‘ಕೌನ್ ಬನೇಗಾ ಕರೋಡ್ ಪತಿ’ 12ನೇ ಸೀಸನ್ ಇದೀಗ ವಿವಾದಕ್ಕೆ ಕಾರಣವಾಗಿದೆ. ನಿರೂಪಕರಾದ ಬಾಲಿವುಡ್​ ಹಿರಿಯ ನಟ ಅಮಿತಾಭ್​​ ಬಚ್ಚನ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಅಕ್ಟೋಬರ್​ 30ರ ಎಪಿಸೋಡ್​ನಲ್ಲಿ ಅಮಿತಾಭ್​ ಬಚ್ಚನ್​ ಮನುಸ್ಮೃತಿಯ ಬಗ್ಗೆ ಕೇಳಿದ ಪ್ರಶ್ನೆಯೇ ಇದಕ್ಕೆ ಕಾರಣ. ಅಂದಿನ ಎಪಿಸೋಡ್​​ನಲ್ಲಿ ಸಾಮಾಜಿಕ ಹೋರಾಟಗಾರ ವಿಲ್ಸನ್ ಮತ್ತು ನಟ ಅನುಪ್ ಸೋನಿ ಅತಿಥಿಗಳಾಗಿದ್ದರು. ಅವರಿಗೆ, 1927ರ ಡಿಸೆಂಬರ್​ 25ರಂದು ಡಾ. ಬಿ.ಆರ್​.ಅಂಬೇಡ್ಕರ್​ ಮತ್ತು ಅವರ ಬೆಂಬಲಿಗರು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟುಹಾಕಿದರು? ಎಂಬ 6.40 ಲಕ್ಷ ರೂಪಾಯಿಯ ಪ್ರಶ್ನೆಯನ್ನು ಅಮಿತಾಭ್​ ಬಚ್ಚನ್​ ಕೇಳಿದ್ದರು. ಹಾಗೇ ಅದಕ್ಕೆ, ವಿಷ್ಣುಪುರಾಣ, ಭಗವದ್ಗೀತೆ, ಋಗ್ವೇದ ಮತ್ತು ಮನುಸ್ಮೃತಿ ಎಂಬ ನಾಲ್ಕು ಆಯ್ಕೆಗಳನ್ನು ಕೊಡಲಾಗಿತ್ತು.
ಅದಾದ ಬಳಿಕ ಅಮಿತಾಭ್​ ಬಚ್ಚನ್​ 1927ರಲ್ಲಿ ನಡೆದ ಘಟನೆಯನ್ನು ವಿವರಿಸುತ್ತ, ಅಂಬೇಡ್ಕರ್​ ಅವರು ಪುರಾತನ ಹಿಂದು ಗ್ರಂಥ ಮನುಸ್ಮೃತಿಯನ್ನು ವಿರೋಧಿಸುತ್ತಿದ್ದರು. ಮನುಸ್ಮೃತಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ ಎಂಬುದೇ ಅವರ ಖಂಡನೆಗೆ ಕಾರಣವಾಗಿತ್ತು. ಅದೇ ಕಾರಣಕ್ಕೆ ಅದರ ಪ್ರತಿಗಳನ್ನು ಸುಟ್ಟು ಹಾಕಿದರು ಎಂದು ಹೇಳಿದ್ದರು.
ಆದರೆ ಅಮಿತಾಭ್​ ಬಚ್ಚನ್​ ಅವರ ಈ ವಿವರಣೆ ಅನೇಕರಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು. ಲಾತೂರ್ ಜಿಲ್ಲೆಯ ಆಸಾದ ಬಿಜೆಪಿ ಶಾಸಕ ಅಭಿಮನ್ಯು ಪವಾರ್​ ಅವರು ಅಮಿತಾಭ್​ಬಚ್ಚನ್​ ಮತ್ತು ಸೋನಿ ಚಾನಲ್​ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಶ್ನೆಗೆ ನೀಡಲಾದ ನಾಲ್ಕೂ ಆಯ್ಕೆಗಳೂ ಹಿಂದು ಗ್ರಂಥಗಳದ್ದೇ ಆಗಿದೆ. ಪ್ರಶ್ನೆಯ ಹಿಂದಿನ ಉದ್ದೇಶ ಹಿಂದುಗಳ ಭಾವನೆಗೆ ನೋವು ಉಂಟು ಮಾಡುವುದೇ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.  ಹಾಗೇ ಸಾಮಾಜಿಕ ಜಾಲತಾಣಗಳಲ್ಲೂ ಅಮಿತಾಭ್​ ಬಚ್ಚನ್​ ಕೇಳಿದ ಪ್ರಶ್ನೆಗೆ ತುಂಬ ವಿರೋಧ ವ್ಯಕ್ತವಾಗಿತ್ತು. (ಏಜೆನ್ಸೀಸ್​)
https://www.vijayavani.net/ragini-and-sanjana-did-not-get-bail/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 11 =
Remember me
