡು ಅವರದ್ದೇ ಹೆಸರಿನಲ್ಲಿ ಪ್ರಿಯಾ ಎಂಬಾಕೆ 25 ಶಾಲೆಗಳಲ್ಲಿ ಶಿಕ್ಷಕಿಯಾಗಿ ನೇಮಕಾತಿ ಪಡೆದುಕೊಂಡಿದ್ದರು. ಅಂದಾಜು 13 ತಿಂಗಳಿನಿಂದ ಅಷ್ಟೆಲ್ಲ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಅಂದಾಜು 1.25 ಕೋಟಿ ರೂಪಾಯಿ ವೇತನ ಪಡೆದುಕೊಂಡಿದ್ದರು.
ಉದ್ಯೋಗವೇ ಸಿಕ್ಕಿರಲಿಲ್ಲ:ಶಿಕ್ಷಕಿಯಾಗುವ ಅರ್ಹತೆ ಇದ್ದರೂ ಅನಾಮಿಕಾ ಶುಕ್ಲಾ ಅವರಿಗೆ ಯಾವುದೇ ಶಾಲೆಯಲ್ಲಿ ಉದ್ಯೋಗ ದೊರೆತಿರಲಿಲ್ಲ. ಆದರೆ, ಇವರ ಪ್ರಮಾಣಪತ್ರಗಳನ್ನು ನಕಲು ಮಾಡಿ ಹಲವರು ಅಕ್ರಮವಾಗಿ ನೇಮಕಾತಿ ಪಡೆದು ಹಲವರು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾಧ್ಯಮಗಳ ಮೂಲಕ ಈ ಹಗರಣ ಬಯಲಾದ ನಂತರದಲ್ಲಿ ಇವರು ಗೊಂಡಾ ಪೊಲೀಸ್​ ಠಾಣೆಯಲ್ಲಿ ವಂಚನೆಯ ದೂರು ದಾಖಲಿಸಿದ್ದರು.
ನಾನು 2017ರಲ್ಲಿ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ಶಾಲೆಯಲ್ಲಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದೆ. ಕೌನ್ಸೆಲಿಂಗ್​ಗೆ ಕರೆ ಬಂದಿತ್ತು. ಆದರೆ ಯಾವುದೋ ಕಾರಣದಿಂದ ಕೌನ್ಸೆಲಿಂಗ್​ಗೆ ಹೋಗಲಾಗಿರಲಿಲ್ಲ. ಇದರಿಂದಾಗಿ ಅಂದಿನಿಂದ ಇಂದಿನವರೆಗೂ ನಾನು ನಿರುದ್ಯೋಗಿಯಾಗಿದ್ದೆ. ಆದರೆ, ನನ್ನ ಪ್ರಮಾಣಪತ್ರಗಳನ್ನು ನಕಲು ಮಾಡಿ, ನನ್ನ ಹೆಸರಿನಲ್ಲಿ ಹಲವರು ಶಿಕ್ಷಕರಾಗಿ ನೇಮಕಾತಿ ಪಡೆದುಕೊಂಡಿರುವ ಸಂಗತಿ ತಿಳಿದ ನಂತರದಲ್ಲಿ ಶಿಕ್ಷಣ ಅಧಿಕಾರಿಗಳ ಬಳಿ ಹೋಗಿ ನನಗಾಗುತ್ತಿರುವ ಅನ್ಯಾಯದ ಕುರಿತು ಮಾಹಿತಿ ನೀಡಿದೆ ಎಂದು ಅನಾಮಿಕಾ ಶುಕ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳಮುಖಿ ಆಗಲು ಹೊರಟಿದ್ದ ಬಾಲಕನ ಬದುಕಲ್ಲಿ ರೋಚಕ ತಿರುವು!
ನಿಜವಾದ ಅನಾಮಿಕಾ ಶುಕ್ಲಾ ಅವರ ಕತೆ ಕೇಳಿದ ಬಳಿಕ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಯಿತು. ಭಾಗ್ಪತ್​ನ ಬದೌತ್​ ಸೇರಿ ಒಟ್ಟು 9 ಕಡೆಯಲ್ಲಿ ಇವರ ಪ್ರಮಾಣಪತ್ರಗಳನ್ನು ನಕಲು ಮಾಡಿ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿರುವುದು ಪತ್ತೆಯಾಗಿದೆ. ಆರು ಜಿಲ್ಲೆಗಳಲ್ಲಿ ನಕಲಿ ಅನಾಮಿಕಾ ಶುಕ್ಲಾಗಳು ಒಟ್ಟು 12.24 ಲಕ್ಷ ರೂಪಾಯಿ ವೇತನ ಪಡೆದುಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಉತ್ತರಪ್ರದೇಶದ ಶಿಕ್ಷಣ ಸಚಿವ ಸತೀಶ್​ ದ್ವಿವೇದಿ ಹೇಳಿದ್ದಾರೆ.
ಭಾಗ್ಪತ್​ ಅಲ್ಲದೆ, ವಾರಾಣಸಿ, ಕಸ್ಗಂಜ್​, ಅಮೇಠಿ, ಆಲಿಗಢ, ರಾಯ್​ಬರೇಲಿ, ಅಲಹಾಬಾದ್​, ಶಹರಾನ್​ಪುರ ಮತ್ತು ಅಂಬೇಡ್ಕರ್​ನಗರ ಜಿಲ್ಲೆಗಳಲ್ಲಿ ಕೂಡ ನಕಲಿ ಅನಾಮಿಕಾ ಶುಕ್ಲಾಗಳು ಪತ್ತೆಯಾಗಿದ್ದಾರೆ. ಈ ಎಲ್ಲ ಕಡೆಯಲ್ಲೂ ಪ್ರಮಾಣಪತ್ರಗಳನ್ನು ನಕಲು ಮಾಡಿರುವುದು ಗೊತ್ತಾಗಿದೆ. ಕೆಲವೊಂದು ಶಾಲೆಗಳಲ್ಲಿ ನೇಮಕಾತಿ ದೊರೆತರೂ ನಕಲಿ ಅನಾಮಿಕಾ ಶುಕ್ಲಾಗಳು ಕೆಲಸಕ್ಕೆ ವರದಿ ಮಾಡಿಕೊಂಡಿಲ್ಲ ಎಂಬುದು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಶಿಕ್ಷಕರ ಡಿಜಿಟಲ್​ ಡೇಟಾಬೇಸ್​ ಅನ್ನು ಸಂಗ್ರಹಿಸುವಾಗ ಶಿಕ್ಷಕರ ನೇಮಕಾತಿಯಲ್ಲಿ ಆಗಿರುವ ಅಕ್ರಮಗಳು ಪತ್ತೆಯಾಗಿದ್ದವು. ಅನಾಮಿಕಾ ಶುಕ್ಲಾ ಹೆಸರಿನಲ್ಲಿ ನೇಮಕಾತಿ ಪಡೆದುಕೊಂಡಿದ್ದ ಪ್ರಿಯಾ ಎಂಬಾಕೆ ರಾಜೀನಾಮೆ ನೀಡಲು ಮುಂದಾದಾಗ ಆಕೆಯನ್ನು ಬಂಧಿಸಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಇಡೀ ಹಗರಣ ಬಹಿರಂಗಗೊಂಡಿತ್ತು.
ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕರ್ನಾಟಕ ಸಿದ್ಧಪಡಿಸಿದ ಬಲಶಾಲಿ ಅಸ್ತ್ರಗಳಿವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
