ರಾಜಕೋಟ್​:ಸಾಲ ತೀರಿಸಿಲ್ಲ ಎಂದು ಆಟೋಚಾಲಕನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣವೊಂದು ನಡೆದಿದೆ. 37 ವರ್ಷದ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಮೂವರ ವಿರುದ್ಧ ದೂರು ನೀಡುವಂತೆ ಪೊಲೀಸರು ಸಂತ್ರಸ್ತೆಯನ್ನು ಸಂಪರ್ಕಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಮಹಿಳೆಯೊಬ್ಬಳ ಮೇಲೆ ಮೂವರು ಚಾಕು ತೋರಿಸಿ ದಾಳಿ ಮಾಡಿದ್ದು, ಆ ಕುರಿತ ಸಿಸಿಟಿವಿ ಕ್ಲಿಪ್ಪಿಂಗ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯನ್ನು ಪತ್ತೆ ಮಾಡಿದ್ದ ಪೊಲೀಸರು ಆರೋಪಿಗಳ ವಿರುದ್ಧ ದೂರು ನೀಡುವಂತೆ ಹೇಳಿದ್ದಾಗ ಸಾಲದ ವಿಚಾರ ಗುಜರಾತ್​ನ ರಾಜಕೋಟ್​ನಲ್ಲಿ ಬೆಳಕಿಗೆ ಬಂದಿದೆ.
ಆಟೋಚಾಲಕರಾಗಿರುವ ತನ್ನ ಪತಿ ಫೆಬ್ರವರಿಯಲ್ಲಿ ಅಜಿತ್ಸಿನ್ ಚಾವ್ಡ ಹಾಗೂ ಆತನ ಪಾಲುದಾರನಿಂದ 50 ಸಾವಿರ ಸಾಲ ಪಡೆದಿದ್ದು, ಅದನ್ನು ತೀರಿಸುವಲ್ಲಿ ವಿಫಲರಾಗಿದ್ದರು. ಅಲ್ಲದೆ ಬಡ್ಡಿಯಾಗಿ ದಿನಾ 1,500 ರೂ. ನೀಡುವಂತೆ ಸಾಲ ನೀಡಿದ್ದವರು ಪೀಡಿಸುತ್ತಿದ್ದರು. ಪತಿ ಬಡ್ಡಿ ಕೊಡಲು ವಿಫಲರಾಗಿದ್ದಕ್ಕೆ ಮನೆಗೆ ನುಗ್ಗಿದ್ದ ಚಾವ್ಡ, ಅತ್ಯಾಚಾರ ಮಾಡಿ, ಅದನ್ನು ವಿಡಿಯೋ ಮಾಡಿಕೊಂಡಿದ್ದ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.
ಅಲ್ಲದೆ ಅದೇ ತಿಂಗಳಿನಲ್ಲಿ ಆರೋಪಿಯು ತನ್ನನ್ನು ಒತ್ತಾಯಪೂರ್ವಕವಾಗಿ ದೇವಸ್ಥಾನಕ್ಕೆ ಕರೆದೊಯ್ದು ಹಣೆಗೆ ಸಿಂಧೂರ ಹಚ್ಚಿ ಹೆಂಡತಿಯಂತೆ ಇರಲು ಒತ್ತಾಯಿಸಿದ್ದ. ಮಾತ್ರವಲ್ಲ, ಆಗಾಗ ಮನೆಗೆ ಬಂದು ಅತ್ಯಾಚಾರ ಮಾಡುತ್ತಿದ್ದ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಈ ಬಗ್ಗೆ ರಾಜಕೋಟ್​ ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದರಿಂದ ಆಕೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಕೋರ್ಟ್ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ಪೊಲೀಸರು ಆಕೆಯ ಹೇಳಿಕೆ ಪಡೆಯಲಿದ್ದಾರೆ ಎಂಬುದನ್ನು ಗುರುವಾರ ತಿಳಿದ ಚಾವ್ಡ, ಇಬ್ಬರು ಸಹಚರರೊಂದಿಗೆ ಶುಕ್ರವಾರ ಆಟೋಚಾಲಕನ ಮನೆಗೆ ತೆರಳಿ ಆತನಿಗೆ ಹಣದ ಆಮಿಷ ತೋರಿದ್ದಲ್ಲದೆ, ಸಾಲದ ಹಣ ಮನ್ನಾ ಮಾಡುವಂತೆಯೂ ಆಸೆ ತೋರಿದ್ದ. ಇದಾದ ಮೇಲೆ ಸಂತ್ರಸ್ತೆಯನ್ನು ನೋಡಿದ್ದ ಆರೋಪಿಗಳು ಆಕೆಯ ಮೇಲೆ ಚಾಕು ಹಿಡಿದು ದಾಳಿ ಮಾಡಿದ್ದು, ಆಕೆ ಗಾಯಗೊಂಡಿದ್ದಳು. ಈ ವಿಡಿಯೋ ವೈರಲ್ ಆಗಿತ್ತು.
ರೈಲಲ್ಲಿ ನೀಡಿದ್ದ ಆಮ್ಲೆಟ್​ನಲ್ಲಿ ಜಿರಳೆ; ತಿಂಡಿಗೆ ಆಮ್ಲೆಟ್​ ತಿಂದಿದ್ದ ಇನ್ನೊಬ್ಬ ಪ್ರಯಾಣಿಕನಿಗೂ ಪಶ್ಚಾತ್ತಾಪ!

ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆಯಾಗಿ ನೀಡಿದ ಭಿಕ್ಷುಕಿ; 20 ವರ್ಷಗಳಿಂದ ಅದೇ ದೇವಳದ ಮುಂದೆ ಭಿಕ್ಷೆ ಬೇಡುತ್ತಿದ್ದ ವೃದ್ಧೆ

ಭಿಕ್ಷೆ ಬೇಡುತ್ತಿದ್ದ ಹತ್ತು ವರ್ಷದ ಬಾಲಕ ಈಗ ಕೋಟ್ಯಧಿಪತಿ!; ಆಗಿದ್ದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
