ನವದೆಹಲಿ: ಕಾರ್ವಿುಕರ ಭವಿಷ್ಯನಿಧಿ (ಇಪಿಎಫ್) ಮತ್ತು ರಾಜ್ಯ ಕಾರ್ವಿುಕರ ಆರೋಗ್ಯ ವಿಮಾ ನಿಗಮದ (ಇಎಸ್​ಐಸಿ) ಚಂದಾದಾರರು ಕೋವಿಡ್​ನಿಂದ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಯೋಜನೆಯಡಿ ಹೆಚ್ಚುವರಿ ನೆರವನ್ನು ಕೇಂದ್ರ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯ ಭಾನುವಾರ ಪ್ರಕಟಿಸಿದೆ.
ಕೋವಿಡ್​ನಿಂದ ಸಾವನ್ನಪ್ಪಿದ ಇಎಸ್​ಐಸಿ ಚಂದಾದಾರರ ಕುಟುಂಬಕ್ಕೆ ಪಿಂಚಣಿ ಮತ್ತು ಇಪಿಎಫ್​ಒ ಚಾಲಿತ ಗುಂಪು ವಿಮೆ ಪಡೆದವರಿಗೆ ಕಲ್ಪಿಸಲಾದ ಕಾರ್ವಿುಕರ ಠೇವಣಿ ಆಧಾರಿತ ವಿಮಾ ಯೋಜನೆ (ಇಡಿಎಲ್​ಐ) ಅಡಿ ಗರಿಷ್ಠ ಪರಿಹಾರ ಮೊತ್ತವನ್ನು 6 ಲಕ್ಷ ರೂ.ನಿಂದ 7 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ಇಡಿಎಲ್​ಐನ ಕನಿಷ್ಠ ಪರಿಹಾರ ಮೊತ್ತ 2 ಲಕ್ಷ ರೂ. ಆಗಿರುತ್ತದೆ. ಈ ಸೌಕರ್ಯಕ್ಕಾಗಿ ಚಂದಾದಾರರ ಕುಟುಂಬದವರು ಹೆಚ್ಚಿನ ವೆಚ್ಚ ಅಥವಾ ಶುಲ್ಕ ತೆರಬೇಕಾಗಿಲ್ಲ ಎಂದು ಕಾರ್ವಿುಕ ಸಚಿವಾಲಯ ಸ್ಪಷ್ಟಪಡಿಸಿದೆ. ಚಂದಾದಾರರು ಸಾವನ್ನಪ್ಪಿದರೆ ಅಥವಾ ಗಂಭೀರವಾದ ಗಾಯಕ್ಕೆ ಗುರಿಯಾದರೆ ಕಾರ್ವಿುಕ ಪಡೆಯುತ್ತಿದ್ದ ವೇತನದಲ್ಲಿ ಶೇ. 90ರಷ್ಟನ್ನು ಪಿಂಚಣಿಯನ್ನಾಗಿ ಪಡೆಯಬಹುದು. ಈ ಪಿಂಚಣಿ ಕಾರ್ವಿುಕನ ಪತ್ನಿ ಇಲ್ಲವೆ ತಾಯಿಗೆ ಜೀವಮಾನ ಪೂರ್ತಿ ದೊರೆಯುತ್ತದೆ. ಮಗನಿಗಾದರೆ 25 ವರ್ಷ ತುಂಬು ವವರೆಗೆ ಸಿಗುತ್ತದೆ. ಮಗಳಾಗಿದ್ದರೆ ಆಕೆಗೆ ವಿವಾಹ ಆಗುವವರೆಗೆ ದೊರೆಯುತ್ತದೆ. ಇದು 2020 ಮಾರ್ಚ್ 24ರಿಂದ 2 ವರ್ಷ ಚಾಲನೆಯಲ್ಲಿರಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
