ಆಸ್ಟ್ರೇಲಿಯ:ಹೊಡಿಬಡಿ ಆಟಗಾರ ಡೇವಿಡ್‌ ವಾರ್ನರ್‌ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಹೊಸ ವರ್ಷದ ಆರಂಭದಲ್ಲೇ ಆಸೀಸ್​ ತಂಡಕ್ಕೆ ಮತ್ತು ಅಭಿಮಾನಿಗಳಿಗೆ ಶಾಕ್​ ನೀಡಿದ ಬೆನ್ನೆಲ್ಲೆ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್ ಎಲ್ಲಾ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ್ದಾರೆ.
2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಫಿಂಚ್ ಪ್ರಮುಖ ಲೀಗ್​ಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ 37 ವರ್ಷದ ಫಿಂಚ್ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ತೀರ್ಮಾನಿಸಿದ್ದಾರೆ.
ಪ್ರಸ್ತುತ, ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ನಾಯಕರಾಗಿರುವ ಆರೋನ್ ಫಿಂಚ್, ಬಿಬಿಎಲ್​ ಲೀಗ್​ ಮೂಲಕವೇ ವೃತ್ತಿ ಬದುಕಿಗೆ ವಿದಾಯ ಹೇಳಲು ಫಿಂಚ್​ ತೀರ್ಮಾನಿಸಿದ್ದಾರೆ. ಬಿಬಿಎಲ್​ ಲೀಗ್​ ನಲ್ಲಿ ಒಟ್ಟು ಮೆಲ್ಬೋರ್ನ್ ರೆನೆಗೇಡ್ಸ್ ಪರ 106 ಪಂದ್ಯಗಳನ್ನಾಡಿರುವ ಫಿಂಚ್ 2 ಭರ್ಜರಿ ಶತಕ ಹಾಗೂ 26 ಅರ್ಧಶತಕಗಳೊಂದಿಗೆ ಒಟ್ಟು 3311 ರನ್ ಕಲೆಹಾಕಿದ್ದಾರೆ.
ರೆನೆಗೇಡ್ಸ್ ತಂಡದ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಹೊಂದಿದ್ದಾರೆ. ಹಾಗೆಯೇ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎಂಬ ದಾಖಲೆ ಕೂಡ ಫಿಂಚ್ ಹೆಸರಿನಲ್ಲಿದೆ. 2018-19 ರ ಬಿಗ್ ಬ್ಯಾಷ್ ಲೀಗ್​ನಲ್ಲಿ ಆರೋನ್ ಫಿಂಚ್ ನಾಯಕತ್ವದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ತಮ್ಮ ನೆಚ್ಚಿನ ತಂಡದ ಪರ ಕೊನೆಯ ಪಂದ್ಯವಾಡುವ ಮೂಲಕ ಕ್ರಿಕೆಟ್ ಬದುಕಿಗೆ ವಿದಾಯ ಹೇಳಲು ಫಿಂಚ್ ನಿರ್ಧರಿಸಿದ್ದಾರೆ.
ಕುಂದಾಪುರ ಯುವಕನಿಗಾಗಿ ಜರ್ಮನಿಯಿಂದ ಬಂದಳು; ವಿದೇಶಿ ಪ್ರೀತಿಗೆ ಸ್ವದೇಶಿದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ

ಕ್ರೀ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 18 =
Remember me
