ಕಲಬುರಗಿ:ಇಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದಿ ವಿರೋಧಿ ಪ್ರತಿಭಟನೆಯಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡಿದ್ದ ಎಐಎಂಐಎಂ ಮುಖ್ಯಸ್ಥ ವಾರಿಸ್ ಪಠಾಣ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಹಿರಿಯ ವಕೀಲರೋರ್ವರು ನೀಡಿದ್ದ ದೂರಿನ ಅನ್ವಯ ಕಲಬುರಗಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಫೆ.19ರಂದು ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಐಎಂಐಎಂ ಮುಖ್ಯಸ್ಥ ವಾರಿಸ್​, ದೇಶದಲ್ಲಿ ಮುಸ್ಲಿಮರು 15 ಕೋಟಿ ಇರಬಹುದು. ಆದರೆ ಈ 15 ಕೋಟಿ ಮಂದಿ 100 ಕೋಟಿ ಹಿಂದುಗಳಿಗೆ ಸರಿಸಮಾನ ಎಂದು ಹೇಳಿದ್ದರು.
ನಾವೆಲ್ಲರೂ ಒಗ್ಗಟ್ಟಾಗಿ ಸಾಗಬೇಕು. ನಮ್ಮ ಸ್ವಾತಂತ್ರ್ಯವನ್ನು ನಾವು ಪಡೆಯಬೇಕು. ಇದನ್ನೆಲ್ಲ ಕೇಳಿ ತೆಗೆದುಕೊಳ್ಳುವುದಲ್ಲ. ಬಲವಂತವಾಗಿ ಕಿತ್ತುಕೊಳ್ಳಬೇಕು. ನಾವು 15 ಕೋಟಿ ಮಂದಿ ಇರಬಹುದು. ಆದರೆ 100 ಕೋಟಿ ಇರುವ ಹಿಂದುಗಳಿಗಿಂತ ನಮ್ಮ ತೂಕ ಹೆಚ್ಚು. ಇದನ್ನು ನೆನಪಿಟ್ಟುಕೊಳ್ಳಿ ಎಂದು ಪಠಾಣ್​ ಜನರನ್ನು ಪ್ರಚೋದಿಸುತ್ತಿರುವ ವಿಡಿಯೋ ವೈರಲ್​ ಆಗಿತ್ತು.
ಈ ಭಾಷಣಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ವಕೀಲರೊಬ್ಬರು ಕಲಬುರಗಿ ಪೊಲೀಸರಿಗೆ ದೂರು ನೀಡಿದ್ದರು.ವಿವಾದ ಉಂಟಾಗುತ್ತಿದ್ದಂತೆ ವಾರಿಸ್ ಪಠಾಣ್​ ಅವರು ತಮ್ಮ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಹೇಳಿದ್ದರು. ವಾರಿಸ್​ ಬಳಿ ಈ ಬಗ್ಗೆ ವಿವರಣೆ ಕೇಳಲಾಗುವುದು ಎಂದು ಎಐಎಂಐಎಂ ಪಕ್ಷ ಹೇಳಿದೆ.
ಇದೀಗ ವಾರಿಸ್ ಮಾತುಗಳು ಗಲಭೆ ಸೃಷ್ಟಿಸುವ ರೀತಿಯದ್ದಾಗಿದ್ದು ಸಮುದಾಯಗಳ ಮಧ್ಯ ಶತೃತ್ವ ಹುಟ್ಟಿಸುವಂತಹವುಗಳು ಎಂಬ ಆರೋಪದಡಿ ಎಫ್​ಐಆರ್​ ದಾಖಲಾಗಿದೆ. (ಏಜೆನ್ಸೀಸ್​)
#WATCHAIMIM leader Waris Pathan: …They tell us that we've kept our women in the front – only the lionesses have come out&you're already sweating. You can understand what would happen if all of us come together. 15 cr hain magar 100 ke upar bhaari hain, ye yaad rakh lena.(15.2)pic.twitter.com/KO8kqHm6Kg
— ANI (@ANI)February 20, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
