ನವದೆಹಲಿ:ಗುರುಗ್ರಾಮ್ ಮೂಲದ ಹೆಸರಾಂತ ಯುಟ್ಯೂಬರ್ ಮ್ಯಾಕ್ಸ್ಟರ್ನ್​​​ಗೆ ಕಪಾಳಮೋಕ್ಷ ಮಾಡಿದ ಬಿಗ್ ಬಾಸ್​ ಒಟಿಟಿ 2 ವಿಜೇತ ಮತ್ತು ಜನಪ್ರಿಯ ಯುಟ್ಯೂಬರ್ ಎಲ್ವಿಶ್ ಯಾದವ್ ಮೇಲೆ ಇದೀಗ ಎಫ್​ಐಆರ್​ ದಾಖಲಾಗಿದೆ. ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲಲ್ಲ. ಇಂತಹದ್ದೇ ಘಟನೆಗಳಲ್ಲಿ ಭಾಗಿಯಾಗಿದ್ದ ಯಾದವ್, ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಈಗ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿದ ಅನೇಕರು ಇವನನ್ನು ಈ ಕೂಡಲೇ ಬಂಧಿಸಿ ಎಂದು ಆಗ್ರಹಿಸಿದ್ದರು. ಅದರಂತೆಯೇ ಇದೀಗ ಪೊಲೀಸರು ಎಲ್ವಿಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮೂರ್ನಾಲ್ಕು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ: ಬಿ.ವೈ ವಿಜಯೇಂದ್ರ
ಗುರುವಾರ ಗುರುಗ್ರಾಮ್ ಮೂಲದ ಯೂಟ್ಯೂಬರ್ ಮ್ಯಾಕ್ಸ್‌ಟರ್ನ್ (ಸಾಗರ್ ಠಾಕೂರ್) ಮೇಲೆ ಎಲ್ವಿಶ್ ಕಪಾಳಮೋಕ್ಷ ಮಾಡುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಕುರಿತು ಶುಕ್ರವಾರ (ಮಾ.08) ಬೆಳಗ್ಗೆ 1.20ಕ್ಕೆ ಮ್ಯಾಕ್ಸ್‌ಟರ್ನ್ ತನ್ನ ಎಕ್ಸ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ತನ್ನ ವೀಡಿಯೊದಲ್ಲಿ, ಸುಮಾರು 8-10 ಜನರು ಅವರ ಮೇಲೆ ದಾಳಿ ಮಾಡಿ, ಹಲ್ಲೆಗೈದಿದ್ದು, ಕಡೆಯಲ್ಲಿ ಕೊಲ್ಲುವುದಾಗಿ ಕೂಡ ಬೆದರಿಕೆಯೊಡ್ಡಿದ್ದಾರೆ ಎಂದು ಮ್ಯಾಕ್ಸ್‌ಟರ್ನ್ ದೂರಿದ್ದಾರೆ.
https://twitter.com/RealMaxtern/status/1765835399870722421?ref_src=twsrc%5Etfw%7Ctwcamp%5Etweetembed%7Ctwterm%5E1765835399870722421%7Ctwgr%5Ee1e0be775b95aaa6b3c4e3d8c116405c13fd37fc%7Ctwcon%5Es1_&ref_url=https%3A%2F%2Fwww.vijayavani.net%2Fonce-again-elvish-yadav-brutally-trolled
ಸಾಗರ್​ ಠಾಕೂರ್​ ಮೇಲೆ ಎಲ್ವಿಶ್ ತನ್ನ ಸಹಚರೊಂದಿಗೆ ಹಲ್ಲೆ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮ ಸುತ್ತುವರೆದಿದ್ದು, ನೆಟ್ಟಿಗರು ಎಲ್ವಿಶ್ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಎಲ್ವಿಶ್ ಯಾದವ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಮುಂದಿನ ವಾರ ಮಾರುಕಟ್ಟೆಗೆ ಲಗ್ಗೆ ಹಾಕಲಿವೆ 7 ಐಪಿಒಗಳು: ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಲಾಭ
ಪೊಲೀಸರು ಐಪಿಸಿ ಸೆಕ್ಷನ್ 147, 149, 323, 506 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇಂತಹ ಘಟನೆ ಬೆಳಕಿಗೆ ಬರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ರಾಜಸ್ಥಾನದ ಜೈಪುರದ ರೆಸ್ಟೋರೆಂಟ್‌ನಲ್ಲಿ ಎಲ್ವಿಶ್ ಯಾದವ್ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದ. ಇದೇ ರೀತಿಯಲ್ಲೇ ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ವ್ಯಕ್ತಿಗೆ ಹೊಡೆಯುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿತ್ತು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
ಮದುವೆಗೂ ಮುನ್ನ ಆರೋಗ್ಯ ಸಮಸ್ಯೆ ತೋಡಿಕೊಂಡ ಅನಂತ್​; ಮಗನ ಮಾತಿಗೆ ಕಣ್ಣೀರಿಟ್ಟ ಮುಖೇಶ್ ಅಂಬಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
