ಮುಂಬೈ:ಕಳೆದ ಎರಡು ದಿನಗಳ ಹಿಂದೆ ಮಾಡೆಲ್ ಮತ್ತು ಬಾಲಿವುಡ್​ ನಟಿ ಪೂನಂ ಪಾಂಡೆ ಸತ್ತಿರುವ ವಿಚಾರ ಸೋಷಿಯಲ್ ಮೀಡಿಯಾ ಮುಖಾಂತರ ಜಾಗತಿಕವಾಗಿ ಹರಿದಾಡಿದ್ದು, ಇದರಿಂದ ತೀವ್ರ ಆಘಾತಕ್ಕೊಳಗಾದ ಅಭಿಮಾನಿಗಳು ಮತ್ತು ಚಿತ್ರರಂಗದವರು, ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಕಂಬನಿ ಮಿಡಿದರು. ಇದೆಲ್ಲದರ ಮಧ್ಯೆ ಅಸಲಿಗೆ ಇದು ನಿಜವೇ ಎಂಬುದನ್ನು ತಿಳಿಯಲು ಹಲವರು ಪ್ರಯತ್ನಿಸಿದಾಗ, ಆಕೆಯ ಮ್ಯಾನೇಜರ್​ ಕೂಡ ಅವರು ಮೃತಪಟ್ಟಿರುವುದು ಸತ್ಯ ಎಂದೇ ಹೇಳಿದ ಬಳಿಕ ಇದು ಅಧಿಕೃತ ಎಂದು ದೃಢವಾಯಿತು. ಆದರೆ ಅದಾದ ಬಳಿಕ ನಡೆದಿದ್ದೇ ಅಚ್ಚರಿ!
ಇದನ್ನೂ ಓದಿ:ಗ್ರಾಮೀಣ ಪ್ರದೇಶದಲ್ಲಿ ಕ್ಯಾನ್ಸರ್ ತಪಾಸಣೆಗೆ ಒತ್ತು: ಸಚಿವ ದಿನೇಶ್ ಗುಂಡೂರಾವ್
ದೇಶವ್ಯಾಪಿ ನಟಿ ಗರ್ಭಕಂಠದ ಕ್ಯಾನ್ಸರ್​ಗೆ ತುತ್ತಾಗಿದ್ದು ಅತೀವ ದುಃಖ ತಂದಿದೆ ಎಂದು ಕಂಬನಿ ಮಿಡಿದರು. ಈ ಕುರಿತು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದರು. ಆದ್ರೆ, ಇದಾದ ಒಂದು ದಿನದ ಬಳಿಕ ಅಚ್ಚರಿ ಎಂಬಂತೆ ಸ್ವತಃ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡ ಪೂನಂ, ಅಸಲಿಗೆ ತಾನು ಸತ್ತಿಲ್ಲ ಇನ್ನು ಜೀವಂತವಾಗಿದ್ದೇನೆ ಎಂದು ದೃಢಪಡಿಸಿದರು.
ಸ್ವತಃ ಪೂನಂ ಪಾಂಡೆ ತನ್ನ ಸಾವಿನ ಸುದ್ದಿ ಸುಳ್ಳು, ಇದು ಪಬ್ಲಿಸಿಟಿ ಸ್ಟಂಟ್​ಗಾಗಿ ಮಾಡಿದ್ದು ಎಂದು ಹೇಳಿದ ಕೂಡಲೇ ನೆಟ್ಟಿಗರು ತೀವ್ರ ಅಕ್ರೋಶ ವ್ಯಕ್ತಪಡಿಸಿದರು. ಇಂತಹ ಮಾತು ಹೇಳಲು ಹೇಗೆ ಮನಸು ಬರುತ್ತೆ? ಯಾಕೆ ಈ ರೀತಿಯಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡುತ್ತೀರಿ? ಇದು ಅಕ್ಷಮ್ಯ, ನಿಮ್ಮಂತವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದರು. ಇದೀಗ ಅದರಂತೆಯೇ ಪೊಲೀಸರು ನಟಿಯ ಮ್ಯಾನೇಜರ್​ ಮೇಲೆ ಎಫ್ಐಆರ್​ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅಪರಾಧಿಗಳ ಕೈಯಲ್ಲಿ ಕಾರು ತಳ್ಳಿಸಿದ ಪೊಲೀಸರು! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಪೂನಂ ಹಾಗೂ ಆಕೆಯ ಸಾವಿನ ಸುಳ್ಳು ಸುದ್ದಿ ಹಬ್ಬಿಸಿದ ಮ್ಯಾನೇಜರ್ ನಿಕಿತಾ ಶರ್ಮಾ ವಿರುದ್ಧ ವಕೀಲ ಅಲಿ ಕಾಶಿಫ್ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).
‘ಶಾಲೆಗಳಿಗೆ ಕೇಂದ್ರ ವ್ಯಯಿಸೋದು 4%, ನಾವು ಮಾಡೋದು 40%! ಪ್ರಧಾನಿ ವಿರುದ್ಧ ದೆಹಲಿ ಸಿಎಂ ವಾಗ್ದಾಳಿ
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nineteen + 11 =
Remember me
