ಹೊಸದಿಲ್ಲಿ:ಇಂದು ಮಧ್ಯಂತರ ಬಜೆಟ್​ ಮಂಡನೆ ಮಾಡಿದ ಕೇಂದ್ರ ಹಣಕಾಸು ಸಚಿವೆ ಸೀತಾರಾಮನ್​, ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್, ಚೆಸ್​ ಆಟಗಾರ ಪ್ರಗ್ನಾನಂದ ಅವರ ಹೆಸರನ್ನು ಉಲ್ಲೇಖಿಸಿದ್ದು, ಸಂಸತ್ತಿನ ಬಜೆಟ್​ ಭಾಷಣದಲ್ಲಿ ವಿಶೇಷವಾಗಿ ಅಭಿನಂದನೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸಬ್​ ಕಾ ಸಾಥ್,​ ಸಬ್ ​ಕಾ ವಿಕಾಸ್,​ ಸಬ್ ​ಕಾ ವಿಶ್ವಾಸ್ ​ಮಂತ್ರದಡಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ: ನಿರ್ಮಲಾ ಸೀತಾರಾಮನ್​​
ಇಂದು ಸಂಸತ್ತಿನಲ್ಲಿ ನಡೆದ ಮಧ್ಯಂತರ ಬಜೆಟ್ ಭಾಷಣದಲ್ಲಿ ಚೆಸ್ ಆಟಗಾರ ಆರ್. ಪ್ರಗ್ನಾನಂದ ಹೆಸರು ಪ್ರಸ್ತಾಪಿಸಿದ ಸಚಿವರು, ಕಳೆದ ವರ್ಷ ನಡೆದ ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಆಡಿದ ವೈಖರಿ ಹಾಗೂ ಕೊಟ್ಟ ಪೈಪೋಟಿಗೆ ಅವರನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ.
ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, 2010ರಲ್ಲಿ ಭಾರತವು 80 ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಹೊಂದಿತ್ತು. ಭಾರತವು ಕ್ರೀಡೆಯಲ್ಲಿ ಹೊಸ ಎತ್ತರಕ್ಕೆ ಏರುತ್ತಿದೆ ಮತ್ತು ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್‌ನಲ್ಲಿ ಅಥ್ಲೀಟ್‌ಗಳ ಅದ್ಭುತ ಪ್ರದರ್ಶನಗಳು ಕಂಡುಬಂದಿದೆ ಎಂದು ಹೇಳಿದರು.
ಇದನ್ನೂ ಓದಿ:ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಭಾಗವಹಿಸುವಿಕೆ 10 ವರ್ಷಗಳಲ್ಲಿ ಶೇ. 28 ಹೆಚ್ಚಳ: ನಿರ್ಮಲಾ ಸೀತಾರಾಮನ್​
“ದೇಶವು 2023ರಲ್ಲಿ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅತ್ಯಧಿಕ ಪದಕಗಳನ್ನು ಗಳಿಸಿದೆ. ಇದೇ ವೇಳೆ ಪ್ರಗ್ನಾನಂದ ಅವರು ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ ನಡೆಸಿದ ತೀವ್ರ ಪೈಪೋಟಿಯನ್ನು ಕೂಡ ನಾವು ಗಮನಿಸಿದ್ದೇವೆ. 2010ರಲ್ಲಿ 20 ಕ್ಕಿಂತ ಕಡಿಮೆ ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳಿಗೆ ಹೋಲಿಸಿದರೆ ಇಂದು ಭಾರತವು 80ಕ್ಕೂ ಹೆಚ್ಚು ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಹೊಂದಿದೆ” ಎಂದು ಹೇಳಿದರು,(ಏಜೆನ್ಸೀಸ್).
ಸ್ಟಾರ್​ ನಿರ್ದೇಶಕನ ಚಿತ್ರದಲ್ಲಿ ’12 ಫೇಲ್’​ ನಟ! ಇದು ಖಂಡಿತ ಸಿನಿಮಾ ಅಲ್ಲ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 5 =
Remember me
