ಗೋವಾ:ಸುಶಿಕ್ಷಿತರು ಯಾರೂ ಮಾಂಗಲ್ಯ ಸೂತ್ರವನ್ನು ಅವಹೇಳನ ಮಾಡುವುದಿಲ್ಲ. ಅದರಲ್ಲೂ ಮಹಿಳೆಯರಂತೂ ಅದನ್ನು ಅಗೌರವಿಸುವುದಿಲ್ಲ. ಆದರೆ ಸುಶಿಕ್ಷಿತ ಮಹಿಳೆಯೊಬ್ಬರು ಮಾಂಗಲ್ಯ ಸೂತ್ರ ಧರಿಸಿದವರನ್ನು ಚೈನ್​ ಹಾಕಿದ ನಾಯಿಗೆ ಹೋಲಿಸಿ ಈಗ ಸಂಕಷ್ಟ ತಂದಿಟ್ಟುಕೊಂಡಿದ್ದಾರೆ. ಏಕೆಂದರೆ ಆಕೆಯ ವಿರುದ್ಧ ಇದೀಗ ಎಫ್​ಐಆರ್​ ದಾಖಲಾಗಿದೆ.
ಹೀಗೆ ಉಡಾಫೆ ಮಾತಾಡಿ ಎಫ್​ಐಆರ್​ಗೆ ಗುರಿಯಾಗಿರುವವರು ವಿ.ಎಂ. ಸಲ್ಗಾವೋಕರ್​ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ ಸಿಂಗ್​. ಮಾಂಗಲ್ಯ ಸೂತ್ರ ಧರಿಸಿರುವ ಮಹಿಳೆಯರನ್ನು ಸರಪಳಿ ಹಾಕಿದ ನಾಯಿಗೆ ಹೋಲಿಸಿ ಈಕೆ ಫೇಸ್​​ಬುಕ್​ನಲ್ಲಿ ಸ್ಟೇಟಸ್ ಹಾಕಿದ್ದರು. ಈ ಬಗ್ಗೆ ರಾಷ್ಟ್ರೀಯ ಹಿಂದು ಯುವವಾಹಿನಿ ಗೋವಾ ಘಟಕದ ರಾಜೀವ್ ಝಾ ಪೊಲೀಸರಿಗೆ ದೂರು ನೀಡಿದ್ದು, ಆ ಮೇರೆಗೆ ಶಿಲ್ಪಾ ಮೇಲೆ ಎಫ್​ಐಆರ್​ ದಾಖಲಾಗಿದೆ.
ಶಿಲ್ಪಾ ಸಿಂಗ್​ ಏಪ್ರಿಲ್​ 21ರಂದು ಫೇಸ್​ಬುಕ್​ನಲ್ಲಿ ಹೀಗೆ ಮಾಂಗಲ್ಯ ಸೂತ್ರವನ್ನು ಅವಮಾನಿಸಿ ಪೋಸ್ಟ್​ ಮಾಡಿದ್ದರು. ಎಫ್ಐಆರ್​ ದಾಖಲಾಗುವ ಕೆಲಗಂಟೆಗಳ ಮುನ್ನ ಆ ಬಗ್ಗೆ ಆಕೆ ಕ್ಷಮೆ ಯಾಚಿಸಿದ್ದರು. ಪುರುಷಪ್ರಧಾನ ಸಮಾಜವನ್ನು ತಿಳಿಸುವ ಭರದಲ್ಲಿ ಹಾಗೆ ಹೇಳಿದ್ದೆ ಎಂಬ ಸ್ಪಷ್ಟನೆಯನ್ನೂ ನೀಡಿದ್ದರು.
ಇನ್ನು ಶಿಲ್ಪಾ ಅವರನ್ನು ತರಾಟೆಗೆ ತೆಗೆದುಕೊಂಡು ಝಾ ಅಕ್ಟೋಬರ್​ 30ರಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ಶಿಲ್ಪಾ ಕೂಡ ದೂರು ದಾಖಲಿಸಿದ್ದಾರೆ. ಇಬ್ಬರ ಮೇಲೂ ಎಫ್​​ಐಆರ್​ ದಾಖಲಾಗಿದ್ದು, ಆ ಮೇರೆಗೆ ತನಿಖೆ ನಡೆಯಲಿದೆ ಎಂದು ಉತ್ತರ ಗೋವಾದ ಎಸ್​ಪಿ ಉತ್ಕೃಷ್ಠ್ ಪ್ರಸೂನ್ ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 2 =
Remember me
