ನವದೆಹಲಿ:ಕೊವಿಡ್-19ಗೆ ಕರೊನಿಲ್​ ಎಂಬ ಔಷಧಿ ಕಂಡು ಹಿಡಿದಿದ್ದೇವೆ. ಈ ಔಷಧಿಯಲ್ಲಿ ಸೋಂಕು ನಿವಾರಣೆಯಾಗುತ್ತದೆ ಎಂದು ಯೋಗಗುರು ಬಾಬಾ ರಾಮ್​ದೇವ್​ ಅವರ ಪತಂಜಲಿ ಸಂಸ್ಥೆ ಹೇಳಿಕೊಂಡಿದೆ. ಆದರೆ ಕರೊನಿಲ್​​ಗೆ ಸರ್ಕಾರ ಮನೆ ಹಾಕಲಿಲ್ಲ. ಅದರ ಕ್ಲಿನಿಕಲ್​ ಟ್ರಯಲ್​ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಕೆಲವು ಸಚಿವರಂತೂ ಯೋಗಗುರು ಬಾಬಾ ರಾಮ್​ದೇವ್​ಗೆ ಖಡಕ್​ ವಾರ್ನ್​ ಮಾಡಿದ್ದಾರೆ. ಯಾವ ಕಾರಣಕ್ಕೂ ನಿಮ್ಮ ಔಷಧಿ ಮಾರಲು ಬಿಡುವುದಿಲ್ಲ. ಜನರ ಜೀವದ ಜತೆ ಚೆಲ್ಲಾಟ ಬೇಡ. ಇದೊಂದು ನಕಲಿ ಔಷಧಿ ಎಂದು ಹೇಳಿದ್ದಾರೆ.ಇದೀಗ ಈ ವಿವಾದ ಮತ್ತೊಂದು ಹಂತಕ್ಕೆ ಹೋಗಿದೆ. ಕೊವಿಡ್​-19ಗೆ ಔಷಧಿ ಕಂಡುಹಿಡಿದಿದ್ದೇವೆ ಎಂದು ಪ್ರತಿಪಾದಿಸುತ್ತಿರುವ ಬಾಬಾ ರಾಮ್​ ದೇವ್​ ಹಾಗೂ ಪತಂಜಲಿ ಯೋಗ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಸೇರಿ ಒಟ್ಟು ಆರು ಮಂದಿಯ ವಿರುದ್ಧ ಜೈಪುರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.
ಕರೊನಿಲ್​ನಿಂದ ಕರೊನಾ ಸೋಂಕು ನಿವಾರಣೆಯಾಗುತ್ತದೆ ಎಂದು ಪ್ರಚಾರ ಮಾಡುತ್ತಿರುವ ಪತಂಜಲಿ ಸಂಸ್ಥೆ ಜನರನ್ನು ದಾರಿತಪ್ಪಿಸುತ್ತಿದೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
ಜೈಪುರದ ಜ್ಯೋತಿನಗರ ಪೊಲೀಸ್​ ಠಾಣೆಯಲ್ಲಿ ಬಾಬಾ ರಾಮ್​ದೇವ್​, ಡಾ. ಆಚಾರ್ಯ ಬಾಲಕೃಷ್ಣನ್​, ಅನುರಾಗ್ ವರ್ಷನೆ, ಜೈಪುರ ನಿಜಾಮ್ಸ್​ ಇನ್ಸ್ಟ್ರಿಟ್ಯೂಶನ್​ ಆಫ್​ ಮೆಡಿಕಲ್​ ಇನ್ಸ್ಟಿಟ್ಯೂಟ್​​ನ ಬಲ್​ಬೀರ್​ ಸಿಂಗ್​ ತೋಮಾರ್​ ಮತ್ತು ನಿರ್ದೇಶಕ ಅನುರಾಗ್​ ತೋಮಾರ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ:ಲಾಕ್​ಡೌನ್​​ನಲ್ಲಿ ಪೊಲೀಸ್​ ಪೇದೆಯ ಕ್ರೂರತನ; 13 ವರ್ಷದ ಬಾಲಕಿ ಮೇಲೆ ರೇಪ್​
ಕರೊನಿಲ್​​ನ್ನು ಕರೊನಾ ಸೋಂಕಿತರ ಮೇಲೆ ಪ್ರಯೋಗ ಮಾಡಲು ನಾವು ಅನುಮತಿ ಪಡೆದಿದ್ದೇವೆ. ಭಾರತೀಯ ವೈದ್ಯಕೀಯ ಮಂಡಳಿಯ ಅಂಗಸಂಸ್ಥೆಯಾಗಿರುವ ಸಿಟಿಐಆರ್​ ಅನುಮತಿ ನೀಡಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳೂ ನಮ್ಮ ಬಳಿ ಇವೆ. ಜೈಪುರದ ನಿಮ್ಸ್​​ನಲ್ಲಿ 100 ಕರೊನಾ ರೋಗಿಗಳ ಮೇಲೆ ಈ ಔಷಧಿ ಪ್ರಯೋಗ ಮಾಡಲಾಗಿದೆ. ಶೇ.69ರಷ್ಟು ಜನ ಮೂರೇ ದಿನಗಳಲ್ಲಿ ಕರೊನಾ ಮುಕ್ತರಾಗಿದ್ದಾರೆ. ಮತ್ತೂ ಹಲವು ಮಂದಿ ಏಳು ದಿನಗಳಲ್ಲಿ ಗುಣಮುಖರಾಗಿದ್ದಾರೆ ಎಂದು ನಿಮ್ಸ್​ ನಿರ್ದೇಶಕ ಬಲಬೀರ್​ ತೋಮಾರ್​ ಹೇಳಿದ್ದರು.ಇದನ್ನೂ ಓದಿ:ಪತಂಜಲಿಯಿಂದ “ಕರೊನಿಲ್​” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!
ಆದರೆ ನಂತರ ನಡೆದ ಹಲವು ಬೆಳವಣಿಗೆಗಳಲ್ಲಿ ಪತಂಜಲಿ ಸಂಸ್ಥೆಗೆ ಹಿನ್ನಡೆ ಆಗಿದೆ. ಆಯುಷ್​ ಇಲಾಖೆ ಅಂತರ ಕಾಯ್ದುಕೊಂಡಿದ್ದಲ್ಲದೆ, ಕ್ಲಿನಿಕಲ್​ ಪ್ರಯೋಗ ನಡೆಸಿದ ಬಗ್ಗೆ ಎಲ್ಲ ರೀತಿಯ ದಾಖಲೆ, ಮಾಹಿತಿಯನ್ನೂ ನೀಡಬೇಕು ಎಂದು ಹೇಳಿದೆ.ಈ ಮಧ್ಯೆ ಪತಂಜಲಿ ಯೋಗ ಸಂಸ್ಥೆ ಸುಮ್ಮನೆ ಪ್ರಚಾರ ಪಡೆಯುತ್ತ, ಜನರ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಬಿಹಾರ್​ ಕೋರ್ಟ್​​ನಲ್ಲೂ ಕೇಸ್​ ದಾಖಲಾಗಿದ್ದು, ಅದರ ವಿಚಾರಣೆ ಜೂ.30ರಂದು ನಡೆಯಲಿದೆ. ರಾಜಸ್ಥಾನ ಸರ್ಕಾರ ಕೂಡ ಪತಂಜಲಿ ಸಂಸ್ಥೆಗೆ ನೋಟಿಸ್​ ನೀಡಿ, ಕ್ಲಿನಿಕಲ್​ ಟ್ರಯಲ್​ನ ಸಮಗ್ರ ಮಾಹಿತಿ ನೀಡಿ ಎಂದು ಸೂಚಿಸಿದೆ. (ಏಜೆನ್ಸೀಸ್​)
‘ಮನೆಯ ಕಿಟಕಿ ಮುಚ್ಚಿರಲಿ…ಪಾತ್ರೆ, ಡ್ರಮ್​​ಗಳನ್ನು ಬಡಿಯಿರಿ…’: ಈ ಸಲಹೆ ಯಾಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 11 =
Remember me
