ಕೋಟಾ:ಕೋಟಾದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ‘ಭಾನುವಾರದಂದು ಅಧ್ಯಯನ ಮಾಡಬೇಡಿ’ ಎಂದು ಹೇಳಿ ಎಲ್ಲರನ್ನೂ ಒಮ್ಮೆ ನಗೆಗಡಲಲ್ಲಿ ತೇಲಿಸಿದರು. ‘ಆದರೆ ಉತ್ತಮ ಸಾಧನೆ ಮಾಡಿ ಮತ್ತು ದೇಶದ ಭವಿಷ್ಯದ ನಾಯಕರಾಗಲು ಗಮನಹರಿಸಿ’ ಎಂದು ಸಲಹೆ ಕೂಡ ನೀಡಿದರು.
‘ಭಾನುವಾರದಂದು ಅಧ್ಯಯನ ಮಾಡಬೇಡಿ’ ಎಂದು ನಿರ್ಮಲಾ ಸೀತಾರಾಮನ್ ಸಚಿವರನ್ನು ಕಂಡು ಖುಷಿಯಾಗಿದ್ದ ವಿದ್ಯಾರ್ಥಿಗಳ ಗುಂಪಿಗೆ ಹೇಳಿದರು. ವಿದ್ಯಾರ್ಥಿಗಳು ಅವರನ್ನು ಭೇಟಿಯಾಗಲು ಭಾನುವಾರದಂದು ಒಟ್ಟುಗೂಡಿದ್ದಾರೆ ಎಂದು ತಿಳಿದಾಗ, ಸಚಿವರು ‘ನಿಮ್ಮೆಲ್ಲರನ್ನು ಇಲ್ಲಿ ನೋಡಲು ತುಂಬಾ ಸಂತೋಷವಾಗಿದೆ. ಮುಂಬರುವ ಪ್ರವೇಶ ಪರೀಕ್ಷೆಗಳಿಗೆ ಚೆನ್ನಾಗಿ ಓದಿ’ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕೋಟಾದಲ್ಲಿ ‘ಯುವ ಶಕ್ತಿ ಸಂವಾದ’ವನ್ನು ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಯುವ ಮನಸ್ಸುಗಳೊಂದಿಗೆ ಸಂವಹನ ನಡೆಸುತ್ತಿರುವುದು ಉಲ್ಲಾಸದಾಯಕವಾಗಿದೆ ಎಂದು ಹೇಳಿದರು. “ಇದು ತುಂಬಾ ಉತ್ತೇಜಕವಾಗಿದೆ. ಯುವ ಮನಸ್ಸುಗಳಿಂದಾಗಿ ನಾನು ತುಂಬಾ ಪ್ರಭಾವಿತಳಾಗಿದ್ದೇನೆ. ಇವರ ಶಕ್ತಿಯೇ ಭಾರತವನ್ನು ಮುಂದೆ ಸಾಗುವಂತೆ ಮಾಡುತ್ತದೆ” ಎಂದು ಅವರು ಹೇಳಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − three =
Remember me
