ಉತ್ತರಪ್ರದೇಶ:ನಿಷೇಧಿತ ಹಾವುಗಳನ್ನು ಬಳಸಿಕೊಂಡು ರೇವ್ ಪಾರ್ಟಿ ಆಯೋಜಿಸಿದ್ದಕ್ಕಾಗಿ ಬಿಗ್​ ಬಾಸ್​ ಒಟಿಟಿ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದ್ದು, ವಿಚಾರಣೆ ಆರಂಭಗೊಂಡಿದೆ.
ಇದನ್ನೂ ಓದಿ:ನ.4ರಂದು ಪಿಇಎಸ್ ಕಾಲೇಜಿನಲ್ಲಿ ಪದವಿ ಪ್ರದಾನ: ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ ಮಾಹಿತಿ
ಬಿಗ್ ಬಾಸ್ ಒಟಿಟಿಯ ಎರಡನೇ ಸೀಸನ್ ಗೆದ್ದ ಜನಪ್ರಿಯ ಯೂಟ್ಯೂಬರ್ ಎಲ್ವಿಶ್ ಯಾದವ್ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಎಲ್ವಿಶ್ ಆಯೋಜಿಸಿದ್ದ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ನೋಯ್ಡಾ ಪೊಲೀಸರು ಸದ್ಯ ಅವರನ್ನು ಬಂಧಿಸಿದ್ದಾರೆ.
ಸೆಕ್ಟರ್ 49 ರಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿದ ನಂತರ ಐಪಿಸಿ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. “ಉತ್ತರಪ್ರದೇಶದ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಲಭ್ಯವಾಗುವಂತೆ ಮಾಡಿದ್ದಕ್ಕಾಗಿ ಯೂಟ್ಯೂಬರ್ ಮತ್ತು ಬಿಗ್ಬಾಸ್ ವಿಜೇತ ಎಲ್ವಿಶ್ ಯಾದವ್ ಸೇರಿದಂತೆ ಆರು ಜನರ ವಿರುದ್ಧ ನೋಯ್ಡಾ ಸೆಕ್ಟರ್ 49 ರಲ್ಲಿ ಪೊಲೀಸರು ಎಫ್‌ಐಆರ್ ರಿಜಿಸ್ಟರ್​ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕನ್ನಡ ನಾಡೆಂದು ಮರುನಾಮಕರಣ ಮಾಡಿ, ಸರ್ವಾಂಗೀಣ ಜಿಲ್ಲಾಭಿವೃದ್ಧಿ ಹೋರಾಟ ಸಮಿತಿ ಮನವಿ
ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಭಾರಿ ಮೊತ್ತವನ್ನು ಸಂಗ್ರಹಿಸುತ್ತಿದ್ದರು. ದಾಳಿಯಲ್ಲಿ ಒಂಬತ್ತು ಹಾವುಗಳನ್ನು ಸಹ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೇವ್ ಪಾರ್ಟಿ ಪ್ರಕರಣದಲ್ಲಿ ತನ್ನ ವಿರುದ್ಧದ ಎಫ್‌ಐಆರ್‌ಗೆ ಎಲ್ವಿಶ್ ಯಾದವ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
“ನನ್ನ ವಿರುದ್ಧ ಇಂದು ಬೆಳಗ್ಗೆಯಿಂದ ಪ್ರಕಟವಾದ ಬಹಳಷ್ಟು ಸುದ್ದಿಗಳನ್ನು ನಾನು ನೋಡಿದೆ. ಆ ಎಲ್ಲಾ ಆರೋಪಗಳು ನಕಲಿ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಈ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ” ಎಂದು ಎಲ್ವಿಶ್ ಯಾದವ್ ತಮ್ಮ ವಿರುದ್ಧ ಕೇಳಿಬಂದ ಆರೋಪಗಳನ್ನು ತಳ್ಳಿಹಾಕಿದ್ದಾರೆ.
Uttar Pradesh Police registers FIR against YouTuber and Bigg Boss winner Elvish Yadav, for making available snake venom at rave parties
BJP MP and founder of People for Animals (PFA), Maneka Gandhi says, "He should be arrested immediately. This is a grade-I crime – that means…pic.twitter.com/26qX6gciG3
— ANI (@ANI)November 3, 2023

ಈ ಬಗ್ಗೆ ಮಾತನಾಡಿದ ಬಿಜೆಪಿ ಸಂಸದೆ ಮತ್ತು ಪೀಪಲ್ ಫಾರ್ ಅನಿಮಲ್ಸ್ (PFA) ಸಂಸ್ಥಾಪಕಿ ಮೇನಕಾ ಗಾಂಧಿ, “ಆತನನ್ನು ತಕ್ಷಣವೇ ಬಂಧಿಸಬೇಕು. ಇದು ಗ್ರೇಡ್-1 ಅಪರಾಧ, ಅಂದರೆ ಏಳು ವರ್ಷಗಳ ಜೈಲು ಶಿಕ್ಷೆ. ಪಿಎಫ್‌ಎ ಬಲೆ ಬೀಸಿ ಈ ಜನರನ್ನು ಹಿಡಿದಿದೆ. ಅವನ ವೀಡಿಯೊಗಳಲ್ಲಿ ಅಳಿವಿನಂಚಿನಲ್ಲಿರುವ ಹಾವುಗಳನ್ನು ಬಳಸಿರುವುದು ಕಂಡುಬಂದಿದೆ. ಈತ ನೋಯ್ಡಾ ಮತ್ತು ಗುರುಗ್ರಾಮ್‌ನಲ್ಲಿ ಹಾವಿನ ವಿಷವನ್ನು ಮಾರಾಟ ಮಾಡಿದ್ದಾನೆ ಎಂಬುದು ನಮಗೆ ತಿಳಿದುಬಂದಿದೆ” ಎಂದು ಹೇಳಿದ್ದಾರೆ.
BBKS10: ಆರದ ಕಿಚ್ಚು!; ‘ನಾವು ಆನೆ ವಿರೋಧಿಗಳಲ್ಲ’ ಎಂದ ಸಂಗೀತಾ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 3 =
Remember me
