ಲಖನೌ:ಕಳುಹಿಸಬೇಕಿದ್ದ ಪಾರ್ಸೆಲ್​ನಲ್ಲಿ ವಿಳಾಸ ಬರೆದುಕೊಡಲು ಇಲ್ಲೊಬ್ಬ ಭೂಪ 6 ರೂ. ನೀಡುವಂತೆ ವಿಚಿತ್ರ ಬೇಡಿಕೆ ಒಂದನ್ನು ಈ ಮಹಿಳೆಯ ಮುಂದೆ ಇರಿಸಿದ್ದ. ಕೇವಲ 6 ರೂ. ಎಂದುಕೊಂಡು ಈಕೆ ಹಣ ಟ್ರಾನ್ಸ್​ಫರ್​ ಮಾಡಿದ್ದಾಳೆ. ಇದಾಗಿ ಕೆಲವೇ ಕ್ಷಣಗಳಲ್ಲಿ ಆಕೆ ಬರೋಬ್ಬರಿ 18 ಸಾವಿರ ರೂ. ಕಳೆದುಕೊಂಡಿದ್ದಾಳೆ.
ಲಖನೌನಲ್ಲಿ ಇರುವ ಗಣೇಶ್‌ಗಂಜ್‌ನ ಖರ್ಶೆಡ್‌ಬಾಗ್ ಗೇಟ್‌ನ ಅದಿತಿ ಪಟೇಲ್ ಎಂಬ ಮಹಿಳೆಗೆ ಕೊರಿಯರ್ ಸೇವೆ ಒದಗಿಸುವ ಕಂಪನಿಯೊಂದರ ಉದ್ಯೋಗಿಯ ಸೋಗಿನಲ್ಲಿ ಕರೆ ಮಾಡಿದ್ದ ವಂಚಕ ಈಕೆಗೆ ಪಂಗನಾಮ ಹಾಕಿದ್ದಾನೆ. ತಾನು ಕೊರಿಯರ್​ ಕಂಒಎನಿಯ ಉಗ್ಯೋಗಿ ಎಂದು ಪರಿಚಯಿಸಿಕೊಂಡ ವಂಚಕ ಈ ಮಹಿಳೆಗೆ ಕರೆ ಮಾಡಿ ರೂ. 6 ಪಾವತಿಸುವಂತೆ ಹೇಳಿದ್ದ.
ಪಾರ್ಸೆಲ್‌ನಲ್ಲಿ ಬರೆದಿರುವ ಆಕೆಯ ವಿಳಾಸ ತಪ್ಪಾಗಿದೆ ಎಂದು ಆಕೆಗೆ ತಿಳಿಸಿ 6 ರೂ. ಪಾವತಿಸುವಂತೆ ಆಕೆಗೆ ಒಂದು ಲಿಂಕ್ ಕಳುಹಿಸಿದ್ದಾನೆ. ಈ ಲಿಂಕ್​ ಒತ್ತಿ 6 ರೂ. ಪಾವತಿಸಿದ್ದೇ ತಡ ಆಕೆಯ ಖಾತೆಯಿಂದ 18,001 ಮತ್ತು 800 ರೂ. ಹೋಗಿವೆ!
ಇದೀಗ ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಆಗಿರುವ ಬ್ರಿಜೇಶ್ ದ್ವಿವೇದಿ ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ಗಮನಿಸಿದಾಗ ಇದೇ ರೀತಿ ನೈಜೀರಿಯಾ ಮೂಲದ ಗ್ಯಾಂಗ್​ ಒಂದರ ಕೈವಾಡ ಇರಬಹುದು ಎಂದು ತೋರುತ್ತಿದೆ ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಯಾವುದೇ ಕಾರಣಕ್ಕೂ ಬೇರೆಯವರು ಯಾವುದೇ ಲಿಂಕ್​ ಕಳುಹಿಸಿದಾಗ ಅದರ ಮೂಲಕ ಹಣ ಕಳುಹಿಸಬಾರದು ಎನ್ನುವುದು ಸಾರಾಂಶ ಎನ್ನಬಹುದು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
